ನವದೆಹಲಿ :ಮುಂದಿನ 2021ರ ಬಜೆಟ್ನಲ್ಲಿ ವಾಯುಯಾನ ಕ್ಷೇತ್ರಕ್ಕೆ ಸಂಬಂಧಿತ ವಿವಿಧ ತೆರಿಗೆಗಳನ್ನು ತರ್ಕಬದ್ಧಗೊಳಿಸುವ ಬಗ್ಗೆ ಸರ್ಕಾರ ಸುಳಿವು ನೀಡಿದೆ. ಇದು ಕೋವಿಡ್ -19 ಪ್ರೇರಿತ ಆರ್ಥಿಕ ಸಂಕಷ್ಟಕ್ಕೊಳಗಾದ ಉದ್ಯಮದ ಚೇತರಿಕೆಗೆ ನೆರವಾಗಲಿದೆ.
ನಾವು ವಿವಿಧ ತೆರಿಗೆಗಳನ್ನು ತರ್ಕಬದ್ಧಗೊಳಿಸುವ ಮೂಲಕ ಕ್ಷೇತ್ರಕ್ಕೆ ಸಹಾಯ ಮಾಡುವ ದೀರ್ಘಕಾಲೀನ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ವಾಯುಯಾನ ಕ್ಷೇತ್ರವನ್ನು ಸುಸ್ಥಿರಗೊಳಿಸಿ ಈ ವ್ಯವಸ್ಥೆ ಚುರುಕಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಾಧಿ ಹೇಳಿದರು.
"ವಾಯುಯಾನ, ಪ್ರವಾಸೋದ್ಯಮ ಮತ್ತು ಆತಿಥ್ಯ ಸಂಪರ್ಕ" ಕುರಿತು ವೆಬ್‌ನಾರ್ ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಸವಾಲುಗಳಿಗೆ ಈ ವಲಯವು ಸಜ್ಜಾಗಬೇಕಿದೆ. ದೀರ್ಘಾವಧಿಯ ಉತ್ತಮ ನೀತಿಗಳು ಭವಿಷ್ಯದಲ್ಲಿ ಇಂತಹ ಬಿಕ್ಕಟ್ಟಿನಿಂದ ಹೊರ ಬರಲು ನೆರವಾಗುತ್ತವೆ ಎಂದರು.