ನವದೆಹಲಿ:ತೆಲಂಗಾಣ ಸರ್ಕಾರಕ್ಕೆ ಡ್ರೋನ್ ಮೂಲಕ ಲಸಿಕೆ ಸಾಗಾಟಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಷರತ್ತುಬದ್ಧ ವಿನಾಯಿತಿ ನೀಡಿ ಅನುಮತಿಸಿದೆ.
ವಿಷುಯಲ್ ಲೈನ್ ಆಫ್ ಸೈಟ್ (ವಿಎಲ್ಒಎಸ್) ವ್ಯಾಪ್ತಿಯಲ್ಲಿ ಕೋವಿಡ್ -19 ಲಸಿಕೆಗಳ ಪ್ರಾಯೋಗಿಕ ವಿತರಣೆ ನಡೆಸಲು ಡ್ರೋನ್ ಬಳಕೆಯ ಅನುಮತಿ ನೀಡಲಾಗಿದೆ. ಅನುಮತಿಯ ವಿನಾಯಿತಿ ಒಂದು ವರ್ಷ ಅಥವಾ ಮುಂದಿನ ಆದೇಶದವರೆಗೆ ಮಾನ್ಯವಾಗಿರುತ್ತದೆ. ಆಯಾ ಘಟಕಗಳಿಗೆ ಹೇಳಿರುವ ಎಲ್ಲಾ ಷರತ್ತುಗಳು ಮತ್ತು ಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಈ ವಿನಾಯಿತಿಗಳು ಜಾರಿಯಲ್ಲಿ ಇರುತ್ತದೆ ಎಂದು ಎಚ್ಚರಿಕೆ ನೀಡಿದೆ.
ಡ್ರೋನ್ ಬಳಕೆಯನ್ನು ಲಸಿಕೆ ವಿತರಣೆಯ ಅಗತ್ಯವಿರುವ ಪ್ರದೇಶಗಳ ಗುರುತಿಸಲು, ದಟ್ಟವಾದ ಭೌಗೋಳಿಕ ಪ್ರದೇಶ ತಲುಪಲು ಸಹಾಯ ಮಾಡುತ್ತವೆ. ಐಐಟಿ ಕಾನ್ಪುರದ ಸಹಯೋಗದೊಂದಿಗೆ ಡ್ರೋನ್‌ಗಳನ್ನು ಬಳಸಿ ಕೋವಿಡ್ -19 ಲಸಿಕೆ ವಿತರಣೆಯ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಲು ಈ ತಿಂಗಳ ಆರಂಭದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್) ಇದೇ ರೀತಿಯ ಅನುಮತಿ ನೀಡಲಾಯಿತು.
ಈ ಅನುಮತಿ ವೇಗವಾಗಿ ಲಸಿಕೆ ವಿತರಣೆಯ ಉದ್ದೇಶ ಸಾಧನೆ ಹೊಂದಿದೆ. ವೈಮಾನಿಕ ವಿತರಣೆಯ ಮೂಲಕ ಕೋವಿಡ್ ದಟ್ಟಣೆ ಅಥವಾ ಕೋವಿಡ್ ಪೀಡಿತ ಪ್ರದೇಶಗಳಿಗೆ ಜನ ಸಂಚಾರ ಸೀಮಿತಗೊಳಿಸುವ ಇಚ್ಛೆ ಸಹ ಇದೆ. ದೂರದ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಪ್ರವೇಶ ಖಾತ್ರಿಪಡಿಸುವುದು. ವೈದ್ಯಕೀಯ ಸರಬರಾಜು ಸರಪಳಿ ಸುಧಾರಣೆಯಂತಹ ಉದ್ದೇಶ ಇರಿಸಿಕೊಳ್ಳಲಾಗಿದೆ.