ನವದೆಹಲಿ :ಕೊರೊನಾ ವೈರಸ್ ಸಾಂಕ್ರಾಮಿಕ ಮಧ್ಯೆ ಅಂತಾರಾಷ್ಟ್ರೀಯ ವಿಮಾನಗಳ ಅಮಾನತು ಆದೇಶವನ್ನು ಅಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ತಿಳಿಸಿದೆ.
ಅಂತಾರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತ ಅಗಸ್ಟ್ 31ರ ತನಕ ವಿಸ್ತರಣೆ : ಡಿಜಿಸಿಎ - ಅಂತಾರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತ
ಭಾರತದಿಂದ ವಿದೇಶಗಳಿಗೆ/ವಿದೇಶಗಳಿಂದ ಭಾರತಕ್ಕೆ ಹಾರಾಟ ನಡೆಸುವ ಷೆಡ್ಯೂಲ್ಡ್ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಯ ಅಮಾನತು ಅಗಸ್ಟ್ 31ರವರೆಗೆ ವಿಸ್ತರಿಸಲು ನಿರ್ಧರಿಸಿದೆ..
![ಅಂತಾರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತ ಅಗಸ್ಟ್ 31ರ ತನಕ ವಿಸ್ತರಣೆ : ಡಿಜಿಸಿಎ international flights](https://etvbharatimages.akamaized.net/etvbharat/prod-images/768-512-8250728-thumbnail-3x2-flight.jpg)
ಅಂತಾರಾಷ್ಟ್ರೀಯ ವಿಮಾನ
ಅಂತಾರಾಷ್ಟ್ರೀಯ ವಾಣಿಜ್ಯ ಸೇವೆಗಳ ಹಾರಾಟ ಸ್ಥಗಿತವನ್ನು ಜುಲೈ 31ರವರೆಗೆ ನಿಗದಿಪಡಿಸಲಾಗಿತ್ತು. ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಮಾರ್ಚ್ ಅಂತ್ಯದಲ್ಲಿ ಸಾಗರೋತ್ತರ ವಿಮಾನಗಳ ಸೇವೆ ಸ್ಥಗಿತಗೊಳಿಸಲಾಗಿತ್ತು. ಸರಕು ಮತ್ತು ಡಿಜಿಸಿಎ ಅನುಮೋದಿಸಿದ ವಿಮಾನಗಳ ಹಾರಾಟಕ್ಕೆ ಮಾತ್ರವೇ ಅನುಮತಿ ನೀಡಲಾಗಿದೆ.
ಭಾರತದಿಂದ ವಿದೇಶಗಳಿಗೆ/ವಿದೇಶಗಳಿಂದ ಭಾರತಕ್ಕೆ ಹಾರಾಟ ನಡೆಸುವ ಷೆಡ್ಯೂಲ್ಡ್ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಯ ಅಮಾನತು ಅಗಸ್ಟ್ 31ರವರೆಗೆ ವಿಸ್ತರಿಸಲು ನಿರ್ಧರಿಸಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಪ್ರಕಟಣೆಯಲ್ಲಿ ತಿಳಿಸಿದೆ.