ನ್ಯೂಯಾರ್ಕ್: ಚೀನಾದಲ್ಲಿರುವ ಅಮೆರಿಕ ಮೂಲದ ಸುಮಾರು 200 ಕಂಪನಿಗಳು ಭಾರತಕ್ಕೆ ಬಂದು ತಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳುವ ಆಸಕ್ತಿ ಹೊಂದಿವೆ ಎಂದು ಅಮೆರಿಕ- ಭಾರತ ಕಾರ್ಯತಂತ್ರ ಮತ್ತು ಪಾಲುದಾರಿಕೆ ವೇದಿಕೆಯ (ಯುಎಸ್ಐಎಸ್ಪಿಎಫ್) ಅಧ್ಯಕ್ಷ ಮುಖೇಶ್ ಅಘಿ ಹೇಳಿದ್ದಾರೆ.
ಅಮೆರಿಕಕ್ಕೆ ಭೇಟಿ ನೀಡಿರುವತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರೊಂದಿಗೆ ನಡೆದ ಹೂಡಿಕೆದಾರರ ಸಂವಾದಾತ್ಮಕ ಸಭೆಯಲ್ಲಿ ಮಾತನಾಡಿದ ಅವರು, ಅಮೆರಿಕ- ಭಾರತ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ವಹಿವಾಟು ಸಂಬಂಧಗಳನ್ನು ಉತ್ತೇಜಿಸುವ ಸಂಘಟನೆ, ಭಾರತದಲ್ಲಿ ಹೇಗೆ ಹೂಡಿಕೆ ಮಾಡಬೇಕೆಂಬುದರ ಬಗ್ಗೆ ಆಸಕ್ತ ಕಂಪನಿಗಳಿಂದ ವಿವರಣೆಗಳನ್ನು ಸ್ವೀಕರಿಸಿದೆ. ಆ ಎಲ್ಲ ಕಂಪನಿಗಳು ಭಾರತಕ್ಕೆ 21 ಬಿಲಿಯನ್ ಡಾಲರ್ನಷ್ಟು ಹೂಡಿಕೆ ತರುವ ಸಾಮರ್ಥ್ಯ ಹೊಂದಿವೆ ಎಂದು ಹೇಳಿದರು.