ಲಂಡನ್: ಪರಾರಿಯಾದ ವಜ್ರೋದ್ಯಮಿ ನೀರವ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ನ ಗೃಹ ಸಚಿವರಾದ ಪ್ರೀತಿ ಪಟೇಲ್ ಶುಕ್ರವಾರ ಅನುಮೋದನೆ ನೀಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. 2 ಬಿಲಿಯನ್ ಡಾಲರ್ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣ ಪ್ರಕರಣಕ್ಕೆ ಸಂಬಂಧ ಉದ್ಯಮಿ, ಫೆಬ್ರವರಿ 25ರಂದು ಇಂಗ್ಲೆಂಡ್ನಲ್ಲಿ ಭಾರತಕ್ಕೆ ಗಡೀಪಾರು ಮಾಡುವ ವಿರುದ್ಧ ಕಾನೂನು ಹೋರಾಟದ ಕೊನೆ ಅವಕಾಶ ಕಳೆದುಕೊಂಡ ನಂತರ ಈ ಬೆಳವಣಿಗೆ ಸಂಭವಿಸಿದೆ.
ಬ್ರಿಟನ್ನ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತನ್ನ 83 ಪುಟಗಳ ಆದೇಶದಲ್ಲಿ ನೀರವ್ ಮೋದಿ ಅವರಿಗೆ ಭಾರತದಲ್ಲಿ ನ್ಯಾಯಯುತ ವಿಚಾರಣೆ ನೀಡಲಾಗುವುದಿಲ್ಲ ಎಂಬುದು ಒಪ್ಪಿಕೊಳ್ಳುವಂತಹದ್ದಲ್ಲ ಎಂದಿದೆ.