ನವದೆಹಲಿ: ಚೀನೀ ವಿರೋಧಿ ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು ಇತ್ತೀಚೆಗೆ ಮುಂಬೈ, ಆಗ್ರಾ, ಜಬಲ್ಪುರ್ ಮತ್ತು ಪಾಟ್ನಾದಲ್ಲಿನ ಹಲವು ಮಾರುಕಟ್ಟೆಗಳಿಗೆ ದಾಳಿಮಾಡಿ, ಈ ವೇಳೆ ಚೀನಾದ ಬ್ರ್ಯಾಂಡ್‌ಗಳನ್ನು ಸಂಕೇತಿಸುವ ವಸ್ತುಗಳನ್ನು ಹಾನಿಗೊಳಿಸಿದ್ದಾರೆ ಎಂದು ಮೊಬೈಲ್ ಚಿಲ್ಲರೆ ವ್ಯಾಪಾರಿಗಳ ಸಂಘ ಪತ್ರದಲ್ಲಿ ಆರೋಪಿಸಿದೆ.
ಅಖಿಲ ಭಾರತ ಮೊಬೈಲ್ ಚಿಲ್ಲರೆ ವ್ಯಾಪಾರಿಗಳ ಸಂಘ (ಎಐಎಂಆರ್‌ಎ) ತನ್ನ ಪತ್ರದಲ್ಲಿ, ಚಿಲ್ಲರೆ ವ್ಯಾಪಾರಿಗಳಿಗೆ ಬಟ್ಟೆ / ಫ್ಲೆಕ್ಸ್‌ನಿಂದ ಮುಚ್ಚಲು ಅಥವಾ ಕೆಲವು ತಿಂಗಳವರೆಗೆ ಅಂಗಡಿ ಮುಂಭಾಗದಿಂದ ಬೋರ್ಡ್‌ಗಳನ್ನು ತೆಗೆದುಹಾಕಲು ಅವಕಾಶ ನೀಡುವಂತೆ ಚೀನಾದ ಮೊಬೈಲ್ ಫೋನ್ ಬ್ರ್ಯಾಂಡ್‌ಗಳಿಗೆ ವಿನಂತಿಸಿದೆ.
ನಮ್ಮ ಸದಸ್ಯರು ಮತ್ತು ಅವರ ಮಳಿಗೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಈ ಪತ್ರವನ್ನು ಕಳುಹಿಸಿದ್ದೇವೆ. ಮಾರುಕಟ್ಟೆ ಸ್ಥಳಗಳಲ್ಲಿ ಸಣ್ಣ ಪ್ರಮಾಣದ ಆಕ್ರಮಣಶೀಲತೆಯನ್ನು ನಾವು ಕಂಡಿದ್ದೇವೆ. ಕೆಲವು ಸಂಸ್ಥೆಗಳು ಚಿಲ್ಲರೆ ವ್ಯಾಪಾರಿಗಳಿಗೆ ತಮ್ಮ ಅಂಗಡಿಗಳಿಂದ ಚೀನೀ ಬ್ರ್ಯಾಂಡಿಂಗ್ ಅನ್ನು ತೆಗೆದುಹಾಕಲು ಒಂದು ವಾರ ಕಾಲಾವಕಾಶ ನೀಡಿವೆ ಎಂದು ಎಐಎಂಆರ್‌ಎ ಅಧ್ಯಕ್ಷ ಅರವಿಂದರ್ ಖುರಾನಾ ತಿಳಿಸಿದ್ದಾರೆ.