ಕರ್ನಾಟಕ

karnataka

ETV Bharat / business

ಭಾರತದ ಭದ್ರತೆಗೆ ಮತ್ತಷ್ಟು ಬಲ ನೀಡಲಿದೆಯಾ ಟ್ರಂಪ್​- ಮೋದಿ ಒಪ್ಪಂದ? - maiden visit of US President Donald Trump to India

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬಹುನಿರೀಕ್ಷಿತ ಭಾರತ ಪ್ರವಾಸಕ್ಕೆ ಇನ್ನೆರಡೇ ದಿನ ಬಾಕಿ ಇದೆ. ಟ್ರಂಪ್ ಚೊಚ್ಚಲ ಭೇಟಿ ಸಂದರ್ಭದಲ್ಲಿ ಪ್ರಮುಖ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ.

US President Donald Trump to India on February 24-25
ಭಾರತದ ಭದ್ರತೆಗೆ ಮತ್ತಷ್ಟು ಬಲ ನೀಡಲು ಟ್ರಂಪ್​- ಮೋದಿ ಒಪ್ಪಂದ

By

Published : Feb 23, 2020, 6:02 AM IST

ಹೈದರಾಬಾದ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬಹುನಿರೀಕ್ಷಿತ ಭಾರತ ಪ್ರವಾಸಕ್ಕೆ ಇನ್ನೆರಡೇ ದಿನ ಬಾಕಿ ಇದೆ. ಟ್ರಂಪ್ ಚೊಚ್ಚಲ ಭೇಟಿ ಸಂದರ್ಭದಲ್ಲಿ ಪ್ರಮುಖ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಟ್ರಂಪ್‌ ಭಾರತ ಭೇಟಿ ದಿನಗಳು ಹತ್ತಿರವಾಗುತ್ತಿದ್ದಂತೆ ಎರಡೂ ದೇಶಗಳ ನಡುವಿನ ವ್ಯವಹಾರಿಕ ಸಂಬಂಧವನ್ನು ಮತ್ತಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆಯಿಟ್ಟಿದೆ.

ಭಾರತದ ಭದ್ರತೆಗೆ ಮತ್ತಷ್ಟು ಬಲ ನೀಡಲು ಟ್ರಂಪ್​- ಮೋದಿ ಒಪ್ಪಂದ

ಅಮೆರಿಕದ​​ ಲಾಕ್‌ಹೀಡ್‌ ಮಾರ್ಟಿನ್ ಕಂಪನಿಯೊಂದಿಗೆ 2.6 ಬಿಲಿಯನ್ ಡಾಲರ್​​​​ ಮೊತ್ತದಲ್ಲಿ ವಿಶ್ವದ ಅತ್ಯಾಧುನಿಕ 24 ಎಂ.ಎಚ್‌ ಮಾದರಿಯ ಸೇನಾ ಹೆಲಿಕಾಪ್ಟರ್​ ಮತ್ತು 24 ಎಂ.ಎಚ್‌-60R ಸೀಹಾಕ್​ ಹೆಲಿಕಾಪ್ಟರ್​ ಖರೀದಿ ಒಪ್ಪಂದಕ್ಕೆ ಅಂತಿಮ ಸ್ಪರ್ಶ ನೀಡುವಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ ಎಂದು ಸರ್ಕಾರ ಮತ್ತು ಕೈಗಾರಿಕಾ ಇಲಾಖೆ ಮೂಲಗಳು ತಿಳಿಸಿವೆ.

ಏಪ್ರಿಲ್​ನಲ್ಲೇ ಸಿಕ್ಕಿತ್ತು ಅನುಮತಿ:

ಸೀಹಾಕ್​ ಹೆಲಿಕಾಪ್ಟರ್​ಗಳನ್ನು ಭಾರತಕ್ಕೆ ಪೂರೈಕೆಗೆ ಕಳೆದ ಏಪ್ರಿಲ್​​ನಲ್ಲೇ ಅಮೆರಿಕ ಒಪ್ಪಿಗೆ ನೀಡಿತ್ತು. ಸೆಕೆಂಡ್​ಗಳಲ್ಲಿ ಶತ್ರುಗಳನ್ನು ಭೇಟೆಯಾಡುವ ರೀತಿ ಭಾರತಕ್ಕೆ ಹಸ್ತಾಂತರಿಸಲಾಗುವ ಸೀಹಾಕ್​ ಹೆಲಿಕಾಪ್ಟರ್, ಜಲಾಂತರ್ಗಾಮಿ ನೌಕೆಗಳನ್ನು ವಿನ್ಯಾಸಗೊಳಿಸಲಾಗಿದೆ. ಅಷ್ಟೇ ಅಲ್ಲ, ಕಡಲಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಸಂವೇದಕಗಳನ್ನು ಅಳವಡಿಸಲಾಗಿದೆ. ಅತ್ಯಂತ ಪ್ರಬಲ ಶಕ್ತಿಯುಳ್ಳ ಮಿಷನ್​ ಎನಿಸಿಕೊಂಡಿರುವ MK-46 ಮತ್ತು MK-54 ಹೆಲಿಕಾಪ್ಟರ್​ಗಳು ಶತ್ರುಗಳನ್ನು ಸೆದೆಬಡಿಯಲು ಸಮಯಕ್ಕೆ ತಕ್ಕಂತೆ ಬದಲಾಗುವ ಸಾಮರ್ಥ್ಯ ಹೊಂದಿರೋದು ವಿಶೇಷ.

ಏನಿದು ಇಂಟಿಗ್ರೆಟೆಡ್​ ಏರ್​ ಡಿಫೆನ್ಸ್​ ಸಿಸ್ಟಮ್​?

ಇನ್ನು 1.9 ಬಿಲಿಯನ್ ಡಾಲರ್​ ವೆಚ್ಚದಲ್ಲಿ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್ ಅನ್ನು ಭಾರತಕ್ಕೆ ಮಾರಾಟ ಮಾಡಲು ವಾಷಿಂಗ್ಟನ್ ಅನುಮೋದನೆ ನೀಡಿದೆ. ಇದಕ್ಕೆ ಪ್ರಧಾನಿ ಮೋದಿ ಮತ್ತು ಡೋನಾಲ್ಡ್​ ಟ್ರಂಪ್​ ಈ ಒಪ್ಪಂದಕ್ಕೂ ಸಹಿ ಹಾಕುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಅಮೆರಿಕದಲ್ಲಿ ಜರುಗಿದ ಹೌಡಿ ಮೋದಿ ಮಾದರಿಯಲ್ಲಿಯೇ ಅಹಮದಾಬಾದ್‌ನಲ್ಲಿ ಇದೇ 24ಕ್ಕೆ ನಮಸ್ತೆ ಟ್ರಂಪ್​ ಕಾರ್ಯಕ್ರಮ ಜರುಗಲಿದೆ.

ABOUT THE AUTHOR

...view details