ಕರ್ನಾಟಕ

karnataka

ETV Bharat / business

ಕೋರ್ಟ್ ವಶದಲ್ಲಿರುವ ಫಂಡ್​ನಿಂದ ಜೀವನ ನಿರ್ವಹಣೆಗಾಗಿ ಹಣ ಬಿಡುಗಡೆ ಕೋರಿ ಮಲ್ಯ​ ಅರ್ಜಿ - ವಿಜಯ್ ಮಲ್ಯ ಹಸ್ತಾಂತರ

ದಿವಾಳಿತನ ಮತ್ತು ಕಂಪನಿಗಳ ನ್ಯಾಯಾಲಯದ ನ್ಯಾಯಮೂರ್ತಿ ರಾಬರ್ಟ್ ಶಾಫರ್ ಅವರು ಈ ವರ್ಷದ ಆರಂಭದಲ್ಲಿ ಮಲ್ಯ ಅವರ ಫ್ರೆಂಚ್ ಐಷಾರಾಮಿ ಆಸ್ತಿ ಲೆ ಗ್ರ್ಯಾಂಡ್ ಜಾರ್ಡಿನ್ ಮಾರಾಟದಿಂದ ಗಳಿಸಿದ ಅಂದಾಜು 1.5 ದಶಲಕ್ಷ ಪೌಂಡ್‌ಗಳ ನ್ಯಾಯಾಲಯದ ನಿಧಿಯಿಂದ ಡ್ರಾ ಮಾಡಲು ಅವಕಾಶ ನೀಡಲು ನಿರಾಕರಿಸಿದ್ದರು.

Vijay Mallya
ವಿಜಯ್ ಮಲ್ಯ

By

Published : Dec 12, 2020, 4:39 AM IST

ಲಂಡನ್: ದಿವಾಳಿತನದ ವಿಚಾರಣೆಯ ಭಾಗವಾಗಿ ನ್ಯಾಯಾಲಯದ ಸುರ್ಪದಿಯಲ್ಲಿರುವ ಫಂಡ್ಸ್ ಕಚೇರಿ ನಿಧಿಯಿಂದ ತನ್ನ ಜೀವನ ವೆಚ್ಚ ಮತ್ತು ಕಾನೂನು ಹೋರಾಟದ ಶುಲ್ಕ ಭರಿಸಲು ಲಕ್ಷಾಂತರ ಪೌಂಡ್​​ ಪಡೆಯಲು ಅನುಮತಿ ಕೋರಿ ತಲೆಮರೆಸಿಕೊಂಡ ಮದ್ಯದ ಉದ್ಯಮಿ ವಿಜಯ್ ಮಲ್ಯ ಶುಕ್ರವಾರ ಯುಕೆ ಹೈಕೋರ್ಟ್​ಗೆ ತುರ್ತು ಅರ್ಜಿ ಸಲ್ಲಿಸಿದ್ದಾರೆ.

ಭಾರತೀಯ ಬ್ಯಾಂಕ್​ಗಳಿಂದ ಸಾಲ ಪಡೆದು ಮರುಪಾವತಿಸಿದೆ ತಲೆ ಮರೆಸಿಕೊಂಡ ವಿಜಯ್ ಮಲ್ಯ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಭಾರತೀಯ ಬ್ಯಾಂಕ್​ಗಳ ಒಕ್ಕೂಟ ಯುಕೆ ಕೋರ್ಟ್​ನಲ್ಲಿ ದೂರ ಸಲ್ಲಿಸಿದೆ.

ಫೆರಾರಿ ಸಿಇಒ ಹುದ್ದೆಗೆ ಲೂಯಿಸ್‌ ಕ್ಯಾಮಿಲ್ಲೇರಿ ರಾಜೀನಾಮೆ

ದಿವಾಳಿತನ ಮತ್ತು ಕಂಪನಿಗಳ ನ್ಯಾಯಾಲಯದ ನ್ಯಾಯಮೂರ್ತಿ ರಾಬರ್ಟ್ ಶಾಫರ್ ಅವರು ಈ ವರ್ಷದ ಆರಂಭದಲ್ಲಿ ಮಲ್ಯ ಅವರ ಫ್ರೆಂಚ್ ಐಷಾರಾಮಿ ಆಸ್ತಿ ಲೆ ಗ್ರ್ಯಾಂಡ್ ಜಾರ್ಡಿನ್ ಮಾರಾಟದಿಂದ ಗಳಿಸಿದ ಅಂದಾಜು 1.5 ದಶಲಕ್ಷ ಪೌಂಡ್‌ಗಳ ನ್ಯಾಯಾಲಯದ ನಿಧಿಯಿಂದ ಡ್ರಾ ಮಾಡಲು ಅವಕಾಶ ನೀಡಲು ನಿರಾಕರಿಸಿದ್ದರು.

ಮುಂದಿನ ಶುಕ್ರವಾರ ನಡೆಯಲಿರುವ ದಿವಾಳಿತನದ ವಿಚಾರಣೆಯಲ್ಲಿ ಸಬ್​ಸ್ಟಾಂಟಿವ್ ವಿಚಾರಣೆಯ ಕಾನೂನು ವೆಚ್ಚ ಭರಿಸಲು 240,000 ಪೌಂಡ್ ಮತ್ತು ವ್ಯಾಟ್ ಬಿಡುಗಡೆಗೆ ಅವರು ಅವಕಾಶ ನೀಡಿದರು.

ಮುಂದಿನ ವಾರದ ವಿಚಾರಣೆ ಶುಲ್ಕವನ್ನು ಒಳಗೊಂಡ ಒಂದು ಎಚ್ಚರಿಕೆಯಾಗಿ ನಾನು ಈ ವಿಚಾರಣೆಯನ್ನು ಮುಂದೂಡುತ್ತೇನೆ ಎಂದು ನ್ಯಾಯಮೂರ್ತಿ ಶಾಫರ್ ಶುಕ್ರವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಸೂಚಿಸಿದ್ದಾರೆ.

ABOUT THE AUTHOR

...view details