ನವದೆಹಲಿ :ಕಳೆದ ತಿಂಗಳು ಬಂಪರ್ ಐಪಿಒಗೆ ಸಾಕ್ಷಿಯಾದ ಆಹಾರ ವಿತರಣಾ ವೇದಿಕೆ ಜೊಮ್ಯಾಟೊ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಕ್ಯೂ 1) ಗಮನಾರ್ಹ ನಷ್ಟ ಅನುಭವಿಸಿದೆ.
ಜೂನ್ ತ್ರೈಮಾಸಿಕದಲ್ಲಿ ಕಂಪನಿಯು $48 ಮಿಲಿಯನ್ ನಿವ್ವಳ ನಷ್ಟವನ್ನು ವರದಿ ಮಾಡಿದ್ದು, ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಸುಮಾರು $13.5 ಮಿಲಿಯನ್ ಆಗಿತ್ತು. ಕಂಪನಿಯ ಪ್ರಕಾರ, Q1 FY22ರಲ್ಲಿ ನಗದು ರಹಿತ ESOP ವೆಚ್ಚಗಳು ಹೆಚ್ಚಾದ ಕಾರಣ ನಷ್ಟ ಸಂಭವಿಸಿದೆ.
"ವರದಿಯಾದ ಲಾಭ/ನಷ್ಟ ಮತ್ತು ಹೊಂದಾಣಿಕೆಯ ಇಬಿಐಟಿಡಿಎ ಈ ವ್ಯತ್ಯಾಸವು ಮುಂದುವರಿಯುತ್ತದೆ" ಎಂದು ಕಂಪನಿಯು ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ. ಜೂನ್ ತ್ರೈಮಾಸಿಕದಲ್ಲಿ ಜೊಮ್ಯಾಟೊದ ಆದಾಯವು ರೂ. 591.9 ಕೋಟಿಯಿಂದ ರೂ. 757.9 ಕೋಟಿಗೆ ಏರಿಕೆಯಾಗಿದೆ. ಕಂಪನಿಯು ಕಳೆದ ತ್ರೈಮಾಸಿಕದಲ್ಲಿ 100 ದಶಲಕ್ಷಕ್ಕೂ ಹೆಚ್ಚು ಫುಡ್ ಡೆಲಿವರಿ ನೀಡಿದೆ.
"Q1 FY22 ಕೂಡ ನಮ್ಮ ತಂಡಕ್ಕೆ ಅತ್ಯಂತ ಸವಾಲಿನ ಕ್ವಾರ್ಟರ್‌ಗಳಲ್ಲಿ ಒಂದಾಗಿದೆ. 2ನೇ ಕೋವಿಡ್ ಅಲೆ ಇಡೀ ದೇಶದ ಮೇಲೆ ಪರಿಣಾಮ ಬೀರಿದ್ದು, ನಾವು ಕೂಡ ಕೆಲಸ ಮಾಡಲು ಪರದಾಡುತ್ತಿದ್ದೆವು" ಎಂದು ಜೊಮ್ಯಾಟೊ ಹೇಳಿದೆ.