ಕರ್ನಾಟಕ

karnataka

ETV Bharat / business

ವಿಸ್ತಾರಾ ಮತ್ತು ಸಿಂಗಪುರ​ ಏರ್​ಲೈನ್ಸ್ ನಡುವೆ ವಾಣಿಜ್ಯ ಸಹಕಾರ ಒಪ್ಪಂದ

ಒಪ್ಪಂದದ ಪ್ರಕಾರ ವಿಸ್ತಾರಾ ಮತ್ತು ಸಿಂಗಪುರ ಏರ್​ಲೈನ್ಸ್ ಸಂಸ್ಥೆಗಳು ಮಾರ್ಕೆಟಿಂಗ್, ಶುಲ್ಕ, ಗ್ರಾಹಕ ಸೇವೆಗಳು ಮತ್ತು ಮುಂತಾದ ವಿಚಾರಗಳಲ್ಲಿ ತಮ್ಮ ಗ್ರಾಹಕರಿಗೆ ತಡೆರಹಿತ ಸೇವೆಗಳನ್ನು ನೀಡಲು ಪರಸ್ಪರ ಅನುವು ಮಾಡಿಕೊಡಲಿವೆ.

vistara airlines
ವಿಸ್ತಾರಾ ಏರ್​ಲೈನ್ಸ್​

By

Published : Dec 7, 2020, 5:10 PM IST

ನವದೆಹಲಿ:ಖಾಸಗಿ ವಿಮಾನಯಾನ ಸಂಸ್ಥೆ ವಿಸ್ತಾರಾ ಹಾಗೂ ಸಿಂಗಪುರ ಏರ್​ಲೈನ್ಸ್ ವಾಣಿಜ್ಯ ಸಹಕಾರ ಒಪ್ಪಂದಕ್ಕೆ ಸಹಿ ಮಾಡಿದ್ದು, ಈ ಮೂಲಕ ಎರಡೂ ವಿಮಾನಯಾನ ಸಂಸ್ಥೆಗಳು ವಾಣಿಜ್ಯ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡಲಿವೆ.

ಈ ಒಪ್ಪಂದದ ಪ್ರಕಾರ ಎರಡೂ ವಿಮಾನಯಾನ ಸಂಸ್ಥೆಗಳು ತಮ್ಮ ಸಹಭಾಗಿತ್ವವನ್ನು ಬಲಪಡಿಸಿಕೊಳ್ಳಲಿದ್ದು ಮಾರ್ಕೆಟಿಂಗ್, ಶುಲ್ಕ, ಗ್ರಾಹಕ ಸೇವೆಗಳು ಮತ್ತು ಮುಂತಾದ ವಿಚಾರಗಳಲ್ಲಿ ತಮ್ಮ ಗ್ರಾಹಕರಿಗೆ ತಡೆರಹಿತ ಸೇವೆಗಳನ್ನು ನೀಡಲು ಪರಸ್ಪರ ಅನುವು ಮಾಡಿಕೊಡಲಿವೆ.

ವಿಸ್ತಾರಾ ಟಾಟಾ ಸನ್ಸ್​ ಪ್ರೈವೇಟ್ ಲಿಮಿಟೆಡ್​ ಹಾಗೂ ಸಿಂಗಪುರ ಏರ್​ಲೈನ್ಸ್​ನ ಜಂಟಿ ಉದ್ಯಮವಾಗಿದ್ದು, ಈ ಒಪ್ಪಂದವು ಸಿಂಗಪುರದಲ್ಲಿ 2017ರಲ್ಲಿ ಜಾರಿಗೆ ಬಂದ ಒಪ್ಪಂದವೊಂದರ ವಿಸ್ತರಣೆಯಾಗಿದೆ ಎಂದು ವಿಸ್ತಾರಾ ಮಾಹಿತಿ ನೀಡಿದೆ.

ಇದನ್ನೂ ಓದಿ:ಲಾಕ್​ಡೌನ್​ ಸಂಕಷ್ಟ: ನೌಕರರ ವೇತನ ಕಡಿತ ಘೋಷಿಸಿದ ''ವಿಸ್ತಾರಾ''

ಸಿಂಗಪುರ ಏರ್​ಲೈನ್ಸ್ ಹಾಗೂ ವಿಸ್ತಾರಾ ನಡುವೆ ಈ ಒಪ್ಪಂದದಿಂದಾಗಿ ಸಿಂಗಪುರ ಮತ್ತು ಭಾರತದ ನಡುವಿನ ಸಂಬಂಧದ ಜೊತೆಗೆ ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಪ್ರಮುಖ ಪ್ರದೇಶಗಳಲ್ಲಿ ಹೆಚ್ಚಿನ ಕಾರ್ಯಾಚರಣೆ ಮಾಡಲು ಸಹಕಾರಿಯಾಗುತ್ತದೆ.

ಈಗಾಗಲೇ ಕೊರೊನಾ ಕಾರಣದಿಂದಾಗಿ ವಿಮಾನಯಾನ ಉದ್ಯಮವು ಸಂಕಷ್ಟಕ್ಕೆ ಸಿಲುಕಿದ್ದು, ಈ ಒಪ್ಪಂದದಿಂದ ಎರಡೂ ವಿಮಾನಯಾನ ಸಂಸ್ಥೆಗಳು ಚೇತರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಅಂದಾಜು ಮಾಡಲಾಗಿದೆ.

ABOUT THE AUTHOR

...view details