ಚೆನ್ನೈ: ದೇಶಾದ್ಯಂತ ಮಾರ್ಚ್ 15 ಮತ್ತು 16ರಂದು ಕರ ನೀಡಿದ್ದ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ 'ದೊಡ್ಡ ಯಶಸ್ಸು' ಕಂಡಿದೆ. ಎರಡು ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಪರಿಶೀಲಿಸಬೇಕು ಎಂದು ಬ್ಯಾಂಕ್ ಉದ್ಯೋಗಿಗಳ ಸಂಘದ ಉನ್ನತ ಮುಖಂಡರು ಒತ್ತಾಯಿಸಿದ್ದಾರೆ.
ಈಟಿವಿ ಭಾರತ ಜತೆ ಮಾತನಾಡಿದ ಆಲ್ ಇಂಡಿಯನ್ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಹೆಚ್. ವೆಂಕಟಾಚಲಂ, ಬಹುತೇಕ ರಾಜಕೀಯ ಪಕ್ಷಗಳು, ಕಾರ್ಮಿಕ ಸಂಘಗಳು ಮತ್ತು ಗ್ರಾಹಕರು ಸಹ ಪ್ರತಿಭಟನೆಗೆ ಬೆಂಬಲಿಸಿದ್ದು, ನಮ್ಮ ಪ್ರತಿಭಟನೆ ಯಶಸ್ವಿಯಾಗಿದೆ. ಸರ್ಕಾರ ಅದನ್ನು ನೋಡಿರಬೇಕು. ಈಗಾಗಲೇ ಹೆಚ್ಚಿನ ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಎಲ್ಲಾ ಕಾರ್ಮಿಕ ಸಂಘಗಳು ಬೆಂಬಲಿಸುತ್ತಿವೆ. ಜನ ಹಾಗೂ ಗ್ರಾಹಕರ ಕೂಡ ಬೆಂಬಲವಾಗಿ ನಿಂತಿದ್ದಾರೆ. ಇದೊಂದು ಸರ್ಕಾರಕ್ಕೆ ಎಚ್ಚರಿಕೆಯ ಸಂಕೇತವಾಗಿದೆ ಎಂದರು.
ಪ್ರಸ್ತಾವನೆ ಪರಿಶೀಲಿಸಲು ಸರ್ಕಾರ ಸಿದ್ಧವಾದರೆ ನೌಕರರ ಸಂಘ ಮಾತುಕತೆ ನಡೆಸಲಿದೆ. ಇಲ್ಲದಿದ್ದರೆ ನಾವು ನಮ್ಮ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಹೇಳಿದರು.
ಐಡಿಬಿಐ ಬ್ಯಾಂಕ್ ಹೊರತುಪಡಿಸಿ 2021-22ರಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕ್ಗಳು ಮತ್ತು ಒಂದು ಸಾಮಾನ್ಯ ವಿಮಾ ಕಂಪನಿಯ ಖಾಸಗೀಕರಣ ಕೈಗೊಳ್ಳಲು ನಾವು ಪ್ರಸ್ತಾಪಿಸುತ್ತೇವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಲೋಕಸಭೆಯಲ್ಲಿ ಬಜೆಟ್ ಮಂಡಿಸುವಾಗ ಹೇಳಿದ್ದರು.
ಬ್ಯಾಂಕ್ಗಳ ಖಾಸಗೀಕರಣದ ಜೊತೆಗೆ, ಯುಎಫ್‌ಬಿಯು ಕೆಟ್ಟ ಬ್ಯಾಂಕ್ ಸ್ಥಾಪನೆ, ಎಲ್‌ಐಸಿಯ ಆರಂಭಿಕ ಸಾರ್ವಜನಿಕ ಕೊಡುಗೆ ವಿರೋಧಿಸುತ್ತಿದ್ದು, ವಿಮಾ ಕ್ಷೇತ್ರಕ್ಕೆ ಶೇ 74ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡುತ್ತದೆ.
5 ಟ್ರಿಲಿಯನ್ ಅಮೆರಿಕ ಡಾಲರ್ ಆರ್ಥಿಕತೆ ಸಾಧಿಸಲು ಪಿಎಸ್ಬಿಗಳು ಅವಶ್ಯಕ: