ಕರ್ನಾಟಕ

karnataka

ETV Bharat / business

ದಕ್ಷಿಣ ಕೊರಿಯಾ ಮೂಲದ LG ಕಂಪನಿಗೆ ಸೇರಿದೆ ವಿಶಾಖಪಟ್ಟಣ ಅನಿಲ ಸೋರಿಕೆ ಕಾರ್ಖಾನೆ.. - ದಕ್ಷಿಣ ಕೊರಿಯಾ LG ಕಂಪನಿ

ಈ ನಡುವೆ ಭಾರತವನ್ನು ಒಂದು ಪ್ರಮುಖ ಮಾರುಕಟ್ಟೆಯೆಂದು ನೋಡಿದ ದಕ್ಷಿಣ ಕೊರಿಯಾದ ಎಲ್​ಜಿ ಕೆಮಿಕಲ್, ಇಲ್ಲಿ ಆಕ್ರಮಣಕಾರಿಯಾಗಿ ಬೆಳೆಯಲು ಯುಬಿ ಸಮೂಹದಿಂದ ಹಿಂದೂಸ್ತಾನ್ ಪಾಲಿಮರ್ಸ್‌ನ ಸ್ವಾಧೀನಪಡಿಸಿಕೊಂಡಿತು. ಬಳಿಕ 1997ರಲ್ಲಿ ಅದನ್ನು ಎಲ್​ಜಿ ಪಾಲಿಮರ್ಸ್ ಇಂಡಿಯಾ ಎಂದು ಮರುನಾಮಕರಣ ಮಾಡಿತು.

LG
ಎಲ್​ಜಿ

By

Published : May 7, 2020, 4:45 PM IST

ವಿಶಾಖಪಟ್ಟಣ: ಅನಿಲ ಸ್ಥಾವರದಿಂದ ಇಂದು ಮುಂಜಾನೆ ಅನಿಲ ಸೋರಿಕೆಯಾಗಿದ್ದ ವಿಶಾಖಪಟ್ಟಣದ ಎಲ್‌ಜಿ ಪಾಲಿಮರ್ಸ್ ಇಂಡಿಯಾ, ದಕ್ಷಿಣ ಕೊರಿಯಾದ ಎಲ್‌ಜಿ ಕೆಮಿಕಲ್ ಗ್ರೂಪ್‌​ನ ಭಾಗವಾಗಿದೆ. ಇದರ ಪ್ರಧಾನ ಕಚೇರಿ ವಾಣಿಜ್ಯ ನಗರಿ ಮುಂಬೈನಲ್ಲಿದೆ.

ವಿಶಾಖಪಟ್ಟಣದಲ್ಲಿ ಪಾಲಿಸ್ಟೈರೀನ್ ಮತ್ತು ಅದರ ಸಹ-ಪಾಲಿಮರ್‌ಗಳನ್ನು ತಯಾರಿಸಲು 1961ರಲ್ಲಿ ಹಿಂದೂಸ್ತಾನ್ ಪಾಲಿಮರ್ಸ್(Hindustan Polymers) ಎಂಬ ಹೆಸರಿನಲ್ಲಿ ಇದನ್ನು ಸ್ಥಾಪಿಸಲಾಯಿತು. ಈ ಕಂಪನಿಯು 1978ರಲ್ಲಿ ಯುಬಿ ಗ್ರೂಪ್‌ನ ಮೆಕ್‌ಡೊವೆಲ್ ಅಂಡ್​ ಕಂಪನಿ ಲಿ.(McDowell & Co Ltd)ನೊಂದಿಗೆ ವಿಲೀನ(merge)ಗೊಂಡಿತು.

ಈ ನಡುವೆ ಭಾರತವನ್ನು ಒಂದು ಪ್ರಮುಖ ಮಾರುಕಟ್ಟೆಯೆಂದು ನೋಡಿದ ದಕ್ಷಿಣ ಕೊರಿಯಾದ ಎಲ್​ಜಿ ಕೆಮಿಕಲ್, ಇಲ್ಲಿ ಆಕ್ರಮಣಕಾರಿಯಾಗಿ ಬೆಳೆಯಲು ಯುಬಿ ಸಮೂಹದಿಂದ ಹಿಂದೂಸ್ತಾನ್ ಪಾಲಿಮರ್ಸ್‌ನ ಸ್ವಾಧೀನಪಡಿಸಿಕೊಂಡಿತು. ಬಳಿಕ 1997ರಲ್ಲಿ ಅದನ್ನು ಎಲ್​ಜಿ ಪಾಲಿಮರ್ಸ್ ಇಂಡಿಯಾ ಎಂದು ಮರುನಾಮಕರಣ ಮಾಡಿತು.

ಎಲ್​ಜಿ ಪಾಲಿಮರ್ಸ್ ಪ್ರಕಾರ, ಪಾಲಿಸ್ಟೈರೀನ್ ಮತ್ತು ವಿಸ್ತರಿಸಬಹುದಾದ ಪಾಲಿಸ್ಟೈರೀನ್ ತಯಾರಿಕೆಯಲ್ಲಿ ಭಾರತದಲ್ಲಿ ಇದು ಪ್ರಮುಖ ಕಂಪನಿಯಾಗಿದೆ. ಇಂದು ಗೋಪಾಲಪಟ್ಟಣಂ ಬಳಿಯ ಆರ್ ಆರ್ ವೆಂಕಟಪುರಂ ಗ್ರಾಮದ ಕಾರ್ಖಾನೆ ಸ್ಥಾವರದಿಂದ ಅನಿಲ ಸೋರಿಕೆಯಾಗಿ 11 ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಅಸ್ವಸ್ಥಗೊಂಡು ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

ABOUT THE AUTHOR

...view details