ಕರ್ನಾಟಕ

karnataka

ETV Bharat / business

ಚೀನಾದಿಂದ ಭಾರತಕ್ಕೆ ವಲಸೆ ಬರುವ ಕಂಪನಿಗಳಿಗೆ ರತ್ನಗಂಬಳಿ ಸಿದ್ಧ: ನಿರ್ಮಲಾ​ ಸೀತಾರಾಮನ್​

ಜಾಗತಿಕ ಮಟ್ಟದಲ್ಲಿ ಭಾರತಕ್ಕಿಂತ ವೇಗವಾಗಿ ಚೀನಾ ನಾಗಾಲೋಟದಲ್ಲಿ ಸಾಗುತ್ತಿದೆ. ಸ್ಥಳೀಯ ಚೀನಿ ಕಂಪನಿಗಳ ಜೊತೆಗೆ ಅಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ತಯಾರಿಕ ಘಟಕಗಳನ್ನು ಹೊಂದಿವೆ. ಇದರಲ್ಲಿನ ಅನೇಕ ಕಂಪನಿಗಳು ಈಗ ಚೀನಾದಿಂದ ಆಚೆ ಸೂಕ್ತ ಸ್ಥಳಗಳನ್ನು ಹುಡುಕುತ್ತಿವೆ. ಅವುಗಳ ಮುಂದಿನ ಆಯ್ಕೆ ಭಾರತವೇ ಆಗಿದೆ. ಹೀಗಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಭಾರತಕ್ಕೆ ವಲಸೆ ಬರುವ ಅಂತಾರಾಷ್ಟ್ರೀಯ ಕಂಪನಿಗಳಿಗೆ ಹೂಡಿಕೆ ಆದ್ಯತೆಯ ನೀಲ ನಕ್ಷೆ ಸಿದ್ಧಪಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Oct 20, 2019, 4:58 PM IST

ವಾಷಿಂಗ್ಟನ್​: ಭಾರತವನ್ನು ತಮ್ಮ ಹೂಡಿಕೆಯ ಆದ್ಯತೆಯ ತಾಣವನ್ನಾಗಿ ಮಾಡಿಕೊಳ್ಳಲು ಚೀನಾ ಗಡಿದಾಟಿ ವಲಸೆ ಬರುವ ಅಂತಾರಾಷ್ಟ್ರೀಯ ಕಂಪನಿಗಳಿಗೆ ನೀಲನಕ್ಷೆ ಸಿದ್ಧಪಡಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.

ಇಲ್ಲಿನ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್​) ಹಾಗೂ ವಿಶ್ವಬ್ಯಾಂಕ್​ನಲ್ಲಿ ಉದ್ಯಮಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಕಂಪನಿಗಳು ತಮ್ಮನ್ನು ಚೀನಾ ತನ್ನ ರಾಷ್ಟ್ರದಿಂದ ಹೊರಹಾಕಲಿದೆ ಎಂದು ಚಿಂತಿಸುತ್ತಿರುವ ಉದ್ಯಮದ ನಾಯಕರು ಖಂಡಿತವಾಗಿಯೂ ಭಾರತವನ್ನು ತಮ್ಮ ಹೂಡಿಕೆಯ ನೆಲೆಯಾಗಿ ನೋಡುತ್ತಿದ್ದಾರೆ ಎಂಬುದನ್ನು ನಾನು ಪರಿಗಣಿಸುತ್ತೇನೆ. ನಮ್ಮ ಸರ್ಕಾರವು ಸಾಕಷ್ಟು ಉದ್ಯಮಿ ಮುಖಂಡರನ್ನು ಭೇಟಿ ಮಾಡಿ ಭಾರತಕ್ಕೆ ಬರುವಂತೆ ಆಹ್ವಾನಿಸಿದೆ ಎಂದು ಹೇಳಿದರು.

ನಾನು ಹಿಂತಿರುಗಿ ಹೋದ ಬಳಿಕ ಖಡಿತವಾಗಿ ನೀಲ ನಕ್ಷೆಯನ್ನು ವಿನ್ಯಾಸಗೊಳಿಸುತ್ತೇನೆ. ಅಮೆರಿಕ ಅಥವಾ ಯುರೋಪ್​ ಅಥವಾ ಚೀನಾದಿಂದ ಹೊರ ಬರುತ್ತಿರುವ ಅಂತಾರಾಷ್ಟ್ರೀಯ ಕಂಪನಿಗಳ ಅಗತ್ಯತೆಯನ್ನು ಗುರಿಯಾಗಿರಿಸಿಕೊಂಡು ಬ್ಲೂಪ್ರಿಂಟ್​ ತಯಾರಿಸುತ್ತೇವೆ. ನಾನು ಅವರನ್ನು ಸಂಪರ್ಕಿಸಿ ಭಾರತ ಏಕೆ ಹೆಚ್ಚು ಯೋಗ್ಯವಾದ ಹೂಡಿಕೆ ತಾಣವಾಗಿದೆ ಎಂಬುದನ್ನು ಅವರ ಮುಂದಿಡುತ್ತೇನೆ ಎಂದರು.

ಜಾಗತಿಕ ಮಟ್ಟದಲ್ಲಿ ಭಾರತಕ್ಕಿಂತ ವೇಗವಾಗಿ ಚೀನಾ ನಾಗಾಲೋಟದಲ್ಲಿ ಸಾಗುತ್ತಿದೆ. ಸ್ಥಳೀಯ ಚೀನಿ ಕಂಪನಿಗಳ ಜೊತೆಗೆ ಅಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ತಯಾರಿಕ ಘಟಕಗಳನ್ನು ಹೊಂದಿವೆ. ಇದರಲ್ಲಿನ ಅನೇಕ ಕಂಪನಿಗಳು ಈಗ ಚೀನಾದಿಂದ ಆಚೆ ಸೂಕ್ತ ಸ್ಥಳಗಳನ್ನು ಹುಡುಕುತ್ತಿವೆ. ಅವುಗಳ ಮುಂದಿನ ಆಯ್ಕೆ ಭಾರತವೇ ಆಗಿದೆ. ಅಮೆರಿಕ- ಭಾರತ ಕಾರ್ಯತಂತ್ರ ಮತ್ತು ಪಾಲುದಾರಿಕೆ ವೇದಿಕೆ (ಯುಎಸ್​​ಐಎಸ್​​ಪಿಎಫ್​) ಎಂಬ ಸಂಸ್ಥೆ ಪ್ರಕಾರ ಚೀನಾದಿಂದ ಸುಮಾರು 200 ಅಮೆರಿಕದ ಕಂಪನಿಗಳು ಭಾರತಕ್ಕೆ ವಲಸೆ ಬರಲು ಆಸಕ್ತಿ ತಳೆಯುತ್ತಿವೆ ಎಂದು ತಿಳಿಸಿವೆ.

ABOUT THE AUTHOR

...view details