ಕರ್ನಾಟಕ

karnataka

ETV Bharat / business

ಪಶ್ಚಿಮ ಬಂಗಾಳದಲ್ಲಿದೆ ವಿಶ್ವದಲ್ಲೇ ಅತಿ ಹೆಚ್ಚು ಬೇಡಿಕೆಯ ಸಾವಯವ ಟೀ ತೋಟಗಳು! - ಟೀ ಎಲೆ

ಪಶ್ಚಿಮ ಬಂಗಾಳ ಡಾರ್ಜಿಲಿಂಗ್‌ ಟೀ ತೋಟಗಳಿಗೆ ಪ್ರಸಿದ್ಧಿಯಾಗಿದೆ. ಇಲ್ಲಿನ ಸಾವಯವ ಆಧಾರಿತ ಟೀ ಬೆಳೆಯಲಾಗುತ್ತಿದ್ದು, ಅತಿ ಹೆಚ್ಚು ಗುಣಮಟ್ಟದ ಟೀಯನ್ನು ಜರ್ಮನಿ, ಜಪಾನ್‌, ಸ್ವಿಟ್ಜರ್‌ಲ್ಯಾಂಡ್‌, ಯುಎಸ್‌ ಹಾಗೂ ಯೂರೋಪ್‌ ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ಈ ದೇಶಗಳಲ್ಲಿ ರಾಸಾಯನಿಕ ಮುಕ್ತ ಹಾಗೂ ಸಾವಯವ ಟೀಗೆ ಭಾರಿ ಬೇಡಿಕೆ ಇದೆ.

West Bengal tea takes an organic leap
ಡಾರ್ಜಿಲಿಂಗ್‌ನಲ್ಲಿದೆ ವಿಶ್ವದಲ್ಲೇ ಅತಿ ಹೆಚ್ಚು ಬೇಡಿಕೆಯ ಸಾವಯವ ಟೀ ತೋಟಗಳು!

By

Published : Jun 18, 2020, 3:19 PM IST

Updated : Jun 18, 2020, 5:42 PM IST

ಡಾರ್ಜಿಲಿಂಗ್‌(ಪಶ್ಚಿಮ ಬಂಗಾಳ): ಡಾರ್ಜಿಲಿಂಗ್‌ನಲ್ಲಿ ಟೀ ಬೆಳೆ ಅತ್ಯಂತ ಜನಪ್ರಿಯವಾಗಿದೆ. ಇಲ್ಲಿನ ಭೂಪ್ರದೇಶದಲ್ಲಿ ಬೆಳೆಯುವ ಟೀಗೆ ಕೀಟನಾಶಕಗಳ ಸಿಂಪಡಣೆ ಕಡಿಮೆ ಮಾಡುವ ದೃಷ್ಟಿಯಿಂದ ಬೆಟ್ಟದ ಪ್ರದೇಶದಲ್ಲಿ ಸಾವಯವ ಟೀ ಬೆಳೆಯುವುದು ಹೇಗೆ ಎಂಬುದರ ಕುರಿತು ಅಧ್ಯಯನ ನಡೆಯುತ್ತಿದೆ.

ಟೀ ತೋಟಗಳಲ್ಲಿ‌ ಕೀಟ ಮತ್ತು ಇತರ ಹುಳುಗಳ ಗಂಭೀರ ಸಮಸ್ಯೆಯನ್ನು ಅಲ್ಲಿನ ತೋಟದ ಮಾಲೀಕರು ಎದುರಿಸುತ್ತಿದ್ದಾರೆ. ಭಾರಿ ಮಳೆ ಬಂದಾಗ ಮಾತ್ರ ಈ ಸಮಸ್ಯೆಯಿಂದ ಅಲ್ಪ ಪ್ರಮಾಣದ ಪರಿಹಾರ ಸಿಗ್ತಿದೆ. ಆಗ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತಿದೆ.

ಟಿಆರ್‌ಎ ಮತ್ತು ಟೀ ಮಂಡಳಿ, ಟೀ ತೋಟಗಳಲ್ಲಿ ಕೀಟನಾಶಕ ಮತ್ತು ರಾಸಾಯನಿಕಗಳನ್ನು ಬಳಸಲು ಅನುಮತಿ ನೀಡಿದೆ. ಆದ್ರೆ ಗುಣಮಟ್ಟದ ಟೀ ಉತ್ಪಾದನೆಯಲ್ಲಿ ಯಾವುದೇ ರೀತಿಯ ರಾಜಿ ಇಲ್ಲ ಎಂಬುದನ್ನೂ ಹೇಳಿದೆ. ಉತ್ತಮ ಗುಣಮಟ್ಟದ ಟೀಗೆ ಉತ್ತಮ ಬೆಲೆ ನೀಡಲಾಗುತ್ತದೆ. ಆದರೆ ಶಿಫಾರಸು ಮಾಡಿರುವ ರಾಸಾಯನಿಕಗಳನ್ನು ಮಾತ್ರ ಬಳಸಿಕೊಳ್ಳಬೇಕು ಎಂದು ಟೀ ಪ್ಲಾಂಟ್‌ ಸಂಘಟನೆಯ ಮುಖ್ಯ ಸಲಹೆಗಾರ ಅಮ್ರಿತಾನ್‌ಶು ಚಕ್ರವರ್ತಿ ಹೇಳುತ್ತಾರೆ.

ಡಾರ್ಜಿಲಿಂಗ್‌ನಲ್ಲಿ ಸಾವಯವ ಆಧಾರಿತ ಟೀ ಬೆಳೆಯಲಾಗುತ್ತಿದೆ. ಅತಿ ಹೆಚ್ಚು ಗುಣಮಟ್ಟದ ಟೀಯನ್ನು ಜರ್ಮನಿ, ಜಪಾನ್‌, ಸ್ವಿಟ್ಜರ್‌ಲ್ಯಾಂಡ್‌, ಯುಎಸ್‌ ಹಾಗೂ ಯೂರೋಪ್‌ ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ಈ ದೇಶಗಳಲ್ಲಿ ರಾಸಾಯನಿಕ ಮುಕ್ತ ಹಾಗೂ ಸಾವಯವ ಟೀಗೆ ಭಾರಿ ಬೇಡಿಕೆ ಇದೆ. ಡಾರ್ಜಿಲಿಂಗ್ ‌ಅನ್ನು ಶೇಕಡಾ 100 ರಷ್ಟು ಸಾವಯವ ಟೀ ಬೆಳೆಯುವ ಗುರಿ ಹೊಂದಿದ್ದೇವೆ. ಈ ಪ್ರದೇಶವನ್ನು ಸಾವಯವ ಟೀ ಬೆಳೆಯುವ ಪ್ರದೇಶ ಎಂದು ಘೋಷಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ ಎನ್ನುತ್ತಾರೆ ಡಾರ್ಜಿಲಿಂಗ್‌ ಟೀ ಸಂಘದ ಅಧ್ಯಕ್ಷ ಬಿನೋದ್‌ ಮೋಹನ್‌ ಒತ್ತಾಯಿಸಿದ್ದಾರೆ.

ಪ್ರಸ್ತುತ ಟೀ ಮಂಡಳಿ ಅನುಮೋದನೆ ನೀಡಿರುವ ಕೀಟನಾಶಕಗಳನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ. ಆದ್ರೆ ಸಂಪೂರ್ಣ ಟೀ ತೋಟಗಳಿಗೆ ಬಳಸುವಂತಿಲ್ಲ. ಕೀಟಗಳು ಇರುವ ಕಡೆ ಮಾತ್ರ ಕೀಟನಾಶಗಳನ್ನು ಬಳಸಬೇಕಾಗುತ್ತದೆ. ಕಳೆದ ಮೂರು ವರ್ಷಗಳಿಂದ ಈ ತೋಟಗಳಲ್ಲಿ ಬೆಳೆಯುವ ಕಳೆ ಕೂಡ ಕಡಿಮೆಯಾಗಿದೆ ಎನ್ನುತ್ತಾರೆ ಟಿಎಐನ ಡೂರ್ಸ್‌ ಘಟಕದ ಕಾರ್ಯದರ್ಶಿ ರಾಮ್‌ ಅವತಾರ್‌ ಶರ್ಮಾ.

ಪಶ್ಚಿಮ ಬಂಗಾಳದಲ್ಲಿದೆ ವಿಶ್ವದಲ್ಲೇ ಅತಿ ಹೆಚ್ಚು ಬೇಡಿಕೆಯ ಸಾವಯವ ಟೀ ತೋಟಗಳು!

ಟೀ ತೋಟಗಳಿಗೆ ರಾಸಾಯನಿಕಗಳು ಅಥವಾ ಕೀಟನಾಶಗಳನ್ನು ಬಳಸುವ ಸಂಬಂಧ ಕೇಂದ್ರ ವಾಣಿಜ್ಯ ಸಚಿವಾಲಯದಡಿ ಬರುವ ಟೀ ಮಂಡಳಿ ಮತ್ತು ಅಪೆಕ್ಸ್‌ ಸಂಘಟನೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ನೀಡಿದೆ. ಇದೇ ಮಂಡಳಿ ದೇಶದಲ್ಲಿ ಟೀ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿದೆ. ಟೀ ರಿಸರ್ಚ್‌ ಅಸೋಸಿಯೇಷನ್‌ ಫಾರ್‌ ನಾರ್ಥ್‌ ಈಸ್ಟ್‌ ಇಂಡಿಯಾ ಮತ್ತು ಯುಪಿಎಎಸ್‌ಐ ಟೀ ರಿಸರ್ಚ್‌ ಫೌಂಡೇಷನ್‌ ಫಾರ್‌ ಸೌಥ್‌ ಇಂಡಿಯಾ ಟೀ ತೋಟಗಳು ರಕ್ಷಣಾ ಕೋಡ್‌ಗಳನ್ನು ರಚಿಸಿದೆ.

ಭಾರತೀಯ ಟೀ ಮಂಡಳಿ ಇಪಿಒ, ಎಫ್‌ಎಒ ಮತ್ತು ಡಬ್ಲ್ಯೂಹೆಚ್‌ಒ, ಕೋಡೆಕ್ಸ್‌ ನಂತಹ ಅಂತಾರಾಷ್ಟ್ರೀಯ ಸಂಸ್ಥೆಯಗಳ ಸಹಯೋಗದಲ್ಲಿ ಕೆಲಸ ಮಾಡುತ್ತಿದೆ. ಟೀ ತೋಟಗಳ ಮೇಲೆ ಎರಡು ರೀತಿಯ ದಾಳಿಗಳು ನಡೆಯುತ್ತವೆ. ಕೀಟನಾಶಕಗಳು ಮತ್ತು ಶಿಲೀಂದ್ರ ರೋಗಕಾರರಗಳು. ನಾವು ಟೀ ಮಂಡಳಿ ಪಿಪಿಸಿ ಪ್ರಕಾರ ನೀಡಿರುವ ಪಟ್ಟಿಯಲ್ಲಿರುವ ಕೀಟನಾಶಕಗಳನ್ನು ಬಳಸುತ್ತೇವೆ ಎನ್ನುತ್ತಾರೆ ಸುಕ್ನಾ ಟೀ ತೋಟದ ಮ್ಯಾನೇಜರ್‌ ಭಾಸ್ಕರ್‌ ಚಕ್ರವರ್ತಿ.

ಕೀಟನಾಶಕಳಗಾದ ಅಸೆಫೇಟ್‌, ಕಾರ್ಬೆಂಡಾಜಿಮ್, ಮೊನೊಕ್ರೊಟೊಫಾಸ್ ಅಥವಾ 2,4 - ಡಿಕ್ಲೋರೊಫೆನಾಕ್ಸಿಯಾಟಿಕ್‌ಗಳನ್ನು ಟೀ ತೋಟಕ್ಕೆ ಬಳಸಲಾಗುತ್ತಿದೆ. ಟೀ ತೋಟಗಳಲ್ಲಿನ ಕಳೆ ಮತ್ತು ಕೀಟಗಳ ನಾಶಕ್ಕಾಗಿ ತೋಟಗಳ ಮಾಲೀಕರು ಹೆಚ್ಚು ಹೆಚ್ಚು ಮಾಹಿತಿ ಪಡೆಯುತ್ತಿದ್ದಾರೆ. ಹಸು ಸಗಣಿ, ನಿಂಬೆ ತ್ಯಾಜ್ಯ, ನಿಂಬೆ ರಸವನ್ನು ಕೀಟನಾಶಕಗಳಾಗಿ ಬಳಸುತ್ತಿದ್ದಾರೆ.

Last Updated : Jun 18, 2020, 5:42 PM IST

ABOUT THE AUTHOR

...view details