ನವದೆಹಲಿ: ಕೇಂದ್ರ ಸಚಿವ ಸಂಪುಟವು ಸಂಘಟಿತ ಮತ್ತು ಅಸಂಘಟಿತ ವಲಯಗಳ 40 ಕೋಟಿ ಕಾರ್ಮಿಕರಿಗೆ ಅನುಕೂಲವಾಗುವಂತಹ 'ಕಾರ್ಮಿಕ ಸುರಕ್ಷತಾ ಸಂಹಿತೆ' ಜಾರಿಗೆಗೆ ಅನುಮೋದನೆ ನೀಡಿದೆ.
40 ಕೋಟಿ ಕಾರ್ಮಿಕರ ಸುರಕ್ಷತೆಗೆ ಕೇಂದ್ರದ ಮಹತ್ವದ ನಿರ್ಧಾರ -
ಕೇಂದ್ರ ಸಚಿವ ಸಂಪುಟವು ಕಾರ್ಮಿಕರ ಸುರಕ್ಷತಾ ಸಂಹಿತೆಗೆ ಅನುಮತಿ ನೀಡಿದೆ. ಕಳೆದ ವಾರ ವೇತನ ಸಂಹಿತೆ ವಿಧೇಯಕ ಜಾರಿಗೊಳಿಸಿದ ಬಳಿಕ ಸರ್ಕಾರವು ಅಂಗೀಕರಿಸಿದ ಎರಡನೇ ಪ್ರಮುಖ ಕಾರ್ಮಿಕ ಸುಧಾರಣೆ ಇದಾಗಿದೆ: ಪ್ರಕಾಶ್ ಜಾವಡೇಕರ್

ಸಾಂದರ್ಭಿಕ ಚಿತ್ರ
ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿ, ಕೇಂದ್ರ ಸಚಿವ ಸಂಪುಟವು ಕಾರ್ಮಿಕರ ಸುರಕ್ಷತಾ ಸಂಹಿತೆಗೆ ಅನುಮತಿ ನೀಡಿದೆ. ಕಳೆದ ವಾರ ವೇತನ ಸಂಹಿತೆ ವಿಧೇಯಕ ಜಾರಿಗೊಳಿಸಿದ ಬಳಿಕ ಸರ್ಕಾರವು ಅಂಗೀಕರಿಸಿದ ಎರಡನೇ ಪ್ರಮುಖ ಕಾರ್ಮಿಕ ಸುಧಾರಣೆ ಇದ್ದಾಗಿದೆ ಎಂದು ಹೇಳಿದ್ದಾರೆ.
ಅನುಮೋದಿತ ಸಂಹಿತೆಯಿಂದ ಸಂಘಟಿತ ಮತ್ತು ಅಸಂಘಟಿತ ಕ್ಷೇತ್ರಗಳ ನೌಕರರಿಗೆ ಕನಿಷ್ಠ ವೇತನದ ಪ್ರಯೋಜನ ದೊರೆಯಲಿದೆ. ಉದ್ಯೋಗ, ಸುರಕ್ಷಾ, ಆರೋಗ್ಯ ಮತ್ತು ಕೆಲಸು ಅವಧಿಯು ಈ ವಿಧೇಯಕ ಒಳಗೊಳ್ಳಲಿದೆ. ಇದರಿಂದ 40 ಕೋಟಿ ಕಾರ್ಮಿಕರಿಗೆ ಪ್ರಯೋಜನವಾಗಲಿದೆ ಎಂದು ವಿವರಿಸಿದ್ದಾರೆ.