ಕರ್ನಾಟಕ

karnataka

ETV Bharat / business

ಫ್ಲೀಟ್‌ಗಳಿಗೆ ಕಸ್ಟಮೈಸ್ಡ್​ ಸ್ಟಿಕ್ಕರ್‌ ಸೇರಿಸಿ 'ಟ್ವೆಮೊಜಿ' ಎಂದು ಹೆಸರಿಸಿದ ಟ್ವಿಟರ್ - ಇನ್​ಸ್ಟಾಗ್ರಾಮ್​

ಟ್ವಿಟರ್ ತನ್ನದೇ ಆದ ಆನಿಮೇಟೆಡ್ ಸ್ಟಿಕ್ಕರ್‌ ಮತ್ತು ಎಮೋಜಿಗಳ ಸಂಗ್ರಹ ಸೇರಿಸುತ್ತಿದೆ. ಕಂಪನಿ ಇದಕ್ಕೆ 'ಟ್ವೆಮೊಜಿ' ಎಂದು ಕರೆಯುತ್ತದೆ. ನೀವು ಸ್ಕ್ರೀನ್​ ಮೇಲ್ಭಾಗದಲ್ಲಿ ಏನನ್ನಾದರೂ ಹುಡುಕಿದರೆ, ಟ್ವಿಟರ್ ಟೆನೋರ್ ಮತ್ತು ಫೇಸ್‌ಬುಕ್ ಒಡೆತನದ ಜಿಫಿಯಿಂದ ಪಡೆದ ಜಿಐಎಫ್‌ಗಳಿರುತ್ತವೆ.

twitter
twitter

By

Published : Apr 2, 2021, 12:49 PM IST

ಸ್ಯಾನ್ ಫ್ರಾನ್ಸಿಸ್ಕೋ: ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರಿಗೆ ಲಭ್ಯವಿರುವ ತನ್ನ ಅಲ್ಪಕಾಲಿಕ, ಸ್ನ್ಯಾಪ್‌ಚಾಟ್ ಸ್ಟೋರೀಸ್ ತರಹದ ಫ್ಲೀಟ್‌ಗಳಿಗೆ ಸ್ಟಿಕ್ಕರ್‌ ಸೇರ್ಪಡೆ ಮಾಡುವುದಾಗಿ ಟ್ವಿಟರ್ ಪ್ರಕಟಿಸಿದೆ.

ಫ್ಲೀಟ್ ತಯಾರಿಸುವಾಗ ಬಳಕೆದಾರರು ಪರದೆಯ ಕೆಳಗಿನ ಸಾಲಿನಲ್ಲಿ ಇರುವ ಸ್ಮೈಲಿಂಗ್ ಫೇಸ್​ ಐಕಾನ್ ಟ್ಯಾಪ್ ಮಾಡುವ ಮೂಲಕ ಸ್ಟಿಕ್ಕರ್‌ ಸೇರ್ಪಡೆ ಮಾಡಬಹುದು. ನಿಮ್ಮ ಫ್ಲೀಟ್‌ಗಳು ಇದೀಗ ನವೀಕರಣಗೊಂಡಿವೆ ಎಂದು ಮೈಕ್ರೋ - ಬ್ಲಾಗಿಂಗ್ ಸೈಟ್ ತನ್ನದೇ ಆದ ಪ್ಲಾಟ್​ಫಾರ್ಮ್​ನಲ್ಲಿ ಬರೆದು ಕೊಂಡಿದೆ.

ಇದನ್ನೂ ಓದಿ: ಭಾರತದ ರಫ್ತು ಶೇ 58ರಷ್ಟು ಏರಿಕೆ: ಮಾರ್ಚ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ವಹಿವಾಟು

ಈಗ ನೀವು ಸ್ಟಿಕ್ಕರ್‌ಗಳೊಂದಿಗಿನ ಸಂಭಾಷಣೆಯಲ್ಲಿ ನಿಮ್ಮ ಭಾವ ವ್ಯಕ್ತಪಡಿಸಬಹುದು. ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಸ್ಮೈಲ್​ ಐಕಾನ್ ಟ್ಯಾಪ್ ಮಾಡುವ ಮೂಲಕ ಫ್ಲೀಟ್‌ಗೆ ಜಿಐಎಫ್ ಮತ್ತು ಟ್ವೆಮೊಜಿಸ್ ಸೇರಿಸಿ ಎಂದು ಹೇಳಿದೆ.

ಫ್ಲೀಟ್‌ಗಳಿಗೆ ಕಸ್ಟಮೈಸ್ಡ್​ ಸ್ಟಿಕ್ಕರ್‌

ದಿ ವರ್ಜ್ ಪ್ರಕಾರ, ಟ್ವಿಟರ್ ತನ್ನದೇ ಆದ ಆನಿಮೇಟೆಡ್ ಸ್ಟಿಕ್ಕರ್‌ ಮತ್ತು ಎಮೋಜಿಗಳ ಸಂಗ್ರಹ ಸೇರಿಸುತ್ತಿದೆ. ಕಂಪನಿ ಇದಕ್ಕೆ 'ಟ್ವೆಮೊಜಿ' ಎಂದು ಕರೆಯುತ್ತದೆ. ನೀವು ಸ್ಕ್ರೀನ್​ ಮೇಲ್ಭಾಗದಲ್ಲಿ ಏನನ್ನಾದರೂ ಹುಡುಕಿದರೆ, ಟ್ವಿಟರ್ ಟೆನೋರ್ ಮತ್ತು ಫೇಸ್‌ಬುಕ್ ಒಡೆತನದ ಜಿಫಿಯಿಂದ ಪಡೆದ ಜಿಐಎಫ್‌ಗಳಿರುತ್ತವೆ.

ಸ್ನ್ಯಾಪ್‌ಚಾಟ್ ಅಥವಾ ಇನ್‌ಸ್ಟಾಗ್ರಾಮ್‌ನಂತಹ ಇತರ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಇದೇ ರೀತಿಯ ವೈಶಿಷ್ಟ್ಯವು ಈಗಾಗಲೇ ಲಭ್ಯವಿದೆ. ಕಂಪನಿಯು 2020ರ ನವೆಂಬರ್‌ನಲ್ಲಿ ಫ್ಲೀಟ್‌ಗಳನ್ನು ವಿಶ್ವದಾದ್ಯಂತದ ಎಲ್ಲ ಬಳಕೆದಾರರಿಗಾಗಿ ಅನಾವರಣಗೊಳಿಸಿತು.

ಬ್ರೆಜಿಲ್, ಇಟಲಿ, ಭಾರತ ಮತ್ತು ದಕ್ಷಿಣ ಕೊರಿಯಾದಲ್ಲಿ ಫ್ಲೀಟ್‌ಗಳ ಪರೀಕ್ಷೆಗಳು ಉತ್ತೇಜನಕಾರಿಯಾಗಿದೆ ಎಂದು ಟ್ವಿಟರ್ ಹೇಳಿದೆ.

ಫಲಿತಾಂಶಗಳು ಫ್ಲೀಟ್ಸ್ ಜನರ ಸಂಭಾಷಣೆಗೆ ಸೇರಲು ಹೆಚ್ಚು ಆರಾಮದಾಯಕವಾಗಲು ಸಹಾಯ ಮಾಡಿದೆ ಎಂಬುದನ್ನು ತೋರಿಸಿದೆ. ಫ್ಲೀಟ್ಸ್ ಹೊಂದಿರುವ ಜನರು ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಮಾತನಾಡುತ್ತಾರೆ ಎಂದು ಟ್ವಿಟರ್ ತಿಳಿದು ಕೊಂಡಿದೆ.

ಓರ್ವ ಬಳಕೆದಾರ ಫ್ಲೀಟ್ ಟೆಕ್ಸ್​, ಟ್ವೀಟ್‌ಗಳು, ಫೋಟೋಗಳು ಅಥವಾ ವಿಡಿಯೋಗಳಿಗೆ ಪ್ರತಿಕ್ರಿಯೆಗಳು ಮತ್ತು ವಿವಿಧ ಹಿನ್ನೆಲೆ ಹಾಗೂ ಟೆಕ್ಸ್ ಆಯ್ಕೆಗಳೊಂದಿಗೆ ಅವರು ಫ್ಲೀಟ್‌ಗಳನ್ನು ಕಸ್ಟಮೈಸ್ ಮಾಡಬಹುದು.

ABOUT THE AUTHOR

...view details