ಮೈಸೂರು: ಸ್ವಿಟ್ಜರ್ಲೆಂಡ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕ್ಲೀನ್‌ಫಿಕ್ಸ್ ರೀನಿಗುಂಗ್ ಸಿಸ್ಟಮ್ ಎಜಿ (ಕ್ಲೀನ್‌ಫಿಕ್ಸ್), ರೋಬೊಟ್ ಕ್ಲೀನಿಂಗ್ ಮತ್ತು ಶುಚಿಗೊಳಿಸುವ ಯಂತ್ರಗಳ ತಯಾರಿಕೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದ್ದು, ಮೈಸೂರಿನಲ್ಲಿ ತನ್ನ ಉತ್ಪಾದನಾ ಘಟಕ ಸ್ಥಾಪಿಸಲಿದೆ.
ಮೈಸೂರು ಮೂಲದ ಸ್ಕೇವರನ್ ಲ್ಯಾಬೊರೇಟರೀಸ್ ಪ್ರೈ. ಲಿಮಿಟೆಡ್ (ಸ್ಕೇವರನ್) ಸಹಭಾಗಿತ್ವದಡಿ ಕ್ಲೀನ್ಫಿಕ್ಸ್ಸ್ಕೇವರನ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌ನ ಜಂಟಿಯಾಗಿ ಸ್ಥಾಪಿಸಲಿವೆ. ಸ್ವಿಸ್ ತಂತ್ರಜ್ಞಾನ ಬೆಂಬಲಿತ ರೊಬೊಟಿಕ್ ಕ್ಲೀನಿಂಗ್ ಯಂತ್ರಗಳು ಮತ್ತು ಆಧುನಿಕ ಭಾರತೀಯ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗುವುದು ಎಂದು ಜಂಟಿ ಪ್ರಕಟಣೆಯಲ್ಲಿ ತಿಳಿಸಿವೆ.
ಸ್ವಿಟ್ಜರ್ಲೆಂಡ್ ಗಡಿ ಹೊರಗೆ ಇದೇ ಮೊದಲ ಬಾರಿಗೆ ಕ್ಲೀನ್‌ಫಿಕ್ಸ್, ಮೈಸೂರಿನ ಸ್ಕೇವರನ್ ಜೊತೆ ಒಪ್ಪಂದ ಮಾಡಿಕೊಂಡು ಅತ್ಯಾಧುನಿಕ ಘಟಕದಲ್ಲಿ ಸ್ವಚ್ಛತಾ ಯಂತ್ರಗಳ ಉತ್ಪಾದನೆ ಪ್ರಾರಂಭಿಸಲಿದೆ.
ಸ್ಕೀವರನ್ ಸಹಕಾರ, ಅದರ ಪರಿಣಿತ ತಂತ್ರಜ್ಞರ ಮತ್ತು ದಕ್ಷಿಣ ಏಷ್ಯಾ ಹಾಗೂ ಮಧ್ಯಪ್ರಾಚ್ಯ ಮಾರುಕಟ್ಟೆಗಳಲ್ಲಿ ಸ್ವಚ್ಛಗೊಳಿಸುವ ಉದ್ಯಮದ ಬಗ್ಗೆ ಇನ್ನಷ್ಟು ಅರ್ಥೈಸಿಕೊಳ್ಳಲು ಕಂಪನಿಯೊಂದಿಗೆ ಮೈತ್ರಿ ನಮಗೆ ನೆರವಾಗಲಿದೆ ಎಂದು ಕ್ಲೀನ್‌ಫಿಕ್ಸ್ ರೀನಿಗುಂಗ್ ಸಿಸ್ಟಮ್ ಎಜಿ ಸಿಇಒ ಫೆಲಿಕ್ಸ್ ರುಸ್ಚ್ ಹೇಳಿದ್ದಾರೆ.
ಸ್ಕೆವರನ್ ವಿಶಾಲ ಮಾರುಕಟ್ಟೆ ಜಾಲವು ನಮಗೆ ಹೊಸ ಮಾರ್ಗಗಳನ್ನು ತೆರೆಯಲು ಸಹಾಯ ಮಾಡುತ್ತದೆ. ದಕ್ಷಿಣ ಏಷ್ಯಾ ಮತ್ತು ಮಧ್ಯಪ್ರಾಚ್ಯ ಮಾರುಕಟ್ಟೆಗಳಿಗೆ ನಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ಯೋಜಿಸಿದ್ದೇವೆ ಎಂದರು. ಸ್ಕ್ರಬ್ಬರ್ ಡ್ರೈಯರ್, ವೆಟ್ ಅಂಡ್ ಡ್ರೈ ವ್ಯಾಕ್ಯೂಮ್ ಕ್ಲೀನರ್ ಸೇರಿ ಇತರೆ ಸ್ವಚ್ಛಗೊಳಿಸುವ ಯಂತ್ರಗಳ ಶ್ರೇಣಿ ಉತ್ಪಾದಿಸಲಿದೆ.