ನವದೆಹಲಿ: ಕೊರೊನಾ 2ನೇ ಅಲೆಯಿಂದಾಗಿ ದೇಶಾದ್ಯಂತ ನಡೆಯುತ್ತಿರುವ ಲಾಕ್ಡೌನ್ ನಿಯಮ ಗಮನದಲ್ಲಿಟ್ಟುಕೊಂಡು ಏಪ್ರಿಲ್ 1 ಮತ್ತು ಮೇ 31ರ ವಾರಂಟಿ ಅಂತ್ಯವಾಗುವ ಹಾಗೂ ಉಚಿತ ಸೇವಾ ಅವಧಿಯನ್ನು ಜೂನ್ 30ರ ವರೆಗೆ ವಿಸ್ತರಿಸಿ ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ.
ದೇಶಾದ್ಯಂತ ನಡೆಯುತ್ತಿರುವ ಲಾಕ್‌ಡೌನ್‌ನಿಂದಾಗಿ ಹಲವಾರು ಗ್ರಾಹಕರು ನಿರ್ವಹಣೆಗೆ ನಿಗದಿಪಡಿಸಿದ ವಾಹನಗಳಿಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಮಾರಾಟದ ನಂತರದ ಗ್ರಾಹಕರ ಸೇವೆಯನ್ನು ತಡೆ ರಹಿತವಾಗಿ ಮತ್ತು ತೊಂದರೆಯಿಲ್ಲದೇ ನೀಡಲು ಕಂಪನಿಯು ಖಾತರಿ ಮತ್ತು ಉಚಿತ ಸೇವಾ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿದೆ ಎಂದು ಟಾಟಾ ಮೋಟಾರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.