ಕರ್ನಾಟಕ

karnataka

ETV Bharat / business

ಉದ್ಯೋಗಸ್ಥ ನಾರಿಯ ಮೇಲೆ ಮತ್ತಷ್ಟು ಜವಾಬ್ದಾರಿ ಭಾರ ಹೊರಿಸಿದ ಕೊರೊನಾ- ವರದಿ - ಕೋವಿಡ್ 19 ಸಾಂಕ್ರಾಮಿಕ

ಡೆಲೊಯಿಟ್ ಗ್ಲೋಬಲ್ ವರದಿಯು 'ಮಹಿಳಾ @ ಕೆಲಸ: ಜಾಗತಿಕ ದೃಷ್ಟಿಕೋನ' ಶೀರ್ಷಿಕೆಯಡಿ ಬುಧವಾರ ಬಿಡುಗಡೆಯಾಗಿದೆ. ಕೋವಿಡ್​-19 ಸಾಂಕ್ರಾಮಿಕ ಸಮಯದಲ್ಲಿ ಕೆಲಸದ ಹೊರೆಗಳು ಮತ್ತು ಮನೆಯ ಜವಾಬ್ದಾರಿಗಳು ದುಡಿಯುವ ಮಹಿಳೆಯರ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರುತ್ತಿವೆ. ಸಮೀಕ್ಷೆಗೆ ಒಳಪಟ್ಟವರ ಪೈಕಿ 51 ಪ್ರತಿಶತದಷ್ಟು ಜನರು ತಮ್ಮ ವೃತ್ತಿ ಜೀವನದ ಭವಿಷ್ಯದ ಬಗ್ಗೆ ಕಡಿಮೆ ಆಶಾವಾದಿಗಳಾಗಿದ್ದಾರೆ.

Women job
Women job

By

Published : May 19, 2021, 10:36 PM IST

ನವದೆಹಲಿ:ಕೋವಿಡ್​ -19 ಸಾಂಕ್ರಾಮಿಕ ರೋಗ ಪ್ರಾರಂಭ ಆದಾಗಿನಿಂದ ಕೆಲಸ ಮತ್ತು ಮನೆಯಲ್ಲಿ ಜವಾಬ್ದಾರಿಗಳು ತೀವ್ರವಾಗಿ ಹೆಚ್ಚಿವೆ. ಇದರ ಹೊರೆಯು ಮಹಿಳೆಯರ ಮೇಲೆ ಅಸಮಾನವಾಗಿ ಪರಿಣಾಮ ಬೀರುತ್ತಿದೆ ಎಂದು ಸಲಹಾ ಸಂಸ್ಥೆ ಡೆಲಾಯ್ಟ್‌ ತನ್ನ ವರದಿಯಲ್ಲಿ ತಿಳಿಸಿದೆ.

ಡೆಲೊಯಿಟ್ ಗ್ಲೋಬಲ್ ವರದಿಯು 'ಮಹಿಳಾ @ ಕೆಲಸ: ಜಾಗತಿಕ ದೃಷ್ಟಿಕೋನ' ಶೀರ್ಷಿಕೆಯಡಿ ಬುಧವಾರ ಬಿಡುಗಡೆಯಾಗಿದೆ. ಕೋವಿಡ್​-19 ಸಾಂಕ್ರಾಮಿಕ ಸಮಯದಲ್ಲಿ ಕೆಲಸದ ಹೊರೆಗಳು ಮತ್ತು ಮನೆಯ ಜವಾಬ್ದಾರಿಗಳು ದುಡಿಯುವ ಮಹಿಳೆಯರ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರುತ್ತಿವೆ. ಸಮೀಕ್ಷೆಗೆ ಒಳಪಟ್ಟವರ ಪೈಕಿ 51 ಪ್ರತಿಶತದಷ್ಟು ಜನರು ತಮ್ಮ ವೃತ್ತಿ ಜೀವನದ ಭವಿಷ್ಯದ ಬಗ್ಗೆ ಕಡಿಮೆ ಆಶಾವಾದಿಗಳಾಗಿದ್ದಾರೆ.

ಭಾರತದ 500 ಪ್ರತಿಸ್ಪಂದಕರು ಸೇರಿದಂತೆ 10 ದೇಶಗಳ 5,000 ಮಹಿಳೆಯರು ತಮ್ಮ ಅಭಿಪ್ರಾಯಗಳ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಉದ್ಯೋಗ ತೃಪ್ತಿ ಮತ್ತು ಮಾನಸಿಕ ಸ್ವಾಸ್ಥ್ಯವು ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಪರಿಣಾಮ ಬೀರಿದೆ ಎಂದು ಹೇಳಿದೆ.

ಕಳೆದ ವರ್ಷವು ಹೆಚ್ಚಿನ ಕೆಲಸದ ಹೊರೆ ಮತ್ತು ಮನೆಯಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ಎದುರಿಸುತ್ತಿರುವ ಅನೇಕ ಮಹಿಳೆಯರಿಗೆ ದೊಡ್ಡೆ ಹೊಡೆತ ಬಿದ್ದಂತಾಗಿದೆ. ಕೆಲಸ ಮತ್ತು ವೃತ್ತಿಯ ನಡುವಿನ ಗಡಿಗಳ ಮಸುಕುಗೊಳಿಸಿದೆ. ಕೆಲಸದಲ್ಲಿ ಅಂತರ್ಗತ ವರ್ತನೆಗಳ ಮುಂದುವರಿದ ಅನುಭವಗಳಾಗಿವೆ ಎಂದು ಡೆಲಾಯ್ಟ್ ಗ್ಲೋಬಲ್ ಇನ್‌ಕ್ಲೂಷನ್‌ನ ಎಮ್ಮಾ ಕಾಡ್ ಹೇಳಿದ್ದಾರೆ.

ಇದನ್ನೂ ಓದಿ: ಎಸ್​​ಬಿ ಎನರ್ಜಿ ಸ್ವಾಧೀನ: ಈಗ ಅದಾನಿ ಬಳಿ ಇಡೀ ಆಸ್ಟ್ರೇಲಿಯಾಗೇ ವಿದ್ಯುತ್ ಪೂರೈಸುವಷ್ಟು ಸೌರ ಶಕ್ತಿ!

ಭಾರತದಲ್ಲಿ ಸುಮಾರು 10ರಲ್ಲಿ 7 (69 ಪ್ರತಿಶತ) ಮಹಿಳೆಯರು ತಮ್ಮ ಉದ್ಯೋಗ ತೃಪ್ತಿಯನ್ನು ಉತ್ತಮ ಅಥವಾ ಅತ್ಯಂತ ಉತ್ತಮವಾದ ಎಂದು ಕೋವಿಡ್​ ಪೂರ್ವದಲ್ಲಿ ಒಪ್ಪಿಕೊಂಡಿದ್ದರು. ಪ್ರಸ್ತುತ, ಶೇ 28ರಷ್ಟು ಮಹಿಳೆಯರು ಮಾತ್ರ ತೃಪ್ತಿಕರವೆಂದಿದ್ದು, ಇದು ಸಾಂಕ್ರಾಮಿಕ ರೋಗಕ್ಕಿಂತ ಮೊದಲಿಗಿಂತ ಕಡಿಮೆಯಾಗಿದೆ.

ಭಾರತದಲ್ಲಿ ಸುಮಾರು 10ರಲ್ಲಿ 6 (57 ಪ್ರತಿಶತ) ಮಹಿಳೆಯರು ತಮ್ಮ ವೃತ್ತಿ ಜೀವನವು ತಾವು ಬಯಸಿದಷ್ಟು ವೇಗವಾಗಿ ಪ್ರಗತಿ ಸಾಧಿಸುತ್ತಿಲ್ಲ. ಇದು ಜಾಗತಿಕ ಸರಾಸರಿ ಶೇ 42ಕ್ಕಿಂತ ಹೆಚ್ಚಾಗಿದೆ. ಭಾರತದಲ್ಲಿ ಮಹಿಳೆಯರು ತಮ್ಮ ವೃತ್ತಿಜೀವನದ ಹಾದಿಗಳ ಬಗ್ಗೆ ಕೋವಿಡ್​-19 ಸಾಂಕ್ರಾಮಿಕ ರೋಗಕ್ಕಿಂತ ಮೊದಲಿಗಿಂತ ಕಡಿಮೆ ಭರವಸೆ ಹೊಂದಿದ್ದಾರೆ.

ABOUT THE AUTHOR

...view details