ಕರ್ನಾಟಕ

karnataka

ETV Bharat / business

100 ಪರ್ಸೆಂಟ್​ ಸಾಲ ತೀರಿಸುತ್ತೇನೆ ನನ್ನನ್ನು ನಂಬಿ: ಬ್ಯಾಂಕ್​ಗಳಿಗೆ ವಿಜಯ್​ ಮಲ್ಯ ಕೋರಿದ್ದೇಕೆ? - Insolvency and Bankruptcy Code

ಕಿಂಗ್‌ಫಿಶರ್ ಏರ್‌ಲೈನ್ಸ್​ನ ಮಾಜಿ ಮುಖ್ಯಸ್ಥ ಮಲ್ಯ, ಬ್ಯಾಂಕ್​ಗಳಿಂದ ಪಡೆದ ಸಾಲದ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪಗಳಿಗೆ ಸಂಬಂಧಿಸಿದಂತೆ ಭಾರತಕ್ಕೆ ಹಸ್ತಾಂತರದ ವಿರುದ್ಧ ಲಂಡನ್​ನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಸಂಸತ್​ ಅಧಿವೇಶನದಲ್ಲಿ ಕಂಪನಿಗಳ ದಿವಾಳಿತನ ಸಂಹಿತೆಯ (ಐಬಿಸಿ) ನೂತನ ಮಸೂದೆ ಮಂಡಿಸಿದ್ದರು. ಇದನ್ನು ಉಲ್ಲೇಖಿಸಿ ಸಾರ್ವಜನಿಕ ವಲಯದ ಬ್ಯಾಂಕ್​ಗಳಿಗೆ ಸಾಲ ತೀರಿಸುವುದಾಗಿ ಮನವಿ ಮಾಡಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Aug 10, 2019, 10:31 PM IST

Updated : Aug 10, 2019, 10:56 PM IST

ಲಂಡನ್:ವಿವಿಧ ಬ್ಯಾಂಕ್​ಗಳಿಂದ ಬಹು ಸಾವಿರ ಕೋಟಿ ಸಾಲ ಪಡೆದು ಮರುಪಾವತಿಸದೇ ವಂಚಿಸಿ ಲಂಡನ್​ನಲ್ಲಿ ವಾಸವಾಗಿರುವ ಮದ್ಯದ ದೊರೆ ವಿಜಯ್​ ಮಲ್ಯ, ಸಾಲ ತೀರಿಸುವುದಾಗಿ ಖಾಸಗಿ ಬ್ಯಾಂಕ್​ಗಳಿಗೆ ಮನವಿ ಮಾಡಿದ್ದಾರೆ.

''ಈ ದೇಶದಲ್ಲಿನ ವ್ಯವಹಾರ ವೈಫಲ್ಯಗಳನ್ನು ನಿಷೇಧಿಸುವುದಾಗಲಿ ಅಥವಾ ಕೀಳಾಗಿ ಕಾಣಬಾರದು. ಇದಕ್ಕೆ ಬದಲಾಗಿ ಐಬಿಸಿ (ಕಂಪನಿಗಳ ದಿವಾಳಿತನ ಸಂಹಿತೆ) ಪತ್ರದ ಮುಖೇನ ಗೌರವಾನ್ವಿತ ನಿರ್ಗಮನಕ್ಕೆ ಅಥವಾ ಪರಿಹಾರ ಕಂಡುಕೊಳ್ಳಲು ಅನುವು ಮಾಡಿಕೊಡಬೇಕು. ಹಣಕಾಸು ಸಚಿವರ ವರದಿ ಹೇಳಿಕೆಯನ್ನು ಉಲ್ಲೇಖಿಸಿದ ಮಲ್ಯ 'ನಾನು ನೂರಕ್ಕೆ ನೂರರಷ್ಟು ಸಾಲ ತಿರಿಸುವ ಆಫರ್​ ಅನ್ನು ಪರಿಗಣಿಸಿ'' ಎಂದು ಬ್ಯಾಂಕ್​ಗಳಿಗೆ ಮನವಿ ಮಾಡಿ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕಿಂಗ್‌ಫಿಶರ್ ಏರ್‌ಲೈನ್ಸ್​ನ ಮಾಜಿ ಮುಖ್ಯಸ್ಥ ಮಲ್ಯ, ಬ್ಯಾಂಕ್​ಗಳಿಂದ ಪಡೆದ ಸಾಲದ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪಗಳಿಗೆ ಸಂಬಂಧಿಸಿದಂತೆ ಭಾರತಕ್ಕೆ ಹಸ್ತಾಂತರದ ವಿರುದ್ಧ ಲಂಡನ್​ನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್​ ಅಧಿವೇಶನದಲ್ಲಿ ಕಂಪನಿಗಳ ದಿವಾಳಿತನ ಸಂಹಿತೆಯ (ಐಬಿಸಿ) ನೂತನ ಮಸೂದೆ ಮಂಡಿಸಿದ್ದರು. ಇದನ್ನು ಉಲ್ಲೇಖಿಸಿ ಸಾರ್ವಜನಿಕ ವಲಯದ ಬ್ಯಾಂಕ್​ಗಳಿಗೆ ಸಾಲ ತೀರಿಸುವುದಾಗಿ ಮನವಿ ಮಾಡಿಕೊಂಡಿದ್ದಾರೆ.
Last Updated : Aug 10, 2019, 10:56 PM IST

ABOUT THE AUTHOR

...view details