ಕರ್ನಾಟಕ

karnataka

ETV Bharat / business

ಮೊದಲ ಬಾರಿಗೆ ಹೈದರಾಬಾದ್- ಬೆಂಗಳೂರು ನಡುವೆ ವಿಮಾನ ಆರಂಭಿಸಿದ ಸ್ಟಾರ್ ಏರ್​​ - ಸ್ಟಾರ್ ಏರ್​ ಕಂಪನಿಯ ಎಂಬ್ರಾಯಿರ್ ಜೆಟ್​

ಪ್ರಮುಖ ವಿಮಾನಯಾನ ಕಂಪನಿಗಳೊಂದಿಗೆ ಸ್ಟಾರ್ ಏರ್​​ ಕಂಪನಿ ಸ್ಪರ್ಧಿಸುತ್ತಿದ್ದು, ಹೈದರಾಬಾದ್ ಮತ್ತು ಬೆಂಗಳೂರು ನಡುವೆ ವಿಮಾನ ಸಂಚಾರ ಆರಂಭಿಸಿದೆ.

Star Air announces its first-ever flight service between two metro cities
ಮೊದಲ ಬಾರಿಗೆ ಹೈದರಾಬಾದ್- ಬೆಂಗಳೂರು ನಡುವೆ ವಿಮಾನ ಆರಂಭಿಸಿದ ಸ್ಟಾರ್ ಏರ್​​

By

Published : Aug 25, 2021, 12:49 PM IST

ಬೆಂಗಳೂರು:ಸ್ಟಾರ್ ಏರ್​ ವಿಮಾನಯಾನ ಕಂಪನಿ ನಾಳೆಯಿಂದ ಹೈದರಾಬಾದ್ ಮತ್ತು ಬೆಂಗಳೂರು ನಡುವಿನ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಈ ವಿಮಾನ ಸೇವೆಯು ಮಂಗಳವಾರ, ಗುರುವಾರ ಮತ್ತು ಶನಿವಾರ ಪ್ರಯಾಣಿಕರಿಗೆ ದೊರಕಲಿದೆ.

ಸ್ಟಾರ್ ಏರ್​ ಕಂಪನಿಯ ಎಂಬ್ರಾಯಿರ್ ಜೆಟ್​ ಎರಡೂ ಮಹಾನಗರಗಳ ಮಧ್ಯೆ ಕಾರ್ಯಾಚರಣೆ ನಡೆಸಲಿದ್ದು, ಹೈದರಾಬಾದ್​ ಈ ವಿಮಾನಯಾನ ಕಂಪನಿಯ ತನ್ನ ಕಾರ್ಯಾಚರಣೆಯನ್ನು ಆರಂಭಿಸಿರುವ 15ನೇ ನಗರವಾಗಿದೆ.

ಇದೇ ಮೊದಲ ಬಾರಿಗೆ ವಿಮಾನಯಾನ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖವಾದ ಸಂಸ್ಥೆಗಳೊಂದಿಗೆ ಸ್ಟಾರ್ ಏರ್ ಸ್ಪರ್ಧೆಗೆ ಇಳಿದಿದೆ. 50 ಆಸನಗಳುಳ್ಳ ಎಂಬ್ರಾಯಿರ್ ಜೆಟ್​ ಆರಾಮದಾಯಕ ಪ್ರಯಾಣವನ್ನು ನೀಡಲಿದೆ. ಹೈದರಾಬಾದ್-ಬೆಂಗಳೂರು ನಡುವೆ ವಿಮಾನ ಸಂಚಾರ ಆರಂಭಿಸಿರುವುದು ನಮ್ಮ ಸಂಸ್ಥೆಗೆ ಮೈಲುಗಲ್ಲು ಎಂದು ಸ್ಟಾರ್ ಏರ್​ನ ಅಧ್ಯಕ್ಷ ಸಂಜಯ್ ಗೋಡಾವತ್​ ಹೇಳಿದ್ದಾರೆ.

ಇದರೊಂದಿಗೆ ಬೆಂಗಳೂರು, ಗುಜರಾತ್​ನ ಜಾಮ್​ನಗರ ಮತ್ತು ಹೈದರಾಬಾದ್​ಗೆ ವಿಮಾನಯಾನ ಸೇವೆಯನ್ನು ಸ್ಟಾರ್ ಏರ್​ ವಿಮಾನಯಾನ ಸಂಸ್ಥೆ ಪರಿಚಯಿಸುತ್ತಿದೆ.

ಇದನ್ನೂ ಓದಿ:ಅಫ್ಘಾನಿಸ್ತಾನದಿಂದ ಬಂದ 78 ಮಂದಿಯಲ್ಲಿ 16 ಮಂದಿಗೆ ಕೋವಿಡ್ ಪಾಸಿಟಿವ್​

ABOUT THE AUTHOR

...view details