ಕರ್ನಾಟಕ

karnataka

ETV Bharat / business

ಭಾರತದ ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ಇಟಲಿ ಒಲವು.. ಕೇಂದ್ರ ಪೆಟ್ರೋಲಿಯಂ ಸಚಿವ

ಭಾರತದ ಇಂಧನ ಮೂಲಸೌಕರ್ಯ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುತ್ತದೆ. ಲಿಕ್ವಿಡ್​ ನೈಟ್ರೋಜೆನ್​ ಅನಿಲ ಸಂಗ್ರಹಣೆ ಮತ್ತು ಹೈಡ್ರೋಜೆನ್ ಇಂಧನ ಕ್ಷೇತ್ರದಲ್ಲಿ ಭಾರತದೊಂದಿಗೆ ಸಹಕರಿಸಲು ಎಸ್‌ಎನ್‌ಎಎಂ ಉತ್ಸುಕವಾಗಿದೆ..

energy sector
ಇಂಧನ ಕ್ಷೇತ್ರ

By

Published : Jul 21, 2020, 9:31 PM IST

Updated : Jul 22, 2020, 2:46 AM IST

ನವದೆಹಲಿ :ಇಂಧನ ಕ್ಷೇತ್ರದಲ್ಲಿ ಭಾರತ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.

ಇಟಲಿಯ ಭಾರತದ ರಾಯಭಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಅವರು, ಇಂಧನ ಸಚಿವಾಲಯವು ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುತ್ತದೆ. ಇಟಲಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ ಎಂದರು.

ಈ ಸಭೆ ಬಹಳ ಫಲಪ್ರದವಾಗಿತ್ತು. ನಾವು ವಿವಿಧ ಶ್ರೇಣಿಯ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಇಂಧನ ಮೂಲಸೌಕರ್ಯ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಎಸ್‌ಎನ್‌ಎಎಂ ಅವರೊಂದಿಗೆ ಸಂವಹನ ನಡೆಸಿದ್ದೇನೆ. ಕಳೆದ 75 ವರ್ಷಗಳಿಂದ ಯುರೋಪಿನಾದ್ಯಂತ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಭಾರತದ ಇಂಧನ ಮೂಲಸೌಕರ್ಯ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುತ್ತದೆ. ಲಿಕ್ವಿಡ್​ ನೈಟ್ರೋಜೆನ್​ ಅನಿಲ ಸಂಗ್ರಹಣೆ ಮತ್ತು ಹೈಡ್ರೋಜೆನ್ ಇಂಧನ ಕ್ಷೇತ್ರದಲ್ಲಿ ಭಾರತದೊಂದಿಗೆ ಸಹಕರಿಸಲು ಎಸ್‌ಎನ್‌ಎಎಂ ಉತ್ಸುಕವಾಗಿದೆ.

ಇದು ನೈಸರ್ಗಿಕ ಅನಿಲ ಮೌಲ್ಯ ಸರಪಳಿಯಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗಲಿದೆ. ಇದು ಭಾರತವನ್ನು ಅನಿಲ ಆಧಾರಿತ ಆರ್ಥಿಕತೆಯಾಗಿ ಪರಿವರ್ತಿಸುತ್ತದೆ ಎಂದು ಪ್ರಧಾನ್ ತಿಳಿಸಿದರು.

Last Updated : Jul 22, 2020, 2:46 AM IST

ABOUT THE AUTHOR

...view details