ನವದೆಹಲಿ:ಎಲ್ಲ ಅಂಚೆ ಕಚೇರಿ ಯೋಜನೆಗಳಿಂದ ಒಟ್ಟು ಹಿಂಪಡೆಯುವಿಕೆ 20 ಲಕ್ಷ ರೂ.ಗಿಂತ ಹೆಚ್ಚಿದ್ದರೇ ಟಿಡಿಎಸ್ ಕಡಿತಕ್ಕೆ ಅಂಚೆ ಇಲಾಖೆ ಹೊಸ ನಿಯಮಗಳನ್ನು ಹೊರಡಿಸಿದೆ. ಈ ನಿಬಂಧನೆಯು ಪಿಪಿಎಫ್‌ನಿಂದ ಹಿಂಪಡೆಯುವಿಕೆ ಸಹ ಒಳಗೊಂಡಿದೆ.
ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 194 ಎನ್ ಅಡಿ ಹೊಸ ನಿಬಂಧನೆಗಳ ಪ್ರಕಾರ, ಹೂಡಿಕೆದಾರರು ಹಿಂದಿನ 3 ಮೌಲ್ಯಮಾಪನ ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸದಿದ್ದರೆ, ಮೂಲದಲ್ಲಿ (ಟಿಡಿಎಸ್) ಕಡಿತಗೊಳಿಸಿದ ತೆರಿಗೆ ವಾಪಸಾತಿ ಮೊತ್ತದಿಂದ ಕಡಿತಗೊಳಿಸಲಾಗುತ್ತದೆ. ಈ ಹೊಸ ನಿಯಮವು 2020ರ ಜುಲೈ 1ರಿಂದ ಅನ್ವಯಿಸುತ್ತದೆ.
ನಿಬಂಧನೆಗಳ ಪ್ರಕಾರ, ಹೂಡಿಕೆದಾರರಿಂದ ಒಟ್ಟು ಹಣ ಹಿಂಪಡೆಯುವುದು 20 ಲಕ್ಷ ರೂ. ಮೀರಿದೆ, ಆದರೆ, ಹಣಕಾಸು ವರ್ಷದಲ್ಲಿ 1 ಕೋಟಿ ರೂ. ಮೀರದಿದ್ದರೆ ಮತ್ತು ಅವನು/ ಅವಳು ನಾನ್- ಐಟಿಆರ್ ಫೈಲರ್ ಆಗಿದ್ದರೆ, 20 ಲಕ್ಷ ರೂ. ಅಧಿಕ ಮೊತ್ತಕ್ಕೆ ಶೇ 2ರ ದರದಲ್ಲಿ ಟಿಡಿಎಸ್ ಕಡಿತಗೊಳಿಸಲಾಗುತ್ತದೆ.
ಇದನ್ನೂ ಓದಿ: ಗ್ರಾಹಕರ ಗಮನಕ್ಕೆ..! ಏಪ್ರಿಲ್ನಲ್ಲಿ OTP, ಡೆಬಿಟ್, ಕ್ರೆಡಿಟ್ ಕಾರ್ಡ್ಗಳ ಆಟೋಮೆಟಿಕ್ ಬಿಲ್ ಪೇಮೆಂಟ್ ವಿಫಲ!
ಒಂದು ವೇಳೆ ಎಲ್ಲಾ ಅಂಚೆ ಕಚೇರಿ ಖಾತೆಗಳಿಂದ ಒಟ್ಟು ನಗದು ಹಿಂಪಡೆಯುವಿಕೆಯು ಒಂದು ಹಣಕಾಸು ವರ್ಷದಲ್ಲಿ 1 ಕೋಟಿ ರೂ. ಮೀರಿದರೆ, ಶೇ 5 ರಷ್ಟು ಟಿಡಿಎಸ್ ಅನ್ವಯಿಸಲಿದೆ.
ನೀವು ಐಟಿಆರ್ ಫೈಲರ್ ಆಗಿದ್ದರೆ ಮತ್ತು ಹಣಕಾಸು ವರ್ಷದಲ್ಲಿ ಐಟಿಆರ್ ಫೈಲ್ ಮಾಡುವವರಿಂದ ನಗದು ಹಿಂಪಡೆಯುವಿಕೆಯು 1 ಕೋಟಿ ರೂ. ಮೀರಿದರೆ ಆದಾಯ ತೆರಿಗೆ ಪಾವತಿಸಬೇಕಾದ ಮೊತ್ತವು 1 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಶೇ 2ರಷ್ಟಾಗುತ್ತದೆ. ಬದಲಾವಣೆಗಳನ್ನು ಇನ್ನೂ ಸಂಯೋಜಿಸಿಲ್ಲ.
ಟಿಡಿಎಸ್ ಕಡಿತಗೊಳಿಸಲು ಅಂಚೆ ಕಛೇರಿಗಳಿಗೆ ಅನುಕೂಲವಾಗುವಂತೆ ಅಂಚೆ ಕಚೇರಿಗಳಿಗೆ ತಂತ್ರಜ್ಞಾನ ಪರಿಹಾರ ಒದಗಿಸುವ ಅಂಚೆ ತಂತ್ರಜ್ಞಾನದ ಕೇಂದ್ರ (ಸಿಇಪಿಟಿ), 2020ರ ಏಪ್ರಿಲ್ 1ರಿಂದ 2020ರ ಡಿಸೆಂಬರ್ 31ರವರೆಗೆ ಅಂತಹ ಠೇವಣಿದಾರರ ವಿವರಗಳನ್ನು ಗುರುತಿಸಿ ಹೊರತೆಗೆದಿದೆ.
ಸಿಇಪಿಟಿ ಸಂಬಂಧಿತ ವಲಯಗಳಿಗೆ ಅಗತ್ಯ ವಿವರಗಳನ್ನು ಒದಗಿಸುತ್ತದೆ. ಖಾತೆ, ಠೇವಣಿದಾರರ ಪ್ಯಾನ್ ಸಂಖ್ಯೆ ಮತ್ತು ಕಡಿತಗೊಳಿಸಬೇಕಾದ ಟಿಡಿಎಸ್ ಮೊತ್ತದಂತಹ ವಿವರಗಳನ್ನು ಸಿಇಪಿಟಿ ಒದಗಿಸುತ್ತದೆ. ಠೇವಣಿದಾರರ ಆಯಾ ಅಂಚೆ ಕಚೇರಿ ಟಿಡಿಎಸ್ ಕಡಿತಗೊಳಿಸುತ್ತದೆ ಹಾಗೂ ಕಡಿತದ ಬಗ್ಗೆ ಖಾತೆದಾರರಿಗೆ ಮಾಹಿತಿ ನೀಡಲಾಗುತ್ತದೆ.