ನವದೆಹಲಿ:ಮೆಟ್ರೊ ಸಿಟಿಮುಂಬೈನಲ್ಲಿ ಗ್ರಾಹಕರಿಗೆ 4ಜಿ ಸೇವೆ ಒದಗಿಸುವ ಸಲುವಾಗಿ 3ಜಿ ಸ್ಪೆಕ್ಟ್ರಮ್ ಅನ್ನು ಬಳಸಲಾಗಿದೆ ಎಂದು ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ (ವಿಐ) ಶನಿವಾರ ಹೇಳಿದೆ. ಈ ಮೂಲಕ ಸ್ಪೆಕ್ಟ್ರಮ್ ಸುಧಾರಣೆ ನಂತರ ಗ್ರಾಹಕರು ಬಳಸುವ ಡೇಟಾ ಹೆಚ್ಚಿನ ವೇಗ ಪಡೆಯಲಿದೆ ಎಂದು ಹೇಳಿದೆ.
ವಿಐ 2,100 ಮೆಗಾಹರ್ಟ್ಜ್ ಬ್ಯಾಂಡ್‌ನಲ್ಲಿ 5 ಮೆಗಾಹೆರ್ಟ್ಜ್ ಸ್ಪೆಕ್ಟ್ರಮ್ ಅನ್ನು ಹೊಂದಿದ್ದು, ಅದನ್ನು 3ಜಿ ಸೇವೆಗಳಿಗೆ ಬಳಸಲಾಗುತ್ತಿದೆ. ಸದ್ಯ ಅಸ್ತಿತ್ವದಲ್ಲಿ ಇರುವ 4ಜಿ ಸೇವೆಯನ್ನು 2,100 ಮೆಗಾಹರ್ಟ್ಜ್ ಪದರದ ವಿಸ್ತರಣೆಯಿಂದ ಗ್ರಾಹಕರಿಗೆ ಪೂರಕವಾಗಲಿದೆ. ಇದರಿಂದ ಡೇಟಾ ವೇಗ ಹೆಚ್ಚಲಿದೆ, ಉತ್ತಮ ನೆಟ್ವರ್ಕ್ ಸಮಸ್ಯೆ ನೀಗಲಿದೆ ಎಂದು ತಿಳಿಸಿದೆ.
ಈವರೆಗೂ 3ಜಿ ಸೇವೆಯಲ್ಲಿಯೇ ಮುಂದುವರೆಯುತ್ತಿರುವ ಗ್ರಾಹಕರು ಸಮೀಪದ ವಿಐ ಕೇಂದ್ರಕ್ಕೆ ತೆರಳಿ ಅಪ್ಗ್ರೇಡ್ 4ಜಿ ಸಿಮ್ ಅನ್ನು ಪಡೆಯಿರಿ. ಅದಕ್ಕಾಗಿ ಯಾವುದೇ ಶುಲ್ಕ ಭರಿಸುವಂತಿಲ್ಲ. ಈ ಮೂಲಕ ಪೂರ್ಣ ಸಾಮರ್ಥ್ಯದ ಜಿಜಾನೆಟ್ 4ಜಿ ಸೇವೆ ಪಡೆಯಲಿದ್ದೀರಿ. ಕೂಡಲೇ ಗ್ರಾಹಕರು ಸಂಪರ್ಕಿಸಿ ಎಂದು ಮುಂಬೈನ ವಿಐ ಕಾರ್ಯಾಚರಣಾ ನಿರ್ದೇಶಕ ರಾಜೇಂದ್ರ ಚೌರಾಸಿಯಾ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
3ಜಿ ಸೇವೆಯಲ್ಲೇ ಮುಂದುವರೆದಿರುವ ಗ್ರಾಹಕರು ಇನ್ಮುಂದೆ 4ಜಿ ಹ್ಯಾಂಡ್ಸೆಟ್ಗಳಲ್ಲಿ 4ಜಿ ಸಿಮ್ ಬಳಸಿ, 4ಜಿ ಸೇವೆ ಅನುಭವ ಪಡೆಯಬಹುದು. ಗುಣಮಟ್ಟ ದತ್ತಾಂಶಗಳ ಡೌನ್ಲೋಡ್ ಮತ್ತು ಅಪ್ಲೋಡ್ ವೇಗ ಹೆಚ್ಚಲಿದೆ. ಜಿಜಾನೆಟ್ 4ಜಿ ಸೇವೆ ಡೇಟಾ ವೇಗ ಹೆಚ್ಚಳ, ನೆಟ್ವರ್ಕ್ ಸಮಸ್ಯೆಗೆ ಪರಿಹಾರ, ವ್ಯಾಪಕ ವಿಸ್ತರಣೆ ಮೂರು ಅನುಕೂಲಗಳನ್ನು ಒದಗಿಸಿದೆ. ಹಾಗೆಯೇ 2ಜಿ ಸೇವೆಯೂ ಮುಂದುವರೆಯಲಿದೆ ಎಂದೂ ಹೇಳಿದೆ.