ಹೈದರಾಬಾದ್: ಕೊರೊನಾ ಬಿಕ್ಕಟ್ಟಿನಿಂದಾಗಿ ಅಮೆರಿಕದಲ್ಲಿ ನಿರುದ್ಯೋಗ ದರವು 80 ವರ್ಷಗಳಲ್ಲಿ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಸುಮಾರು 3.86 ಕೋಟಿ ಜನರು ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಿದ್ದಾರೆ. ಜನರು ಪಡೆಯುತ್ತಿದ್ದ ಸಂಬಳಕ್ಕಿಂತ ಒಂದೂವರೆ ಪಟ್ಟು ಹೆಚ್ಚಿನ ಭತ್ಯೆ ಇವರು ಪಡೆಯುತ್ತಿದ್ದಾರೆ. ಇದು ಸರ್ಕಾರದ ಯೋಜನೆಗಳಾದ ನಿರುದ್ಯೋಗ ಭತ್ಯೆ ಮತ್ತು ನಿರುದ್ಯೋಗ ವಿಮೆಯ ಮೇಲಿನ ಒತ್ತಡ ಹೆಚ್ಚಿಸಿದೆ.
ಅಮೆರಿಕದ ಕಾರ್ಮಿಕ ಇಲಾಖೆಯ ಪ್ರಕಾರ, ನಿರುದ್ಯೋಗಿಗಳಿಗೆ ಸರ್ಕಾರ 45,000 ರೂ. ಭತ್ಯೆ ನೀಡುತ್ತಿದೆ. ಜನರ ಸರಾಸರಿ ಮಾಸಿಕ ವೇತನ ಸುಮಾರು 30,000 ರೂ.ಯಷ್ಟಿದೆ. ಹೆಚ್ಚಿನ ಹಣ ಸಿಗುವುದರಿಂದ ಜನರು ಇನ್ನು ಮುಂದೆ ಕೆಲಸ ಮಾಡಲು ಬಯಸುವುದಿಲ್ಲ. ಈ ನಡುವೆ ಕೆಲಸಕ್ಕೆ ಬಾರದ ನೌಕರರ ವರದಿಯನ್ನು ಸರ್ಕಾರ ಕೋರಿದೆ. ಕರೋನಾ ಬಿಕ್ಕಟ್ಟಿನ ಬಳಿಕ ಅಮೆರಿಕದಲ್ಲಿ ನಿರುದ್ಯೋಗ ದರವು ಶೇ 14.7ಕ್ಕೆ ಏರಿದೆ. ಇಲ್ಲಿಯವರೆಗೆ ಅಮೆರಿಕದಲ್ಲಿ 17,06,277 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಒಂದು ಲಕ್ಷಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ.
ರಾಷ್ಟ್ರಗಳವಾರು ನಿರುದ್ಯೋಗ ಭತ್ಯೆ:
ನ್ಯೂಜಿಲ್ಯಾಂಡ್ನಲ್ಲಿ ಉದ್ಯೋಗ ಕಳೆದುಕೊಳ್ಳುವವರಿಗೆ ಪ್ರತಿ ವಾರ 17,360 ರೂ. ಭತ್ಯೆ ಸಿಗುತ್ತದೆ. ಮೇ 29ರಿಂದ ಕಿವೀಸ್ ಸರ್ಕಾರ ಲಾಕ್‌ಡೌನ್ ಅನ್ನು ಇನ್ನಷ್ಟು ಸಡಿಲಿಸಲು ನಿರ್ಧರಿಸಿದೆ. ನ್ಯೂಜಿಲ್ಯಾಂಡ್ನಲ್ಲಿ 1,504 ಪ್ರಕರಣಗಳು ಕಂಡುಬಂದಿದ್ದು, 21 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ನಾರ್ವೆಯಲ್ಲಿ ಇದುವರೆಗೆ 8,374 ಕೊರೊನಾ ಪ್ರಕರಣಗಳು ಕಂಡುಬಂದಿದ್ದು, 235 ಸೋಂಕಿತರು ಮೃತಪಟ್ಟಿದ್ದಾರೆ. ತಾತ್ಕಾಲಿಕ ಕಾರ್ಮಿಕರಿಗೆ 3.82 ಲಕ್ಷ ರೂ. ನೀಡಲಾಗುತ್ತಿದೆ. ಸ್ಪೇನ್ನಲ್ಲಿ ಎಲ್ಲ ಕಾರ್ಮಿಕರಿಗೆ ಪೂರ್ಣ ವೇತನ ಮತ್ತು ಭತ್ಯೆ ನೀಡಲು ಆದೇಶಿಸಲಾಗಿದೆ. ಇಲ್ಲಿ 2,82,480 ಸೋಂಕಿನ ಪ್ರಕರಣಗಳಿದ್ದು, 26,837 ಸಾವುಗಳು ಸಂಭವಿಸಿವೆ. ಫ್ರಾನ್ಸ್ನಲ್ಲಿ ಕಾರ್ಮಿಕರಿಗೆ ಶೇ 84ರಷ್ಟು ವೇತನ ಭತ್ಯೆ, ಸಾಮಾನ್ಯ ಕಾರ್ಮಿಕರಿಗೆ ಶೇ 100ರಷ್ಟು ಭತ್ಯೆ ನೀಡಲಾಗಿದೆ. 1,82,942 ಸೋಂಕಿತರಿದ್ದು, 28,432 ಜನರು ಮೃತಪಟ್ಟಿದ್ದಾರೆ.
ಕೆನಡಾ ಸರ್ಕಾರ ಲಾಕ್‌ಡೌನ್‌ನಲ್ಲಿರುವ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 1,09,500 ರೂ. ಭತ್ಯೆ ನೀಡುತ್ತಿದೆ. ಇದುವರೆಗೆ 85,998 ಪ್ರಕರಣಗಳು ವರದಿಯಾಗಿದ್ದು, 6,566 ಸಾವುಗಳು ಸಂಭವಿಸಿವೆ. ಇಂಗ್ಲೆಂಡ್ನಲ್ಲಿ ಕಂಪನಿಗಳು 2.33 ಲಕ್ಷ ರೂ. ಪಾವತಿಸುತ್ತಿವೆ. ಸರ್ಕಾರ ಶೇ 80ರಷ್ಟು ಹಣವನ್ನು ಮಾಸಿಕ ವೇತನದೊಂದಿಗೆ ನೀಡುತ್ತಿದೆ. ಯುಕೆಯಲ್ಲಿ 2,61,184 ಪ್ರಕರಣಗಳಿದ್ದು, 36,914 ಪೀಡಿತರು ಸಾವನ್ನಪ್ಪಿದ್ದಾರೆ.
ಗ್ರೀಸ್ ಸರ್ಕಾರ ಕಾರ್ಮಿಕರಿಗೆ 66,324 ರೂ. ಮಾಸಿಕ ಭತ್ಯೆ ಪಾವತಿಸುವುದು. ಇಲ್ಲಿ 2,892 ಪ್ರಕರಣಗಳು ದಾಖಲಾಗಿ, 173 ಸಾವುಗಳು ಸಂಭವಿಸಿವೆ. ಜಪಾನ್ ಸರ್ಕಾರ ಎಲ್ಲ ನಾಗರಿಕರಿಗೆ 70,120 ರೂ. ನೀಡುತ್ತಿದೆ. ಜಪಾನ್‌ನಲ್ಲಿ 16,581 ಪ್ರಕರಣಗಳು ದಾಖಲಾಗಿದ್ದು, 830 ಸಾವುಗಳು ಸಂಭವಿಸಿವೆ.