ಕರ್ನಾಟಕ

karnataka

ETV Bharat / business

ನಿತ್ಯ 10 ನಿಮಿಷ ತರಬೇತಿಯಿಂದ ವಿಡಿಯೋ ಗೇಮರ್​ಗಳ​ ಎಸ್ಪೋರ್ಟ್​ ಕೌಶಲ್ಯ ವೃದ್ಧಿ.. ಅಧ್ಯಯನ

ಅನನುಭವಿ ಗೇಮರುಗಳಿಗೆ ತರಬೇತಿ ಅವಧಿಗಳಿಗೆ 20 ನಿಮಿಷಗಳ ಮೊದಲು ಟ್ರಾನ್ಸ್‌ಕ್ರಾನಿಯಲ್ ಡೈರೆಕ್ಟ್ ಕರೆಂಟ್ ಸ್ಟಿಮ್ಯುಲೇಷನ್ (ಟಿಡಿಸಿಎಸ್) ತಲುಪಿಸುವ ಕಸ್ಟಮ್ ಹೆಡ್‌ಸೆಟ್ ಧರಿಸಿದಾಗ ಹೆಚ್ಚಿನ ಲಾಭವಾಯಿತು ಎಂಬುದು ಅಧ್ಯಯನದಲ್ಲಿ ಉಲ್ಲೇಖವಾಗಿದೆ..

gaming
gaming

By

Published : Apr 3, 2021, 2:38 PM IST

ಲಂಡನ್ :ವಿಡಿಯೋ ಗೇಮರುಗಳು ದಿನಕ್ಕೆ ಕೇವಲ 10 ನಿಮಿಷಗಳ ಕಾಲ ತರಬೇತಿ ನೀಡುವ ಮೂಲಕ ತಮ್ಮ ಎಸ್ಪೋರ್ಟ್ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಬಹುದು ಎಂದು ಹೊಸ ಅಧ್ಯಯನ ಬಹಿರಂಗಪಡಿಸಿದೆ.

ತರಬೇತಿಯ ಮೊದಲು ತಮ್ಮ ಮೋಟಾರು ಕಾರ್ಟೆಕ್ಸ್‌ನ ಮೇಲೆ ಟಿಡಿಸಿಎಸ್ ಪಡೆದ ಅನನುಭವಿ ಗೇಮರುಗಳಿಗೆ ಐದು ದಿನಗಳ ಅವಧಿಯಲ್ಲಿ ನಿರ್ದಿಷ್ಟ ಕಾರ್ಯದಲ್ಲಿ ತಮ್ಮ ಕಾರ್ಯಕ್ಷಮತೆ ಸುಧಾರಿಸಿದ್ದಾರೆ ಎಂದು ಅಧ್ಯಯನ ಕಂಡು ಹಿಡಿದಿದೆ.

ಯಾವುದೇ ಪ್ರಚೋದನೆ ಅನುಸರಿಸಿ ತರಬೇತಿ ಪಡೆದ ಹೊಸ ವಿದ್ಯಾರ್ಥಿಗಳಿಗಿಂತ ಈ ವಿಧಾನದಲ್ಲಿ ಗಮನಾರ್ಹವಾಗಿ ಕೌಶಲ್ಯ ವೃದ್ಧಿಸಿದೆ ಎಂದು ಲೆರೋನ ಎಸ್ಪೋರ್ಟ್ಸ್ ಸೈನ್ಸ್ ರಿಸರ್ಚ್ ಲ್ಯಾಬ್ (ಇಎಸ್ಆರ್​ಎಲ್) ನಿರ್ದೇಶಕ ಸಂಶೋಧಕ ಮಾರ್ಕ್ ಕ್ಯಾಂಪ್ಬೆಲ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಶೇ 74ರಷ್ಟು ಐಟಿ ಸಂಸ್ಥೆಗಳು 'ರ‍್ಯಾನ್​ಸಮ್‌ವೇರ್‌' ದಾಳಿಗೆ ತುತ್ತು!

ಅನನುಭವಿ ಗೇಮರುಗಳಿಗೆ ತರಬೇತಿ ಅವಧಿಗಳಿಗೆ 20 ನಿಮಿಷಗಳ ಮೊದಲು ಟ್ರಾನ್ಸ್‌ಕ್ರಾನಿಯಲ್ ಡೈರೆಕ್ಟ್ ಕರೆಂಟ್ ಸ್ಟಿಮ್ಯುಲೇಷನ್ (ಟಿಡಿಸಿಎಸ್) ತಲುಪಿಸುವ ಕಸ್ಟಮ್ ಹೆಡ್‌ಸೆಟ್ ಧರಿಸಿದಾಗ ಹೆಚ್ಚಿನ ಲಾಭವಾಯಿತು ಎಂಬುದು ಅಧ್ಯಯನದಲ್ಲಿ ಉಲ್ಲೇಖವಾಗಿದೆ.

ಕಂಪ್ಯೂಟರ್ಸ್ ಇನ್ ಹ್ಯೂಮನ್ ಬಿಹೇವಿಯರ್ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನಕ್ಕಾಗಿ ಭಾಗವಹಿಸುವವರು ಟ್ರಾನ್ಸ್​ಕ್ರನಿಯಲ್ ಡೈರೆಕ್ಟ್ ಕರೆಂಟ್ ಸ್ಟಿಮ್ಯುಲೇಷನ್ (ಟಿಡಿಸಿಎಸ್) ತಲುಪಿಸಲು ವಿನ್ಯಾಸಗೊಳಿಸಲಾದ ಕಸ್ಟಮ್ ಹೆಡ್ಸೆಟ್ ಧರಿಸಿದ್ದರು. ಕೆಲವರು ಯಾವುದೇ ಪ್ರಚೋದನೆ ಪಡೆಯಲಿಲ್ಲ. ಇತರರು ಕೇವಲ 'ಶಾಮ್' ಚಿಕಿತ್ಸೆ ಪಡೆದರು. ಉಳಿದವರು 20 ನಿಮಿಷಗಳ ಮಾನ್ಯತೆ ಪಡೆದರು.

ABOUT THE AUTHOR

...view details