ಕರ್ನಾಟಕ

karnataka

ETV Bharat / business

ಕೊರೊನಾಗೆ ಮಕಾಡೆ ಮಲಗಿದ ವ್ಯಾಪಾರೋದ್ಯಮ... ನಷ್ಟದ ಮೊತ್ತ ಕೇಳಿದ್ರೆ ತಲೆ ತಿರುಗದೇ ಇರದು - ಟ್ರೇಡ್​ ಶೋ ಉದ್ಯಮ

ಕೊರೊನಾ ಭೀತಿಗೆ ಜಾಗತಿಕ ವ್ಯಾಪಾರೋದ್ಯಮ ಮಕಾಡೆ ಮಲಗಿದೆ. ವೈರಸ್​ ಸೋಂಕಿನ ಪರಿಣಾಮ ಪ್ರಪಂಚದಾದ್ಯಂತ ಹೋಟೆಲ್​, ಮನರಂಜನಾ ಕ್ಷೇತ್ರ, ಕೈಗಾರಿಕೆ ಸೇರಿದಂತೆ ಬಹುತೇಕ ಉದ್ಯಮಗಳು ನಷ್ಟವನ್ನ ಅನುಭವಿಸುತ್ತಿವೆ.

Trade show
ಟ್ರೇಡ್​ ಶೋ

By

Published : Mar 4, 2020, 9:35 AM IST

ಚಿಕಾಗೋ (ಅಮೆರಿಕ): ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕೊರೊನಾ ವೈರಸ್​ ದಿನೇ ದಿನೆ ತನ್ನ ವ್ಯಾಪ್ತಿಯನ್ನ ಹೆಚ್ಚಿಸಿಕೊಳ್ಳುತ್ತಿದ್ದು, ಇದರಿಂದ ಜಾಗತಿಕ ವ್ಯಾಪಾರೋದ್ಯಮದ ಮೇಲೆ ಹೆಚ್ಚಿನ ಹೊಡೆತ ಬೀಳುತ್ತಿದೆ.

ಟ್ರೇಡ್​ ಶೋ

ಇದರಿಂದಾಗಿ ಜಾಗತಿಕವಾಗಿ ಸುಮಾರು 2.5 ಟ್ರಿಲಿಯನ್​ ಅಂದರೆ ( 1ಕೋಟಿ 82 ಲಕ್ಷ ಕೋಟಿ(18,28,68,74,99,99,999.97)) ರೂ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಚಿಕಾಗೋದ ಮೆಕ್ಕಾರ್ಮಿಕ್​ನಲ್ಲಿ ಮಾರ್ಚ್​ 14 ರಂದು ನಡೆಯಬೇಕಿದ್ದ ಇನ್ಸ್ಪೈರ್ಡ್ ಹೋಂ ಶೋ 2020ನ್ನು ಇಂಟರ್​ನ್ಯಾಷನಲ್​ ಹೌಸ್ ವೇರ್ಸ್ ಅಸೋಸಿಯೇಷನ್ ಇದೀಗ ರದ್ದುಗೊಳಿಸಿದೆ. ಈ ಪ್ರದರ್ಶನಕ್ಕೆ 130 ದೇಶಗಳಿಂದ 50 ಸಾವಿರಕ್ಕೂ ಹೆಚ್ಚು ಉದ್ಯಮಿಗಳನ್ನು ಸೆಳೆಯುವ ನಿರೀಕ್ಷೆಯಿತ್ತು.

ಸದ್ಯಕ್ಕೆ ಗ್ರಾಹಕರೊಂದಿಗಿನ ಮುಖಾಮುಖಿ ಸಂಪರ್ಕಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ ಎಂದು ಮಾರ್ಕೆಟಿಂಗ್ ತಜ್ಞರು ಮತ್ತು ಕಾರ್ಯನಿರ್ವಾಹಕರು ಎಚ್ಚರಿಸಿದ್ದಾರೆ.

ಕರೋನ ವೈರಸ್ ಕಾರಣದಿಂದಾಗಿ ವ್ಯಾಪಾರ ಘಟಕಗಳು ಪ್ರಪಂಚದಾದ್ಯಂತ ತ್ವರಿತವಾಗಿ ಕತ್ತಲೆ ಕಡೆ ಮುಖಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details