ಕರ್ನಾಟಕ

karnataka

ETV Bharat / business

ಗಮನಿಸಿ... ಆನ್​ಲೈನ್​​ ರೈಲು ಟಿಕೆಟ್ ಬುಕ್ಕಿಂಗ್​​​​ ಮತ್ತೆ ದುಬಾರಿ!

2016ರಲ್ಲಿ ಮೋದಿ ಸರ್ಕಾರ ನೋಟ್ ​ಬ್ಯಾನ್ ಮಾಡಿದ ಬಳಿಕ ರೈಲ್ವೆ ಇಲಾಖೆ ಬುಕ್ಕಿಂಗ್​​ನಲ್ಲಿನ ಸೇವಾ ದರವನ್ನು ಹಿಂಪಡೆದಿತ್ತು. ಡಿಜಿಟಲ್ ಪಾವತಿ ಉತ್ತೇಜಿಸುವ ಸಲುವಾಗಿ ರೈಲ್ವೆ ಇಲಾಖೆ ಈ ನಿರ್ಧಾರಕ್ಕೆ ಬಂದಿತ್ತು.

ರೈಲು ಟಿಕೆಟ್ ಬುಕಿಂಗ್

By

Published : Sep 1, 2019, 10:40 AM IST

ನವದೆಹಲಿ:ಸೇವಾ ದರವನ್ನು ಮತ್ತೆ ಜಾರಿಗೆ ತಂದಿರುವ ಪರಿಣಾಮ ಇಂದಿನಿಂದ ಐಆರ್​ಸಿಟಿಸಿ ರೈಲ್ವೆ ಆನ್​ಲೈನ್​​​ ಟಿಕೆಟ್ ಬುಕ್ಕಿಂಗ್​​​ ಮತ್ತೆ ದುಬಾರಿಯಾಗಲಿದೆ.

2016ರಲ್ಲಿ ಮೋದಿ ಸರ್ಕಾರ ನೋಟ್ ​ಬ್ಯಾನ್ ಮಾಡಿದ ಬಳಿಕ ರೈಲ್ವೆ ಇಲಾಖೆ ಬುಕ್ಕಿಂಗ್​​ನಲ್ಲಿನ ಸೇವಾ ದರವನ್ನು ಹಿಂಪಡೆದಿತ್ತು. ಡಿಜಿಟಲ್ ಪಾವತಿ ಉತ್ತೇಜಿಸುವ ಸಲುವಾಗಿ ರೈಲ್ವೆ ಇಲಾಖೆ ಈ ನಿರ್ಧಾರಕ್ಕೆ ಬಂದಿತ್ತು.

ಸ್ಲೀಪರ್​ ಕ್ಲಾಸ್ ಬುಕ್ಕಿಂಗ್​​​ ಮಾಡುವ ವೇಳೆ 15 ರೂ. ಸೇವಾ ದರ ವಿಧಿಸಿದರೆ, ಎಸಿ ಕ್ಲಾಸ್ 30 ರೂ. ಇರಲಿದೆ. ನಾನ್​-ಎಸಿ ಕ್ಲಾಸ್ 20 ರೂ. ಸೇವಾ ದರವನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಜಿಎಸ್​ಟಿ ಸಹ ಪ್ರತಿಯೊಂದು ಟಿಕೆಟ್ ಮೇಲೂ ಅನ್ವಯವಾಗಲಿದೆ.

ನೋಟ್ ​ಬ್ಯಾನ್ ಬಳಿಕ ಸೇವಾ ದರವನ್ನು ಹಿಂಪಡೆದಿದ್ದ ರೈಲ್ವೆ ಇಲಾಖೆ ಕೊಂಚ ನಷ್ಟವನ್ನು ಅನುಭವಿಸಿತ್ತು. ಈ ನಷ್ಟವನ್ನು ಭರಿಸುವುದಾಗಿ ಹಣಕಾಸು ಸಚಿವಾಲಯ ರೈಲ್ವೆ ಇಲಾಖೆಗೆ ಭರವಸೆ ನೀಡಿದೆ.

ABOUT THE AUTHOR

...view details