ಕರ್ನಾಟಕ

karnataka

ETV Bharat / business

ಸಿಲಿಂಡರ್ ದರ ಏರಿಕೆಗೆ ದೇಶದಲ್ಲಿನ ಆಂತರಿಕ ನಡೆ ಕಾರಣವಲ್ಲ: ಮತ್ತೇನು? - ಸಿಲಿಂಡರ್ ದರ ಏರಿಕೆಗೆ ಕಾರಣ

ಆಮದು ಸಮಾನತೆ ಬೆಲೆ (ಐಪಿಪಿ) ಸೂತ್ರದ ಆಧಾರದ ಮೇಲೆ ಎಲ್‌ಪಿಜಿ ಬೆಲೆ ನಿರ್ಧರಿಸಲಾಗುತ್ತದೆ. ಐಪಿಪಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಎಲ್​ಪಿಜಿ ಬೆಲೆಗಳ ಆಧಾರದ ಮೇಲೆ ತೀರ್ಮಾನವಾಗುತ್ತವೆ. ಇಂಧನ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಸೌದಿ ಅರಾಮ್ಕೊ ಕಂಪನಿಯು ಐಪಿಪಿ ಆಧಾರದ ಮೇಲೆ ಎಲ್​ಪಿಜಿಯ ಬೆಲೆ ನಿರ್ಧರಿಸುತ್ತದೆ. ಎಫ್‌ಒಬಿ (ಫ್ರೀ ಆನ್ ಬೋರ್ಡ್​) ಬೆಲೆ, ಸಾಗರ ಸರಕು ಸಾಗಣೆ, ವಿಮೆ ಮತ್ತು ಕಸ್ಟಮ್ಸ್ ಸುಂಕ ಒಳಗೊಂಡಿರುತ್ತದೆ.

LPG prices
LPG prices

By

Published : Mar 3, 2021, 7:10 PM IST

ನವದೆಹಲಿ: ಕಳೆದ ಎರಡು ತಿಂಗಳಿಂದ ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಮತ್ತು ಖಾದ್ಯ ತೈಲಗಳಿಂದ ಜನಸಾಮಾನ್ಯರು ರೋಷಿ ಹೋಗಿದ್ದು, ಗಾಯದ ಮೇಲೆ ಬರೆ ಎಂಬಂತೆ ಬ್ಯಾಕ್-ಟು-ಬ್ಯಾಕ್ ಸಿಲಿಂಡರ್​ ಬೆಲೆ ಏರಿಕೆಯಾಗಿದೆ.

ಡಿಸೆಂಬರ್‌ನಿಂದ ಇಲ್ಲಿಯವರೆಗೆ ಎಲ್‌ಪಿಜಿ ಬೆಲೆಯಲ್ಲಿ 175 ರೂ. ಅಧಿಕ ಹೆಚ್ಚಳವಾಗಿದೆ. ಹಿಂದಿನ ನಾಲ್ಕು ವಾರಗಳಲ್ಲಿ ನಾಲ್ಕು ಬಾರಿ ಬೆಲೆ ಪರಿಷ್ಕರಿಸಲಾಗಿದೆ. ತತ್ಪಪರಿಣಾಮವಾಗಿ ಫೆಬ್ರವರಿಯಿಂದ ಪ್ರತಿ ಸಿಲಿಂಡರ್​ ರಿಫ್ಲಿಂಗ್​ ದರದ ಮೇಲೆ ಹೆಚ್ಚುವರಿಯಾಗಿ 125 ರೂ. ಹೊರೆಯಾಗಿದೆ. ಸೋಮವಾರವಷ್ಟೇ 25 ರೂ. ಹೆಚ್ಚಳವಾಗಿ 14.2 ಕೆಜಿ ಸಿಲಿಂಡರ್ ದೆಹಲಿಯಲ್ಲಿ ಈಗ 819 ರೂ. ಲಭ್ಯವಾಗುತ್ತಿದೆ. ಬೆಲೆಗಳ ಏಕಾಏಕಿ ಏರಿಕೆ ಏಕೆ ಎಂಬುದು ಪ್ರಶ್ನೆ ಎದುರಾಗಿದೆ

ಆ ಪ್ರಶ್ನೆಗೆ ಉತ್ತರ ಪಡೆಯುವ ಮೊದಲು ದೇಶದಲ್ಲಿ ಪ್ರಸ್ತುತ ಎಲ್‌ಪಿಜಿ ಬೆಲೆ ಸೂತ್ರ ಅರ್ಥಮಾಡಿಕೊಳ್ಳಬೇಕು.

ಎಲ್​ಪಿಜಿ ಬೆಲೆ ನಿರ್ಧಾರ

ಆಮದು ಸಮಾನತೆ ಬೆಲೆ (ಐಪಿಪಿ) ಸೂತ್ರದ ಆಧಾರದ ಮೇಲೆ ಎಲ್‌ಪಿಜಿ ಬೆಲೆ ನಿರ್ಧರಿಸಲಾಗುತ್ತದೆ. ಐಪಿಪಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಎಲ್​ಪಿಜಿ ಬೆಲೆಗಳ ಆಧಾರದ ಮೇಲೆ ತೀರ್ಮಾನವಾಗುತ್ತವೆ.

ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಸೌದಿ ಅರಾಮ್ಕೊ ಕಂಪನಿಯು ಐಪಿಪಿ ಆಧಾರದ ಮೇಲೆ ಎಲ್​ಪಿಜಿಯ ಬೆಲೆ ನಿರ್ಧರಿಸುತ್ತದೆ. ಎಫ್‌ಒಬಿ (ಫ್ರೀ ಆನ್ ಬೋರ್ಡ್​) ಬೆಲೆ, ಸಾಗರ ಸರಕು ಸಾಗಣೆ, ವಿಮೆ ಮತ್ತು ಕಸ್ಟಮ್ಸ್ ಸುಂಕ ಒಳಗೊಂಡಿರುತ್ತದೆ.

ಇದನ್ನೂ ಓದಿ: ಖಾಸಗಿ ಕಂಪನಿಗಳ ನೌಕರರಿಗೆ ಫ್ರೀ ಲಸಿಕೆ ಕೊಡ್ಬೇಕಾ?: ನೆಟ್ಟಿಗನಿಗೆ ಆನಂದ್ ಮಹೀಂದ್ರಾ ಉತ್ತರ

ಒಳನಾಡಿನ ಸರಕು ಸಾಗಣೆ ವೆಚ್ಚ, ಬಾಟ್ಲಿಂಗ್ ಶುಲ್ಕ, ಮಾರ್ಕೆಟಿಂಗ್ ವೆಚ್ಚ, ತೈಲ ಕಂಪನಿಗಳು ವಿಧಿಸುವ ಅಂಚಿನ ಶುಲ್ಕ, ವ್ಯಾಪಾರಿ ಆಯೋಗ ಮತ್ತು ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ನ ಅಂತಿಮ ಬೆಲೆ ನಿರ್ಧರಿಸಲು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಎಲ್‌ಪಿಜಿ ಬೆಲೆಯಲ್ಲಿ ಹಠಾತ್ ಏರಿಕೆ ಏಕೆ?

ಜಾಗತಿಕ ಎಲ್‌ಪಿಜಿ ಬೆಲೆಗಳಲ್ಲಿನ ಏರಿಳಿತಗಳಿಗೆ ಸೌದಿ ಅರಾಮ್ಕೊ ಪ್ರಮುಖವಾಗಿದೆ. ವಿದೇಶದಲ್ಲಿ ದರ ಏರಿಕೆಯು ದೇಶದಲ್ಲಿ ಚಿಲ್ಲರೆ ಬೆಲೆಗಳನ್ನು ಗಗನಕ್ಕೆ ತಳ್ಳುತ್ತದೆ ಎಂಬುದು ಸ್ಪಷ್ಟವಾಗುತ್ತದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಸೆಲ್​ ಪ್ರಕಾರ, ಸೌದಿ ಅರಾಮ್ಕೊದ ಎಲ್‌ಪಿಜಿ ಬೆಲೆ 2020ರ ಮೇ ತಿಂಗಳಲ್ಲಿ ಮೆಟ್ರಿಕ್ ಟನ್‌ಗೆ 257.33 ಡಾಲರ್‌ನಿಂದ 2021ರ ಫೆಬ್ರವರಿಯಲ್ಲಿ 529.80 ಡಾಲರ್‌ಗೆ ಏರಿದೆ.

ABOUT THE AUTHOR

...view details