ಕರ್ನಾಟಕ

karnataka

ETV Bharat / business

ಸಂಕೀರ್ಣ ರಸಗೊಬ್ಬರಗಳಿಗೆ ಸಬ್ಸಿಡಿ ಹೆಚ್ಚಿಸುವ ಪ್ರಸ್ತಾಪ ಅನುಮೋದಿಸಿದ ಕೇಂದ್ರ ಸಚಿವ ಸಂಪುಟ - ಸಂಕೀರ್ಣ ರಸಗೊಬ್ಬರಗಳಿಗೆ ಸಬ್ಸಿಡಿ ಹೆಚ್ಚಳ

ಸಂಕೀರ್ಣ ರಸಗೊಬ್ಬರಗಳಿಗೆ ಸಹಾಯಧನವನ್ನು ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಜೊತೆಗೆ ಹಿಂದೂ ಮಹಾಸಾಗರದ ಖನಿಜ ಸಂಪತ್ತನ್ನು ಅಧ್ಯಯನ ಮಾಡುವ ಆಳವಾದ ಸಾಗರ ಕಾರ್ಯಾಚರಣೆಗೆ ಕ್ಯಾಬಿನೆಟ್ ಅಸ್ತು ಎಂದಿದೆ..

javdekar
javdekar

By

Published : Jun 16, 2021, 5:20 PM IST

ನವದೆಹಲಿ :ಸಂಕೀರ್ಣ ರಸಗೊಬ್ಬರಗಳಿಗೆ ಸಹಾಯಧನವನ್ನು ಹೆಚ್ಚಿಸುವ ರಸಗೊಬ್ಬರ ಇಲಾಖೆಯ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ನಿರ್ಧಾರವನ್ನು ಪ್ರಕಟಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ: “ಡಿಎಪಿ ಗೊಬ್ಬರದ ಮೇಲಿನ ಸಬ್ಸಿಡಿಯನ್ನು ಕ್ಯಾಬಿನೆಟ್ ಪ್ರತಿ ಚೀಲಕ್ಕೆ 700 ರೂ.ಗೆ ಏರಿಸಿದೆ ಎಂದು ಹೇಳಿದ್ದಾರೆ.

ಮತ್ತೊಂದು ಪ್ರಮುಖ ನಿರ್ಧಾರದಲ್ಲಿ, ಹಿಂದೂ ಮಹಾಸಾಗರದ ಖನಿಜ ಸಂಪತ್ತನ್ನು ಅಧ್ಯಯನ ಮಾಡುವ ಆಳವಾದ ಸಾಗರ ಕಾರ್ಯಾಚರಣೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.

ಈ ನಿರ್ಧಾರದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, ಈ ನಿರ್ಧಾರವು ಭಾರತದ ಆರಂಭಿಕ ಉದ್ಯಮಗಳಿಗೆ ಮಾತ್ರವಲ್ಲದೆ ಆತ್ಮನಿರ್ಭಾರ ಭಾರತ ಅಭಿಯಾನದ ಪ್ರಧಾನಮಂತ್ರಿಗಳ ದೃಷ್ಟಿಗೆ ಉತ್ತೇಜನ ನೀಡುತ್ತದೆ ಎಂದು ಹೇಳಿದರು.

ABOUT THE AUTHOR

...view details