ನವದೆಹಲಿ:ತನ್ನ ಹೆಸರು ಮತ್ತು ಲೋಗೋ ಬಳಸಿ ನಕಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ವಿತರಣೆ ಆಗುತ್ತಿರುವ ಬಗ್ಗೆ ವಿಶ್ವ ಬ್ಯಾಂಕ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಕ್ರೆಡಿಟ್, ಡೆಬಿಟ್ ಕಾರ್ಡ್ ವಂಚನೆ: ಭಾರತೀಯರಿಗೆ ಎಚ್ಚರಿಕೆ ನೀಡಿದ ವಿಶ್ವಬ್ಯಾಂಕ್
ಭಾರತದಲ್ಲಿ ವಿಶ್ವ ಬ್ಯಾಂಕ್ನ ಹೆಸರು ಮತ್ತು ಲೋಗೋ ಬಳಸಿ ನಕಲಿ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳು ವಿತರಣೆಯಾಗುವ ಘಟನೆಗಳು ಬೆಳಕಿಗೆ ಬಂದಿದ್ದು, ದೇಶದ ಜನರು ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ವರ್ಲ್ಡ್ ಬ್ಯಾಂಕ್ ಸೂಚಿಸಿದೆ.
ಭಾರತದಲ್ಲಿ ಇಂತಹ ಘಟನೆಗಳು ಬೆಳಕಿಗೆ ಬಂದ ಬಳಿಕ ವರ್ಲ್ಡ್ ಬ್ಯಾಂಕ್ ಸಲಹೆಗಳನ್ನು ನೀಡುತ್ತಿದೆ. "ವಿಶ್ವ ಬ್ಯಾಂಕ್ ಯಾವುದೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವುದಿಲ್ಲ. ನಕಲಿ ಕಾರ್ಡ್‌ಗಳನ್ನು ನೀಡಿದ ವ್ಯಕ್ತಿಗಳು / ಸಂಸ್ಥೆಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಇಂತಹ ವಂಚನೆಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರುವಂತೆ ತಿಳಿಸಲು ನಾವು ಬಯಸುತ್ತೇವೆ" ಎಂದು ವರ್ಲ್ಡ್ ಬ್ಯಾಂಕ್ ಸ್ಪಷ್ಟಪಡಿಸಿದೆ.
"ವಿಶ್ವ ಬ್ಯಾಂಕ್ನ ಕಾರ್ಯಕ್ರಮಗಳು ಮತ್ತು ನೀತಿಗಳ ಬಗೆಗಿನ ನಿಖರ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ www.worldbank.org ಗೆ ಮುಕ್ತವಾಗಿ ಭೇಟಿ ನೀಡಿ" ಎಂದು ಬ್ಯಾಂಕ್ ತಿಳಿಸಿದೆ.