ಕರ್ನಾಟಕ

karnataka

ETV Bharat / business

ಮೋದಿ ಸರ್ಕಾರದ ಮಹತ್ವದ ನಿರ್ಧಾರ: ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಯ ಹಾದಿ 'ಅನ್​ಲಾಕ್'

ಬಾಹ್ಯಾಕಾಶ ಸಂಶೋಧನೆಯ ವಿಚಾರದಲ್ಲಿ ಇಸ್ರೋ ಮೂಲ ಸಂಸ್ಥೆಯಾಗಿದೆ. ಯಾವುದೇ ಚಟುವಟಿಕೆಗಳು, ಕ್ರಿಯಾ ಯೋಜನೆಗಳು ಅಥವಾ ಕಾರ್ಯಗಳನ್ನು ಕೈಗೊಳ್ಳುವುದರಲ್ಲಿ ಆ ಸಂಸ್ಥೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆದರೆ, ಅಂತರವನ್ನು ತುಂಬಲು ಮತ್ತು ಬೇಡಿಕೆಯನ್ನು ಪೂರೈಸಲು ಈ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದರು.

ISRO
ಇಸ್ರೋ

By

Published : Jun 24, 2020, 6:00 PM IST

ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಮೂಲಸೌಕರ್ಯ ಚಟುವಟಿಕೆಗಳಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯ ಹಾದಿಯನ್ನು ಸುಗಮಗೊಳಿಸಿದೆ.

ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಅನ್​ಲಾಕ್​ ಮಾಡುತ್ತದೆ. ಹೊಸದಾಗಿ ರಚಿಸಲಾದ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ (ಇನ್​-ಸ್ಪೇಸ್) ಖಾಸಗಿ ಕಂಪನಿಗಳಿಗೆ ಭಾರತೀಯ ಬಾಹ್ಯಾಕಾಶ ಮೂಲಸೌಕರ್ಯಗಳನ್ನು ಬಳಸಿಕೊಳ್ಳಲು ಉತ್ತಮ ವೇದಿಕೆ ಒದಗಿಸುತ್ತದೆ. ಈ ಸಂಸ್ಥೆ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಖಾಸಗಿ ಕೈಗಾರಿಕೆಗಳನ್ನು ಕೈಹಿಡಿದು ಉತ್ತೇಜನ ಮತ್ತು ಮಾರ್ಗದರ್ಶನ ನೀಡಲಿದೆ ಎಂದು ಅವರು ವಿವರಿಸಿದರು.

ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳು, ಹೊಸ ತಂತ್ರಜ್ಞಾನಗಳು, ಪರಿಶೋಧನಾ ಕಾರ್ಯಾಚರಣೆಗಳು ಮತ್ತು ಮಾನವ ಸಹಿತ ಬಾಹ್ಯಾಕಾಶಯಾನದ ಯೋಜನೆಗಳ ಬಗ್ಗೆ ಹೆಚ್ಚು ಗಮನಹರಿಸಲು ಇಸ್ರೋಗೆ ಅವಕಾಶವಿದೆ. ‘ಅವಕಾಶಗಳ ಘೋಷಣೆ’ಯ ಯಾಂತ್ರಿಕ ವ್ಯವಸ್ಥೆಯ ಮೂಲಕ ಕೆಲವು ಗ್ರಹಗಳ ಪರಿಶೋಧನಾ ಕಾರ್ಯಾಚರಣೆಗಳಲ್ಲಿ ಖಾಸಗಿಯ ಉದ್ಯಮಿಗಳನ್ನು ಸಹ ಜೊತೆಯಲ್ಲಿ ಕರೆದೊಯ್ಯಲಿದೆ ಎಂದು ಸಂಪುಟ ಪ್ರಕಟಣೆ ತಿಳಿಸಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿ, ಭಾರತವು ಸಾಕಷ್ಟು ಉತ್ತಮ ಬಾಹ್ಯಾಕಾಶ ಆಸ್ತಿಗಳನ್ನು ನಿರ್ಮಿಸಿದೆ. ಇಂದು ಇವೆಲ್ಲವೂ ಎಲ್ಲರಿಗೂ ತೆರೆದುಕೊಳ್ಳಲಿವೆ. ಇದೊಂದು ಹೆಗ್ಗುರುತಿನ ನಿರ್ಧಾರ. ಭಾರತವು ಭಾರತೀಯರು ಬಳಸಲು ತನ್ನ ಆಸ್ತಿಗಳ ಬಾಗಿಲು ತೆರೆದಿದೆ. ಇದು ಸರ್ಕಾರಿ ಕಂಪನಿ ಆಗಿರುತ್ತದೆ. ಆದರೆ, ಇದರಲ್ಲಿ ಹೆಚ್ಚಿನ ಜನರಿಗೆ ಪ್ರವೇಶವಿರುತ್ತದೆ ಎಂದರು.

ಬಾಹ್ಯಾಕಾಶ ಸಂಶೋಧನೆಯ ವಿಚಾರದಲ್ಲಿ ಇಸ್ರೋ ಮೂಲ ಸಂಸ್ಥೆಯಾಗಿದೆ. ಯಾವುದೇ ಚಟುವಟಿಕೆಗಳು ಅಥವಾ ಕ್ರಿಯಾ ಯೋಜನೆಗಳು ಅಥವಾ ಕಾರ್ಯಗಳನ್ನು ಕೈಗೊಳ್ಳುವುದರಲ್ಲಿ ಆ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಅಂತರವನ್ನು ತುಂಬಲು ಮತ್ತು ಬೇಡಿಕೆಯನ್ನು ಪೂರೈಸಲು ಈ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದರು.

ABOUT THE AUTHOR

...view details