ವಾಷಿಂಗ್ಟನ್:ಉದ್ದೇಶಿತ ಉಪಗ್ರಹ ಒಪ್ಪಂದ ರದ್ದುಗೊಳಿಸಿದ್ದಕ್ಕಾಗಿ ಬೆಂಗಳೂರು ಮೂಲದ ಸ್ಟಾರ್ಟ್ಅಪ್ ದೇವಾಸ್ ಮಲ್ಟಿಮೀಡಿಯಾಗೆ 1.2 ಬಿಲಿಯನ್ ಡಾಲರ್ (8,952 ಕೋಟಿ ರೂ.) ಪರಿಹಾರ ನೀಡುವಂತೆ ಅಮೆರಿಕದ ನ್ಯಾಯಾಲಯ ಇಸ್ರೋದ ವಾಣಿಜ್ಯ ವಿಭಾಗದ ಆಂಟ್ರಿಕ್ಸ್ ಕಾರ್ಪೊರೇಷನ್‌ಗೆ ಸೂಚಿಸಿದೆ.
2005ರ ಜನವರಿಯಲ್ಲಿನ ಒಪ್ಪಂದದ ಪ್ರಕಾರ, ಆಂಟ್ರಿಕ್ಸ್ ಎರಡು ಉಪಗ್ರಹಗಳ ನಿರ್ಮಿಸಿ ಉಡಾವಣೆ ಮಾಡಲು ಮತ್ತು ನಿರ್ವಹಿಸಲು 70 ಎಂಎಚ್ಝಡ್ ಎಸ್ - ಬ್ಯಾಂಡ್ ಸ್ಪೆಕ್ಟ್ರಮ್ ಅನ್ನು ದೇವಾಸ್ಗೆ ಲಭ್ಯವಾಗುವಂತೆ ಒಪ್ಪಿಕೊಂಡಿತ್ತು. ನಂತರ ಭಾರತದಾದ್ಯಂತ ಹೈಬ್ರಿಡ್ ಉಪಗ್ರಹ ಮತ್ತು ಭೂ ಸಂವಹನ ಸೇವೆಗಳನ್ನು ನೀಡಲು ಯೋಜಿಸಿದರು.