ಕರ್ನಾಟಕ

karnataka

ETV Bharat / business

ಆದಾಯ ತೆರಿಗೆ ಪಾವತಿಯಲ್ಲಿಲ್ಲ ಬದಲಾವಣೆ: ಕಳೆದ ವರ್ಷದ ಲೆಕ್ಕವೇ ಈ ಬಾರಿಯೂ ಪಕ್ಕಾ

2021ರ ಬಜೆಟ್​​ನಲ್ಲಿ ಹಲವಾರು ಕ್ಷೇತ್ರಗಳಿಗೆ ಅನುದಾನ ನೀಡುವುದಾಗಿ ಘೋಷಣೆ ಮಾಡಲಾಗಿದ್ದು, ಆದಾಯ ತೆರಿಗೆ ಪಾವತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕಳೆದ ವರ್ಷದಂತೆಯೇ ಈ ಬಾರಿಯೂ ಸಹ 2.5 ಲಕ್ಷ ರೂ. ಆದಾಯದವರೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ.

File Pic
ಸಂಗ್ರಹ ಚಿತ್ರ

By

Published : Feb 1, 2021, 2:09 PM IST

ನವದೆಹಲಿ:2021ರ ಕೇಂದ್ರ ಬಜೆಟ್​​ನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಇಂದು ಮಂಡಿಸಿದ್ದು, ಕೊರೊನಾ ಕಾಟದಿಂದ ಸಂಕಷ್ಟಕ್ಕೊಳಗಾದ ಹಲವು ಕ್ಷೇತ್ರಗಳ ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಮಧ್ಯೆ ಆದಾಯ ತೆರಿಗೆ ಪಾವತಿಯಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವ ಸಚಿವರು, ಕಳೆದ ಬಾರಿಯಂತೆಯೇ ಈ ವರ್ಷವೂ ಮುಂದುವರಿಯಲಿದೆ ಎಂದಿದ್ದಾರೆ.

ಕಳೆದ ವರ್ಷದಂತೆ ಈ ವರ್ಷವೂ ಸಹ 2.5 ಲಕ್ಷ ರೂ. ಆದಾಯದವರೆಗೆ ತೆರಿಗೆ ವಿನಾಯತಿ ನೀಡಲಾಗಿದ್ದು, 2.5 ರಿಂದ 5 ಲಕ್ಷದ ವರೆಗಿನ ಆದಾಯಕ್ಕೆ ಶೇ.5ರಷ್ಟು ತೆರಿಗೆ, 5 ರಿಂದ 7.5 ಲಕ್ಷ ರೂ.ಗೆ ಶೇ.10ರಷ್ಟು ತೆರಿಗೆ, 7.5 ರಿಂದ10 ಲಕ್ಷ ಆದಾಯಕ್ಕೆ ಶೇ.15ರಷ್ಟು, 10 ರಿಂದ12.5 ಲಕ್ಷ ರೂ.ಗೆ ಶೇ. 20ರಷ್ಟು ಹಾಗೂ 15 ಲಕ್ಷಕ್ಕೂ ಅಧಿಕ ಆದಾಯಕ್ಕೆ ಶೇ. 30ರಷ್ಟು ತೆರಿಗೆ ಸ್ಲ್ಯಾಬ್​ ವಿಧಿಸಲಾಗಿದೆ.

ತೆರಿಗೆ ದರ ಎಷ್ಟೆಷ್ಟು?

  • 2.5 ಲಕ್ಷ ರೂಪಾಯಿ - ತೆರಿಗೆ ಇಲ್ಲ
  • 2.5 - 5 ಲಕ್ಷ ರೂಪಾಯಿ - 5%
  • 5 -7.5 ಲಕ್ಷ ರೂಪಾಯಿ - 10%
  • 10 - 12.5 ಲಕ್ಷ ರೂಪಾಯಿ - 20%
  • 12.5 - 15 ಲಕ್ಷ ರೂಪಾಯಿ - 25%

ABOUT THE AUTHOR

...view details