ಕರ್ನಾಟಕ

karnataka

By

Published : Nov 27, 2020, 5:57 PM IST

ETV Bharat / business

ಜ.16ರಿಂದ ವಾರಕ್ಕೆ ಮೂರು ಬಾರಿ ಕಾರ್ಯ ನಿರ್ವಹಿಸಲಿರುವ ಮುಂಬೈ - ಲಂಡನ್ ವಿಮಾನ

ವಿಸ್ತಾರ ಏರ್​ಲೈನ್ಸ್ ಸಂಸ್ಥೆಯ ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನವು ಜ.16 ರಿಂದ ವಾರಕ್ಕೆ ಮೂರು ಬಾರಿ ಮುಂಬೈ - ಲಂಡನ್ ಮಾರ್ಗದಲ್ಲಿ ಸಂಚಾರ ನಡೆಸಲಿದೆ. ಈ ಕುರಿತು ವಿಸ್ತಾರ ಏರ್​ಲೈನ್ಸ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಮುಂಬೈ-ಲಂಡನ್ ವಿಮಾನಗಳು
Mumbai-London flights

ನವದೆಹಲಿ: ನಮ್ಮ ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನವು ಜ.16 ರಿಂದ ವಾರಕ್ಕೆ ಮೂರು ಬಾರಿ ಮುಂಬೈ- ಲಂಡನ್ ಮಾರ್ಗದಲ್ಲಿ ವಿಮಾನಯಾನ ನಡೆಸಲಿದೆ ಎಂದು ವಿಸ್ತಾರ ಏರ್​ಲೈನ್ಸ್ ತಿಳಿಸಿದೆ.

ಪ್ರಸ್ತುತ ದಿನಗಳಲ್ಲಿ ನಾಲ್ಕು ವಿಮಾನಗಳು ದೆಹಲಿ -ಲಂಡನ್​ ಮಾರ್ಗದಲ್ಲಿ ಪೂರ್ಣ ಪ್ರಮಾಣ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲ ಯುಕೆಯ ವಿಮಾನಗಳು ಭಾತರದ ಏರ್​ ಬಬಲ್​ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿವೆ.

ಈ ಕುರಿತು ವಿಸ್ತಾರ ಏರ್​ಲೈನ್ಸ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲೆಸ್ಲಿ ಥಂಗ್ ಮಾಹಿತಿ ನೀಡಿದ್ದು, ದೆಹಲಿ ಮತ್ತು ಲಂಡನ್ ನಡುವೆ ನಾವು ನೀಡುತ್ತಿರುವ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ನಮಗೆ ಸಂತೋಷವಾಗಿದೆ. ಈ ಮೂಲಕ ಮುಂಬೈಯಿಂದ ಸಂಪರ್ಕವನ್ನು ಸೇರಿಸುವ ಮೂಲಕ ನೆಟ್‌ವರ್ಕ್ ಅನ್ನು ಇನ್ನಷ್ಟು ಬಲಪಡಿಸಲು ಪ್ರೋತ್ಸಾಹ ದೊರಕಿದೆ. ಈ ಮೂಲಕ ನಾವು ಉಭಯ ದೇಶಗಳ ನಡುವೆ ಸಾಕಷ್ಟು ಬೇಡಿಕೆ ಕಾಣುತ್ತಿದ್ದು, ಭವಿಷ್ಯದ ಬಗ್ಗೆ ಆಶಾವಾದಿಯಾಗಿರುತ್ತೇವೆ ಎಂದಿದ್ದಾರೆ.

ಮಂಗಳವಾರ, ಗುರುವಾರ ಮತ್ತು ಶನಿವಾರದಂದು ವಾರಕ್ಕೆ ಮೂರು ಬಾರಿ ಮುಂಬೈ - ಲಂಡನ್ ಮಾರ್ಗದಲ್ಲಿ ವಿಮಾನಯಾನ ನಡೆಸಲಿದೆ ಎಂದು ವಿಮಾನಯಾನ ಹೇಳಿಕೆಯಲ್ಲಿ ತಿಳಿಸಿದೆ.

ಕೊರೊನಾದಿಂದ ಮಾರ್ಚ್. 23 ರಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸೇವೆ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ, ಮೇ ತಿಂಗಳಿನಿಂದ 'ವಂದೇ ಭಾರತ್ ಮಿಷನ್' ಅಡಿಯಲ್ಲಿ ಜುಲೈನಿಂದ ವಿಶೇಷ ವಿಮಾನಯಾನಗಳ ಸಂಚಾರಕ್ಕೆ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ.

ABOUT THE AUTHOR

...view details