ಹೈದರಾಬಾದ್ :ರಷ್ಯಾದ ಕೋವಿಡ್-19 ಲಸಿಕೆ 'ಸ್ಪುಟ್ನಿಕ್ ವಿ'ನ 30 ಲಕ್ಷ ಡೋಸ್‌ಗಳನ್ನು ಹೊತ್ತ ವಿಮಾನ ಮಂಗಳವಾರ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
ರಷ್ಯಾದಿಂದ ವಿಶೇಷ ಚಾರ್ಟರ್ಡ್ ಸರಕು ಸಾಗಣೆ ಆರ್‌ಯು-9450 ವಿಮಾನ ಲಸಿಕೆಗಳನ್ನು ಹೊತ್ತು ತಂದಿದೆ. ಇದು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ 03.43 ಗಂಟೆಗೆ ತಲುಪಿತು ಎಂದು ಜಿಎಂಆರ್ ಹೈದರಾಬಾದ್ ಏರ್ ಕಾರ್ಗೋ (ಜಿಎಚ್‌ಎಸಿ) ಪ್ರಕಟಣೆಯಲ್ಲಿ ತಿಳಿಸಿದೆ.
ಜಿಹೆಚ್‌ಎಸಿ ಈಗಾಗಲೇ ಹಲವು ಲಸಿಕೆಗಳ ಆಮದು ಸಾಗಣೆ ನಿಭಾಯಿಸಿದ್ದರೂ, ಇಂದಿನ ದಿನಗಳಲ್ಲಿ 56.6 ಟನ್ ಲಸಿಕೆಗಳನ್ನು ರವಾನಿಸುವುದು ಭಾರತದಲ್ಲಿ ಈವರೆಗೆ ನಿರ್ವಹಿಸಲಾದ ಕೋವಿಡ್-19 ಲಸಿಕೆಗಳ ಏಕೈಕ ಅತಿದೊಡ್ಡ ಆಮದು ಸಾಗಣೆಯಾಗಿದೆ. ಈ ಸಾಗಣೆಯು ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, 90 ನಿಮಿಷಗಳಲ್ಲಿ ತ್ವರಿತವಾಗಿ ವಿಲೇವಾರಿ ಮಾಡಲಾಯಿತು ಎಂದು ಹೇಳಿದೆ.
ಇದನ್ನೂ ಓದಿ: ಮೇ ತಿಂಗಳಲ್ಲಿ ಮಾರುತಿ ಸುಜುಕಿ ವಾಹನ ಮಾರಾಟ ಶೇ 71ರಷ್ಟು ಇಳಿಕೆ!