ಕರ್ನಾಟಕ

karnataka

ETV Bharat / business

ಕೊರೊನಾ ಕಾಲದಲ್ಲಿ ಅನ್ನದಾತರಿಗೆ ಸಿಹಿ ಸುದ್ದಿ: ಎಲ್ಲಾ ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ - ಕನಿಷ್ಠ ಬೆಂಬಲ ಬೆಲೆ

ಭತ್ತದ ಎಂಎಸ್‌ಪಿ (ಸಾಮಾನ್ಯ) ಕ್ವಿಂಟಲ್‌ಗೆ 72 ರೂ.ಯಷ್ಟು ಏರಿಕೆ ಮಾಡಲಾಗಿದೆ. 2020-21ರಲ್ಲಿ ಇದು ಕ್ವಿಂಟಲ್‌ಗೆ 1,868 ರೂ. ಇದ್ದದ್ದು, 2021-22ರಲ್ಲಿ ಕ್ವಿಂಟಲ್‌ಗೆ 1,940 ರೂ.ಗೆ ಹೆಚ್ಚಿಸಲಾಗಿದೆ. ಹಿಂದಿನ ವರ್ಷಕ್ಕಿಂತ ಎಂಎಸ್‌ಪಿಯಲ್ಲಿ ಗರಿಷ್ಠ ಹೆಚ್ಚಳವನ್ನು ಎಳ್ಳಿನ (ಕ್ವಿಂಟಲ್‌ಗೆ 452 ರೂ.) ಫಸಲಿನದ್ದಾಗಿದೆ. ಈ ನಂತರ ತೊಗರಿ ಮತ್ತು ಉದ್ದು (ತಲಾ 300 ರೂ.) ಏರಿಕೆಗೆ ಶಿಫಾರಸು ಮಾಡಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

kharif crops
kharif crops

By

Published : Jun 9, 2021, 5:04 PM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ (ಸಿಸಿಇಎ) ಸಭೆಯು 2021-22ರ ಸಾಲಿನ ಮಾರುಕಟ್ಟೆ ಋತುವಿನಲ್ಲಿ ಕಡ್ಡಾಯವಾಗಿ ಎಲ್ಲಾ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಹೆಚ್ಚಳದ ಅನುಮೋದನೆ ನೀಡಿದೆ.

ಮಾರುಕಟ್ಟೆ ಋತುವಿನ 2021-22ರಲ್ಲಿ ಖಾರಿಫ್ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಳವು ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚದ (ಕೋಪ್) ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ದರ ಸರಿಪಡಿಸುವ ಕೇಂದ್ರ ಬಜೆಟ್ 2018-19ರ ಘೋಷಣೆಗೆ ಅನುಗುಣವಾಗಿದೆ. ಕಳೆದ ವರ್ಷ ಅಂಗೀಕರಿಸಿದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಈ ಹೆಚ್ಚಳ ಹೊರಬಿದ್ದಿದೆ.

ಭತ್ತದ ಎಂಎಸ್‌ಪಿ (ಸಾಮಾನ್ಯ) ಕ್ವಿಂಟಲ್‌ಗೆ 72 ರೂ.ಯಷ್ಟು ಏರಿಕೆ ಮಾಡಲಾಗಿದೆ. 2020-21ರಲ್ಲಿ ಇದು ಕ್ವಿಂಟಲ್‌ಗೆ 1,868 ರೂ. ಇದ್ದದ್ದು, 2021-22ರಲ್ಲಿ ಕ್ವಿಂಟಲ್‌ಗೆ 1,940 ರೂ.ಗೆ ಹೆಚ್ಚಿಸಲಾಗಿದೆ. ಹಿಂದಿನ ವರ್ಷಕ್ಕಿಂತ ಎಂಎಸ್‌ಪಿಯಲ್ಲಿ ಗರಿಷ್ಠ ಹೆಚ್ಚಳವನ್ನು ಎಳ್ಳಿನ (ಕ್ವಿಂಟಲ್‌ಗೆ 452 ರೂ.) ಫಸಲಿನದ್ದಾಗಿದೆ. ಈ ನಂತರ ತೊಗರಿ ಮತ್ತು ಉದ್ದು (ತಲಾ 300 ರೂ.) ಏರಿಕೆಗೆ ಶಿಫಾರಸು ಮಾಡಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನೆಲಗಡಲೆ ಮತ್ತು ಹುಚ್ಚೆಳ್ಳು ಕಳೆದ ವರ್ಷಕ್ಕೆ ಹೋಲಿಸಿದರೆ ಕ್ವಿಂಟಲ್‌ಗೆ ಕ್ರಮವಾಗಿ 275 ರೂ. ಮತ್ತು 235 ರೂ.ಯಷ್ಟು ಹೆಚ್ಚಾಗಿದೆ. ಭೇದಾತ್ಮಕ ಸಂಭಾವನೆ ಬೆಳೆ ವೈವಿಧ್ಯತೆ ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಸಿಸಿಇಎ ಪ್ರಕಟಣೆಯಲ್ಲಿ ತಿಳಿಸಿದೆ.

ಓದಿ: ಕೋವಿಡ್​ ಲಸಿಕೆ ಪ್ರಮಾಣಪತ್ರ ತಿದ್ದುಪಡಿಗೆ ಕೋವಿನ್​ ಪ್ಲಾಟ್‌ಫಾರ್ಮ್‌ಗೆ ಹೊಸ ಫೀಚರ್ ಸೇರ್ಪಡೆ​

ಮಾರುಕಟ್ಟೆ ಋತುವಿನ 2021-22ರಲ್ಲಿ ಖಾರಿಫ್ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಳವು ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚದ (ಕೋಪ್) ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ದರ ಸರಿಪಡಿಸುವ ಕೇಂದ್ರ ಬಜೆಟ್ 2018-19ರ ಘೋಷಣೆಗೆ ಅನುಗುಣವಾಗಿದೆ.

ರೈತರಿಗೆ ನ್ಯಾಯಯುತ ಸಂಭಾವನೆ ನೀಡುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. ರೈತರಿಗೆ ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚಿನ ಆದಾಯವು ಸಜ್ಜೆ (ಶೇ 85ರಷ್ಟು) ಮತ್ತು ಉದ್ದು (ಶೇ 65ರಷ್ಟು) ಮತ್ತು ತೊಗರಿ (ಶೇ 62ರಷ್ಟು) ಅತಿ ಹೆಚ್ಚು ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಉಳಿದ ಬೆಳೆಗಳಿಗೆ, ರೈತರು ತಮ್ಮ ಉತ್ಪಾದನಾ ವೆಚ್ಚದ ಮೇಲೆ ಹಿಂದಿರುಗುವುದು ಕನಿಷ್ಠ ಶೇ 50ರಷ್ಟು ಎಂದು ಅಂದಾಜಿಸಲಾಗಿದೆ ಎಂದು ಸಿಸಿಇಎ ತಿಳಿಸಿದೆ.

ABOUT THE AUTHOR

...view details