ಮುಂಬೈ:ವಿಶ್ವ ಆರೋಗ್ಯ ಸಂಸ್ಥೆ ನಿನ್ನೆ ಕೊರೊನಾ ವೈರಸ್ ಸಂಬಂಧಿಸಿದಂತೆ ಇದೊಂದು ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಜಾಗತಿಕ ಷೇರುಪೇಟೆಗಳಲ್ಲಿ ಮತ್ತೆ ತಲ್ಲಣ ಸೃಷ್ಟಿಯನ್ನುಂಟು ಮಾಡಿದೆ. ಇಂದು ಬೆಳಗ್ಗೆ ವ್ಯವಹಾರ ಆರಂಭಿಸುತ್ತಿದ್ದಂತೆ ಮತ್ತೆ 3ಸಾವಿರ ಅಂಕಗಳಷ್ಟು ಕಸಿದು 29.850 ಅಂಕಗಳಿಗೆ ಬಂದು ತಲುಪಿತ್ತು.
ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಶೇ 10 ರಷ್ಟು ಕುಸಿತ ಕಂಡು ಹೂಡಿಕೆದಾರ ಮೇಲೇಳದಂತೆ ಮಾಡಿದೆ. ಕೊರೊನಾ ಆತಂಕದ ಬೆನ್ನಲ್ಲೇ ಹೂಡಿಕೆದಾರರು, ತಮ್ಮ ಹಣ ವಾಪಸ್ ಪಡೆಯಲು ಮುಗಿಬಿದ್ದಿದ್ದರಿಂದ ಮುಂಬೈ ಷೇರುಪೇಟೆ ಶೇ 10 ರಷ್ಟು ಕುಸಿತ ಕಂಡು ಹೂಡಿಕೆದಾರರ ಹಣವನ್ನ ಬರಿದು ಮಾಡಿದೆ.
ಭಾರಿ ನಷ್ಟದ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆಯ ವ್ಯವಹಾರವನ್ನ 45 ನಿಮಿಷಗಳ ಕಾಲ ಸ್ಥಗಿತ ಮಾಡಲಾಗಿತ್ತು.
ಇನ್ನು ಅಮೆರಿಕದ ನಾಸ್ಡಾಕ್ 750 ಅಂಕಗಳನ್ನ ಕಳೆದುಕೊಂಡು 7201 ಅಂಕಗಳಿಗೆ ತಲುಪಿದೆ. ಡಾಜೋನ್ಸ್ 2352 ಅಂಕಗಳ ಭಾರಿ ಕುಸಿತ ಕಂಡು ನಡುಗಿ ಹೋಗಿದೆ. ಇದು ಕೇವಲ ಭಾರತ ಷೇರು ಮಾರುಕಟ್ಟೆ ಕಥೆ ಅಲ್ಲ ಬಹುತೇಕ ಜಾಗತಿಕ ಷೇರು ಮಾರುಕಟ್ಟೆಗಳ ಕಥೆ ಎಂಬುದು ಸಾಬೀತಾಗಿದೆ.