ETV Bharat Karnataka

ಕರ್ನಾಟಕ

karnataka

ETV Bharat / business

ತ್ಯಾಜ್ಯ ಸರಕುಗಳಿಂದ ಕೋಟಿ, ಕೋಟಿ ಬಾಚಿದ ಪಶ್ಚಿಮ ರೈಲ್ವೆ! - ಮಾರಾಟ

ಪಶ್ಚಿಮ ರೈಲ್ವೆ ವಲಯದಲ್ಲಿ (ಡಬ್ಲ್ಯೂಆರ್​) ಬಳಕೆಯಾಗದೆ ಬಿದ್ದಿದ್ದ ರೈಲು ಬೋಗಿಯ ಬಿಡಿ ಭಾಗಗಳು ಹಾಗೂ ಇತರೆ ಸರುಕಗಳ ಮಾರಾಟದಿಂದ ₹ 517.41 ಕೋಟಿ ಬಂದಿದೆ ಎಂದು ಡಬ್ಲ್ಯೂಆರ್​ನ ವಕ್ತಾರ ರವೀಂದ್ರ ಭಾಕರ್ ತಿಳಿಸಿದ್ದಾರೆ.

ರೈಲ್ವೆ ಉಳಿಕೆ
author img

By

Published : Mar 29, 2019, 9:53 PM IST

ಮುಂಬೈ:ಪ್ರತಿ ವರ್ಷ ಭಾರತೀಯ ರೈಲ್ವೆಯ ವಿವಿಧ ವಲಯಗಳು ಕೆಲಸಕ್ಕೆ ಬಾರದ (ಉಳಿಕೆಪಳಿಕೆ) ಸರಕುಗಳ ಮಾರಾಟದಿಂದ ಕೋಟ್ಯಂತರ ರೂ. ಹಣ ಸ್ವೀಕರಿಸುತ್ತವೆ. ಪಶ್ಚಿಮ ರೈಲ್ವೆ ವಲಯ ಅತಿ ಹೆಚ್ಚಿನ ಪ್ರಮಾಣದಲ್ಲಿ ಸರುಕಗಳ ಮಾರಾಟ ಮಾಡಿ ದಾಖಲೆಯ ಹಣ ಪಡೆದುಕೊಂಡಿದೆ.

ಈ ಹಿಂದೆ 2011-2012ರಲ್ಲಿ ಉತ್ತರ ರೈಲ್ವೆ ವಲಯವು ಹರುಕು ಮುರುಕಾದ ಸಾಮಗ್ರಿಗಳ ಮಾರಾಟದಿಂದ ₹ 403 ಕೋಟಿಗೂ ಅತ್ಯಧಿಕ ಮೊತ್ತ ಗಳಿಸಿತ್ತು. ಪಶ್ಚಿಮ ವಲಯದಲ್ಲಿ ಕಬ್ಬಿಣ್ಣದ ಚೂರು ಮಾರಾಟ ಇದಕ್ಕೂ ಅಧಿಕವಾಗಿದೆ ಎಂದಿದ್ದಾರೆ.

ಡಬ್ಲ್ಯುಆರ್ ಜನರಲ್ ಮ್ಯಾನೇಜರ್ ಎ.ಕೆ.ಗುಪ್ತಾ ಹಾಗೂ ಮುಖ್ಯ ವ್ಯವಸ್ಥಾಪಕ ಜೆ.ಪಿ.ಪಾಂಡೆ ನೇತೃತ್ವದಲ್ಲಿ ರೈಲ್ವೆ ವಿಭಾಗದಲ್ಲಿ ತ್ಯಾಜ್ಯವಾಗಿ ಬಿದ್ದಿರುತ್ತಿದ್ದ ಕಬ್ಬಿಣದ ಚೂರುಗಳನ್ನು ಒಂದೆಡೆ ಕೂಡಿಟ್ಟು ಮಾರಾಟ ಮಾಡುವುದನ್ನು ಆರಂಭಿಸಿದರು. ಅತಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾದ ಕಬ್ಬಿಣದ ಚೂರುಗಳ ಮಾರಾಟದಿಂದ 5 ದಶಕೋಟಿ ಆದಾಯ ಬಂದಿದೆ ಎಂದು ತಿಳಿಸಿದರು.

ಮಿಷನ್ ಝೀರೋ ತ್ಯಾಜ್ಯ ಅಡಿಯಲ್ಲಿ ಆರಂಭವಾದ ಅಭಿಯಾನ ದೊಡ್ಡ ಸ್ವರೂಪ ಪಡೆಯಿತು. ಸ್ಕ್ರ್ಯಾಪ್​ ವಿಲೇವಾರಿಗೆ ನೂತನ ಮಾರ್ಗ ಕಂಡು ಆಗಾಗ ಸಂಗ್ರಹವಾಗುತ್ತಿದ್ದ ರೈಲಿನ ಬಿಡಿ ಭಾಗಗಳನ್ನು ಒಂದೆಡೆ ಗುಡ್ಡೆ ಹಾಕಲಾಯಿತು. ಇದರ ಮೇಲೆ ಉನ್ನತಮಟ್ಟದ ಕಾರ್ಯಪಡೆ ರಚಿಸಿ ಮೇಲ್ವಿಚಾರಣೆ ಸಹ ನಡೆಸುತ್ತಿದ್ದೆವು ಎಂದು ಮಾಹಿತಿ ನೀಡಿದರು.

ABOUT THE AUTHOR

author-img

...view details