ಮುಂಬೈ: 2020ರಲ್ಲಿ ಟ್ರಂಪ್ ನೋಡುತ್ತಿರುವ ಭಾರತ ಈ ಹಿಂದೆ ಜಿಮ್ಮಿ ಕಾರ್ಟರ್, ಬಿಲ್ ಕ್ಲಿಂಟನ್ ಅಥವಾ ಬರಾಕ್ ಒಬಾಮಾ ಕಂಡಿದ್ದಕ್ಕಿಂತ ಭಿನ್ನವಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದ್ದಾರೆ.
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಅವರೊಂದಿಗೆ ಸಂವಾದ ನಡೆಸಿದ್ದ ಮುಖೇಶ್ ಅಂಬಾನಿ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಪ್ರವಾಸ ಉಲ್ಲೇಖಿಸಿ; ಜಿಮ್ಮಿ ಕಾರ್ಟರ್, ಬಿಲ್ ಕ್ಲಿಂಟನ್ ಅಥವಾ ಬರಾಕ್ ಒಬಾಮಾರ ಭೇಟಿಯ ಸಮಯದಲ್ಲಿದ್ದ ಭಾರತ ಈಗ ವಿಭಿನ್ನವಾಗಿದೆ. ಮೊಬೈಲ್ ಸಂಪರ್ಕ ಸಾಧನವು ಒಂದು ಪ್ರಮುಖ ಬದಲಾವಣೆಯ ಕಾಣ್ಕೆ ಎಂದರು.
ಟ್ರಂಪ್ ಅವರನ್ನು ಸ್ವಾಗತಿಸಲು ರಸ್ತೆಗೆ ಬಂದ ಲಕ್ಷಾಂತರ ಜನ ತಮ್ಮದೇ ಆದ ವೈಯಕ್ತಿಕ ಅನುಭವದ ಅತ್ಯಂತ ಸಮರ್ಥವಾದ ಮೊಬೈಲ್ ನೆಟ್ವರ್ಕ್ ಹೊಂದಿದ್ದಾರೆ. ಜಗತ್ತಿನ ಅತಿದೊಡ್ಡ ಕ್ರೀಡಾಂಗಣ ಉದ್ಘಾಟನೆಯೇ ಇಲ್ಲಿ ಸೃಷ್ಟಿಯಾಗಿರುವ ನಿರ್ಮಾಣ ವಲಯದ ಅಭಿವೃದ್ಧಿಗೆ ಸಾಕ್ಷಿ ಎಂದು ಉಲ್ಲೇಖಿಸಿದರು.
ಜಗತ್ತಿನಲ್ಲಿ ಯಾವುದೇ ಕ್ರೀಡಾಂಗಣಕ್ಕಿಂತ ಇದು ತಾಂತ್ರಿಕವಾಗಿ ಉತ್ತಮವಾಗಿದೆ. ಭಾರತ ಪ್ರೀಮಿಯಂ ಡಿಜಿಟಿಲ್ ಸೊಸೈಟಿಯತ್ತ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ರಾಷ್ಟ್ರ ಆಗಲಿದೆ ಎಂದು ಭವಿಷ್ಯ ನುಡಿದರು.
2014ರಲ್ಲಿ ಪ್ರಧಾನಿ ಮೋದಿ ಟಿಜಿಟಲ್ ಇಂಡಿಯಾ ದೂರದೃಷ್ಟಿಗೆ ಕರೆ ನೀಡಿದ್ದರು. ಅದು 380 ಮಿಲಿಯನ್ ಜನರು ಜಿಯೋ 4ಜಿ ತಂತ್ರಜ್ಞಾನ ಬಳಕೆ ಮಾಡುವವರೆಗೂ ಪ್ರೇರಣೆ ಆಯಿತು. ಜಿಯೋ ಬರುವ ಮುನ್ನ ಡೇಟಾ ವೇಗ 256ಕೆಬಿಪಿಎಸ್ ಇತ್ತು. ಜಿಯೋ ಬಳಿಕ ಅದು 21ಎಂಬಿಪಿಎಸ್ ವೇಗಕ್ಕೆ ತಲುಪಿದೆ ಎಂದು ಮುಖೇಶ್ ಅಂಬಾನಿ ಹೇಳಿದರು.