ವಾಷಿಂಗ್ಟನ್ :ಕೊರೊನಾ ಸೋಂಕಿನ ವಿರುದ್ಧ ಭಾರತದ ಹೋರಾಟದಲ್ಲಿ ಕೈಜೋಡಿಸಲು ಜಾಗತಿಕ ಸಮುದಾಯ ಮುಂದೆ ಬಂದಿದೆ. ಅನೇಕ ರಾಷ್ಟ್ರಗಳು ಈಗಾಗಲೇ ತಮ್ಮ ಬೆಂಬಲ ಘೋಷಿಸಿವೆ.
ಇತ್ತೀಚೆಗೆ ಅಮೆರಿಕದ ವ್ಯಾಪಾರ ಸಮುದಾಯವು ಒಗ್ಗಟ್ಟಿನಿಂದ ಧ್ವನಿಗೂಡಿಸಿ, ಸೂಪರ್ ಪವರ್ನ ಸುಮಾರು 40 ಅಗ್ರ ಕಂಪನಿಗಳು ಒಟ್ಟಾಗಿ ಭಾರತಕ್ಕೆ ಅಗತ್ಯ ನೆರವು ನೀಡಲು ಕಾರ್ಯಪಡೆ ರಚಿಸಲು ನಿರ್ಧರಿಸಿವೆ.
ಸಮಾರಂಭದಲ್ಲಿ ಯುಎಸ್ ಚೇಂಬರ್ಸ್ ಆಫ್ ಕಾಮರ್ಸ್‌ನ ಯುಎಸ್-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್, ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಮತ್ತು ಪಾರ್ಟ್‌ನರ್‌ಶಿಪ್ ಫೋರಮ್ ಮತ್ತು ಬ್ಯುಸಿನೆಸ್ ರೌಂಡ್‌ಟೇಬಲ್ ಮತ್ತು ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಬ್ಯುಸಿನೆಸ್ ಮತ್ತು ಪಾರ್ಟ್‌ನರ್‌ಶಿಪ್ ಫೋರಂ ಭಾಗವಹಿಸಿದ್ದವು. ವ್ಯಾಪಾರ ಸಂಘಗಳ ಮೇಲ್ವಿಚಾರಣೆ ಕುರಿತು ಸೋಮವಾರ ಸಭೆ ನಡೆಸಲಾಯಿತು.
ಮುಂದಿನ ಕೆಲವು ವಾರಗಳಲ್ಲಿ ಸುಮಾರು 20,000 ಆಕ್ಸಿಜನ್ ಸಾಂದ್ರಕಗಳನ್ನು ಭಾರತಕ್ಕೆ ಕಳುಹಿಸಲು ಕಂಪನಿ ನಿರ್ಧರಿಸಿದೆ ಎಂದು ಡೆಲಾಯ್ಟ್ ಸಿಇಒ ಪುನೀತ್ ರೆನ್ಜೆನ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಭಾರತಕ್ಕೆ ಪ್ರಮುಖ ವೈದ್ಯಕೀಯ ಉಪಕರಣಗಳು, ಲಸಿಕೆಗಳು ಮತ್ತು ಆಮ್ಲಜನಕ ಸೇರಿದಂತೆ ಇತರ ಪ್ರಮುಖ ಸರಬರಾಜುಗಳನ್ನು ಒದಗಿಸಲಾಗುತ್ತದೆ ಎಂದು ಕಾರ್ಯಪಡೆಯ ಮೂಲಗಳು ತಿಳಿಸಿವೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಅವರು ದೇಶದಲ್ಲಿ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ಕಾರ್ಪೊರೇಟ್ ಸಂಸ್ಥೆಗಳಿಂದ ಅಂತಾರಾಷ್ಟ್ರೀಯ ಕಾರ್ಯಪಡೆ ಸ್ಥಾಪಿಸುವುದು ಇದೇ ಮೊದಲು ಎಂದು ಹೇಳಿದ್ದಾರೆ.