ನವದೆಹಲಿ: ಚೀನಾ ದೇಶದಲ್ಲಿ ಹುಟ್ಟಿದ ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಬೀಜಿಂಗ್ ತನ್ನ ನಿಬಂಧನೆಗಳನ್ನು ಗೌರವಿಸದಿದ್ದರೆ ಚೀನಾದೊಂದಿಗಿನ ವ್ಯಾಪಾರ ಒಪ್ಪಂದ ಕೊನೆಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಚೀನಾ ಮತ್ತು ಅಮೆರಿಕ ಜನವರಿಯಲ್ಲಿ ವ್ಯಾಪಾರ ಒಪ್ಪಂದದ ಮೊದಲ ಹಂತಕ್ಕೆ ಸಹಿ ಹಾಕಿದ್ದವು. ವಿಶ್ವದ ಎರಡು ಅತಿ ಬಲಿಷ್ಠ ಆರ್ಥಿಕ ರಾಷ್ಟ್ರಗಳು ಎರಡು ವರ್ಷಗಳ ಸುಂಕದ ಯುದ್ಧ ಕೊನೆಗೊಳಿಸಿ ಹೊಸ ಒಪ್ಪಂದಕ್ಕೆ ಮುಂದಾದವು. ಅದು ಮಾರುಕಟ್ಟೆಗಳನ್ನು ಚುರುಕುಗೊಳಿಸಿ ಜಾಗತಿಕ ಆರ್ಥಿಕತೆಯ ಮೇಲೆ ಪ್ರಭಾವ ಬೀರಿತ್ತು.
ಅಂದಿನ ಕರಾರಿನ ಅನ್ವಯ, ಚೀನಾ ಅಮೆರಿಕದಿಂದ 200 ಶತಕೋಟಿ ಡಾಲರ್ ಮೊತ್ತದ ಸರಕುಗಳನ್ನು ಖರೀದಿಸಬೇಕಿದೆ. ಅಮೆರಿಕ- ಚೀನಾ ಆರ್ಥಿಕ ಮತ್ತು ಭದ್ರತಾ ಮರುಪರಿಶೀಲನಾ ಆಯೋಗವು ಈ ಒಪ್ಪಂದದಲ್ಲಿ ಚೀನಾ ತಿದ್ದುಪಡಿ ಮಾಡಬಹುದು ಎಂದು ವರದಿಯಲ್ಲಿ ಹೇಳಿತ್ತು. ಇದರ ನೈಸರ್ಗಿಕ ವಿಕೋಪ ಅಥವಾ ಇನ್ಯಾವುದೇ ವಿಕೋಪದ ವೇಳೆ ಎರಡೂ ದೇಶಗಳ ನಡುವೆ ಹೊಸ ವ್ಯಾಪಾರ ಒಪ್ಪಂದ ಮಾಡಬಹುದಾಗಿದೆ.