ಹೈದರಾಬಾದ್:ನಿಮ್ಮ ಬಳಿ ಬೈಕ್ ಅಥವಾ ಇನ್ಯಾವುದೇ ದ್ವಿಚಕ್ರವಾಹನವಿದೆಯೇ? ಅತ್ಯುತ್ತಮ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚವಿರುವ ಬೈಕ್ಗಳು ನಿಜಕ್ಕೂ ತುಂಬಾ ಉಪಯೋಗಕಾರಿ. ಅವುಗಳನ್ನು ಕಡಿಮೆ ಬಜೆಟ್ನಲ್ಲಿಯೂ ಕೊಳ್ಳಬಹುದು. ಬೈಕ್ಗಳನ್ನು ಕೊಳ್ಳಲು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕೂಡಾ ದೊರೆಯುತ್ತದೆ.
ಬೈಕ್ ಕೊಂಡ ಮೇಲೆ ಅದರ ನಿರ್ವಹಣೆ ಕೂಡಾ ಮಾಡಬೇಕಾಗುತ್ತದೆ. ಅದು ಸುಲಭವಾದರೂ ಕೆಲವೊಂದು ಬಾರಿ ನಡೆಯುವ ಅನಿರೀಕ್ಷಿತ ಘಟನೆಗಳು ದುಬಾರಿಯಾಗುತ್ತವೆ. ಆದ್ದರಿಂದ ದ್ವಿಚಕ್ರವಾಹನಕ್ಕೆ ವಿಮೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಪರಿಗಣಿಸಲಾಗುತ್ತದೆ.
ಹೌದು, ದ್ವಿಚಕ್ರವಾಹನಕ್ಕೆ ವಿಮೆ ಅತ್ಯಂತ ಮುಖ್ಯ ಮತ್ತು ಕಡ್ಡಾಯ. ದ್ವಿಚಕ್ರ ವಾಹನ ಕಳ್ಳತನ, ಅಪಘಾತಗಳು ಮತ್ತು ನೈಸರ್ಗಿಕ ವಿಕೋಪಗಳಂತಹ ಅನಿರೀಕ್ಷಿತ ಘಟನೆಗಳಿಂದ ಉಂಟಾಗುವ ದುಷ್ಪರಿಣಾಮಗಳಿಂದ ವಿಮೆ ನಿಮ್ಮನ್ನು ರಕ್ಷಿಸುತ್ತದೆ. ಹೀಗಾಗಿ ವಿಮೆ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ವಿಮೆಯನ್ನು ತೆಗೆದುಕೊಳ್ಳುವಾಗ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಪ್ರೀಮಿಯಂ ನಿರ್ಧಾರ ಹೇಗೆ: ಬೈಕ್ನ ವೈಶಿಷ್ಟ್ಯಗಳು, ಕಂಪನಿ ಮತ್ತು ಯಾವ ವರ್ಷದ ಮಾಡೆಲ್ ಎಂಬುದನ್ನು ಆಧರಿಸಿ, ಬೈಕ್ನ ಬೆಲೆ ಬದಲಾಗುತ್ತದೆ. ಹಾಗೆಯೇ ಆ ಬೈಕ್ನ ಬೆಲೆಯನ್ನು ಆಧರಿಸಿ, ವಿಮೆ ಇರುತ್ತದೆ. ಅಂದರೆ ವಿಮೆಯ ಪ್ರೀಮಿಯಂ ದ್ವಿಚಕ್ರ ವಾಹನದ ಬೆಲೆಗೆ ನೇರವಾದ ಸಂಬಂಧ ಹೊಂದಿದೆ.
ಉದಾಹರಣೆಗೆ 75 ಸಾವಿರ ರೂಪಾಯಿ ಬೆಲೆಯ ಬೈಕ್ನ ಪ್ರೀಮಿಯಂ ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಇರುತ್ತದೆ. ಅಷ್ಟೇ ಅಲ್ಲದೇ ಬೈಕ್ನ ಸಿಸಿ ಆಧಾರದ ಮೇಲೆಯೂ ಪ್ರೀಮಿಯಂ ಇರುತ್ತದೆ. 100ಸಿಸಿ ಮತ್ತು 150ಸಿಸಿ ಮುಂತಾದ ಬೈಕ್ಗಳ ಪ್ರೀಮಿಯಂ ವಿಭಿನ್ನವಾಗಿರುತ್ತದೆ. ವಿಮಾ ನಿಯಂತ್ರಣ ಪ್ರಾಧಿಕಾರವು ಬೈಕ್ಗಳ ಸಿಸಿ ಆಧರಿಸಿ ದರಗಳನ್ನು ನಿಗದಿಪಡಿಸುತ್ತದೆ. ಈಗ ಎಲೆಕ್ಟ್ರಿಕ್ ಬೈಕ್ಗಳೂ ಬಂದಿದ್ದು, ಕಿಲೋವ್ಯಾಟ್ ಆಧಾರದ ಮೇಲೆ ವಿಮೆಯ ಪ್ರೀಮಿಯಂ ನಿರ್ಧಾರ ಮಾಡಲಾಗುತ್ತಿದೆ.
ಬೈಕ್ಗೆ ಯಾವ ವಿಮೆ ಬೇಕು:ದ್ವಿಚಕ್ರ ವಾಹನ ವಿಮೆಯಲ್ಲಿ ಎರಡು ವಿಧಗಳಿವೆ. ಒಂದು ಥರ್ಡ್ ಪಾರ್ಟಿ (ಮೂರನೇ ಸಂಸ್ಥೆ) ವಿಮೆ ಮತ್ತು ಇನ್ನೊಂದು ಸಮಗ್ರ ವಿಮೆ. ಅಂದಹಾಗೆ ರಸ್ತೆಗೆ ಬರುವ ಪ್ರತಿಯೊಂದು ಬೈಕ್ ಮೂರನೇ ಸಂಸ್ಥೆಯ ಅಂದರೆ ಯಾವುದಾದರೂ ವಿಮಾ ಕಂಪನಿಯೊಂದರ ವಿಮೆ ಹೊಂದಿರಲೇಬೇಕು. ದ್ವಿಚಕ್ರ ವಾಹನದ ಕಳ್ಳತನ, ಅಪಘಾತ ಸೇರಿದಂತೆ ಹಲವು ವೆಚ್ಚವನ್ನು ಮೂರನೇ ಸಂಸ್ಥೆಗಳೇ ಹಣ ಭರಿಸುತ್ತವೆ.