ಕರ್ನಾಟಕ

karnataka

ETV Bharat / business

ಸರ್ಕಾರಿ ಕಚೇರಿ, ಸಚಿವಾಲಯಗಳ ಅನಗತ್ಯ ವೆಚ್ಚಗಳಿಗೆ ಬ್ರೇಕ್​: ಶೇ. 20ರಷ್ಟು ಖರ್ಚು ಕಟ್ - ಭಾರತದಲ್ಲಿ ಕೋವಿಡ್ -19 ಪ್ರಕರಣ

ಜಾಹೀರಾತುಗಳು, ಪ್ರಚಾರ, ಅಧಿಕಾವಧಿ ಭತ್ಯೆ, ರಿವಾರ್ಡ್ಸ್​, ದೇಶೀಯ ಮತ್ತು ವಿದೇಶಿ ಪ್ರಯಾಣ ವೆಚ್ಚ, ಸಣ್ಣ ನಿರ್ವಹಣಾ ಕಾರ್ಯಗಳ ಶೇ. 20ರಷ್ಟು ವೆಚ್ಚ ಕಡಿತಕ್ಕೆ ಗುರಿಯಾಗಬೇಕೆಂದು ಕೇಂದ್ರ ಹಣಕಾಸು ಸಚಿವಾಲಯವು ಎಲ್ಲಾ ಸರ್ಕಾರಿ ಸಚಿವಾಲಯಗಳು ಮತ್ತು ಇಲಾಖೆಗಳ ಕೆಲವು ಕ್ಷೇತ್ರಗಳಿಗೆ ಸೂಚಿಸಿದೆ.

Union Finance Ministry
Union Finance Ministry

By

Published : Jun 12, 2021, 10:12 AM IST

ನವದೆಹಲಿ:ಹೆಚ್ಚುತ್ತಿರುವ ಕೋವಿಡ್ ಸಂಬಂಧಿತ ಬಿಲ್​​ಗಳಿಂದ ಹಣಕಾಸಿನ ಕೊರತೆಯು ಜಿಡಿಪಿಯ ಶೇ. 6.8ರಷ್ಟು 2022ರ ಹಣಕಾಸು ವರ್ಷದ ಗುರಿ ಮೀರಬಹುದೆಂಬ ಆತಂಕದ ಮಧ್ಯೆ ಅಧಿಕಾವಧಿ ಭತ್ಯೆ ಮತ್ತು ಪ್ರಯಾಣದಂತಹ ತಪ್ಪಿಸಬಹುದಾದ ವ್ಯರ್ಥ ಮತ್ತು ನಿಯಂತ್ರಿಸಬಹುದಾದ ವೆಚ್ಚಗಳನ್ನು ಶೇ. 20ರಷ್ಟು ಕಡಿತಗೊಳಿಸುವಂತೆ ಕೇಂದ್ರ ಸರ್ಕಾರ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಕೇಳಿದೆ.

ಜಾಹೀರಾತುಗಳು, ಪ್ರಚಾರ, ಅಧಿಕಾವಧಿ ಭತ್ಯೆ, ರಿವಾರ್ಡ್ಸ್​, ದೇಶೀಯ ಮತ್ತು ವಿದೇಶಿ ಪ್ರಯಾಣ ವೆಚ್ಚ, ಸಣ್ಣ ನಿರ್ವಹಣಾ ಕಾರ್ಯಗಳ ಶೇ. 20ರಷ್ಟು ವೆಚ್ಚ ಕಡಿತಕ್ಕೆ ಗುರಿಯಾಗಬೇಕೆಂದು ಕೇಂದ್ರ ಹಣಕಾಸು ಸಚಿವಾಲಯವು ಎಲ್ಲಾ ಸರ್ಕಾರಿ ಸಚಿವಾಲಯಗಳು ಮತ್ತು ಇಲಾಖೆಗಳ ಕೆಲವು ಕ್ಷೇತ್ರಗಳಿಗೆ ಸೂಚಿಸಿದೆ. ಕೋವಿಡ್-19 ಲಸಿಕೆಗಳ ಕೇಂದ್ರೀಕೃತ ಖರೀದಿ ಮತ್ತು ಉಚಿತ ಆಹಾರ ಪಡಿತರ ಕಾರ್ಯಕ್ರಮಕ್ಕಾಗಿ ಸರ್ಕಾರವು ಹೆಚ್ಚಿನ ವೆಚ್ಚವನ್ನು ಎದುರಿಸುತ್ತಿರುವ ಸಮಯದಲ್ಲಿ ಇಂತಹ ನಿರ್ಧಾರ ಹೊರ ಬರುತ್ತಿದೆ.

ಹಣಕಾಸು ಸಚಿವಾಲಯವು ಮುಖ್ಯಸ್ಥರ ಸೂಚಕ ಪಟ್ಟಿಯನ್ನು ಹಂಚಿಕೊಂಡಿದ್ದು, ಅದರ ಅಡಿಯಲ್ಲಿ ವೆಚ್ಚ ನಿಯಂತ್ರಿಸಲಾಗುತ್ತದೆ. ಪಟ್ಟಿಯಲ್ಲಿ ಅಧಿಕಾವಧಿ ಭತ್ಯೆ, ರಿವಾರ್ಡ್ಸ್​, ದೇಶೀಯ ಪ್ರಯಾಣ ವೆಚ್ಚಗಳು, ವಿದೇಶಿ ಪ್ರಯಾಣ ವೆಚ್ಚಗಳು, ಕಚೇರಿ ವೆಚ್ಚಗಳು, ಬಾಡಿಗೆಗಳು, ದರ ಮತ್ತು ತೆರಿಗೆಗಳು, ರಾಜಧನ, ಪಬ್ಲಿಕೇಷನ್​, ಇತರ ಆಡಳಿತಾತ್ಮಕ ವೆಚ್ಚಗಳು, ಸರಬರಾಜು ಮತ್ತು ಸಾಮಗ್ರಿಗಳು, ಪಡಿತರ ವೆಚ್ಚ, ಬಟ್ಟೆ ಮತ್ತು ಟೆಂಟೇಜ್, ಜಾಹೀರಾತು ಮತ್ತು ಪ್ರಚಾರ, ಸಣ್ಣ ಕೃತಿಗಳು ಮತ್ತು ನಿರ್ವಹಣೆ, ಸೇವೆ ಅಥವಾ ಬದ್ಧತೆ ಶುಲ್ಕಗಳು, ಅನುದಾನದಲ್ಲಿ ಸಾಮಾನ್ಯ, ಕೊಡುಗೆ ಮತ್ತು ಇತರ ಶುಲ್ಕಗಳ ಕಡಿತವನ್ನು ಕಚೇರಿಯ ಜ್ಞಾಪಕ ಪತ್ರದಲ್ಲಿ ಉಲ್ಲೇಖಿಸಿದೆ.

ಓದಿ: ಮುಖ್ಯವಾಹಿನಿ ಮಾಧ್ಯಮಗಳಿಗೆ ಹೊಸ ಐಟಿ ನಿಯಮಗಳಿಂದ ವಿನಾಯಿತಿ ನೀಡಲು ಸರ್ಕಾರ ನಕಾರ

ಸಲಹೆಗಳ ಪಟ್ಟಿಯನ್ನು ಎಲ್ಲಾ ಕಾರ್ಯದರ್ಶಿಗಳು ಮತ್ತು ಸಚಿವಾಲಯಗಳು ಮತ್ತು ಇಲಾಖೆಗಳ ಹಣಕಾಸು ಸಲಹೆಗಾರರಿಗೆ ಕಳುಹಿಸಲಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಂಬಂಧಿಸಿದ ವೆಚ್ಚವನ್ನು ಈ ಆದೇಶದ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

ಎಲ್ಲಾ ಸಚಿವಾಲಯಗಳು / ಇಲಾಖೆಗಳು ವ್ಯರ್ಥ / ತಪ್ಪಿಸಬಹುದಾದ ವೆಚ್ಚವನ್ನು ನಿಗ್ರಹಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ನಿಯಂತ್ರಿಸಬಹುದಾದ ಖರ್ಚಿನಲ್ಲಿ ಶೇ. 20ರಷ್ಟು ಕಡಿತಗೊಳಿಸುವ ಗುರಿ ಹೊಂದಿರಬೇಕು ಎಂದು ಸರ್ಕಾರ ನಿರ್ಧರಿಸಿದೆ. ಈ ವಿಷಯದ ಪ್ರಗತಿಯನ್ನು ಪರಿಶೀಲಿಸಲು ಖರ್ಚು ಇಲಾಖೆಗೆ ನಿರ್ದೇಶಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ABOUT THE AUTHOR

...view details