ಲಾಸ್ ಏಂಜಲೀಸ್:ಟೆಸ್ಲಾ ಕಂಪನಿಯ ನೂತನ ಸೈಬರ್ಟ್ರಕ್ ಎಲೆಕ್ಟ್ರಿಕ್ ವಾಹನಕ್ಕೆ ಭಾರಿ ಬೇಡಿಕೆ ಕಂಡುಬಂದಿದೆ.
ಕಂಪನಿಯ ಬಹುನಿರೀಕ್ಷಿತ ಸೈಬರ್ಟ್ರಕ್ ಅನಾವರಣ ಕಾರ್ಯಕ್ರಮದಲ್ಲಿ ಕೊಂಚ ಯಡವಟ್ಟು ನಡೆದ ಹೊರತಾಗಿಯೂ, ಎರಡು ದಿನದ ಅಂತರದಲ್ಲಿ ಸುಮಾರು ಒಂದು ಲಕ್ಷದ ಎಂಭತ್ತು ಸಾವಿರ ಮಂದಿ ಸೈಬರ್ಟ್ರಕ್ ಬುಕ್ಕಿಂಗ್ ಮಾಡಿದ್ದಾರೆ. ಯಾವುದೇ ರೀತಿಯ ಜಾಹೀರಾತು ಇಲ್ಲದೇ ಇಷ್ಟೊಂದು ಬೇಡಿಕೆ ಬಂದಿದೆ ಎಂದು ಕಂಪನಿ ಸಿಇಒ ಎಲನ್ ಮಸ್ಕ್ ಹೇಳಿದ್ದಾರೆ.