ಕರ್ನಾಟಕ

karnataka

ETV Bharat / business

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಶೇ.40ರಷ್ಟು ನಷ್ಟ.. - ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಶೇಕಡಾ 40 ರಷ್ಟು ನಷ್ಟ

ಡೇಟಾ ಉಲ್ಲಂಘನೆ ಬಗ್ಗೆ ಗ್ರಾಹಕರಿಗೆ ತಿಳಿಸುವವರು ತೀರಾ ಕಡಿಮೆ. ಕಂಪನಿಯ ವ್ಯವಹಾರವನ್ನು ಬಹಿರಂಗ ಪಡಿಸಿದ್ರೆ, ಗ್ರಾಹಕರು ಆ ಬ್ರ್ಯಾಂಡ್ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಉತ್ಪನ್ನ ಮಾರುಕಟ್ಟೆ ವ್ಯವಸ್ಥಾಪಕ ಯಾನಾ ಶೆವ್ಚೆಂಕೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..

financial loss
ಶೇಕಡಾ 40 ರಷ್ಟು ನಷ್ಟ

By

Published : Nov 28, 2020, 3:19 PM IST

ನವದೆಹಲಿ : ದತ್ತಾಂಶ ಉಲ್ಲಂಘನೆಯ ಬಗ್ಗೆ ಸ್ವಯಂ ಪ್ರೇರಣೆಯಿಂದ ಮಾಹಿತಿ ನೀಡಲು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಿರ್ಧರಿಸಿವೆ. ಶೇಕಡಾ 40ರಷ್ಟು ಆರ್ಥಿಕತೆ ಕುಸಿದಿರುವ ಸಾಧ್ಯತೆಯಿದೆ ಎಂದು ಹೊಸ ವರದಿ ತಿಳಿಸಿದೆ.

ಸಣ್ಣ ಮತ್ತು ಮಧ್ಯಮ ಉದ್ಯಮಗಳು ಡೇಟಾ ಉಲ್ಲಂಘನೆ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ವಿಫಲವಾದ್ರೆ, ಆರ್ಥಿಕ ಮತ್ತು ಪ್ರತಿಷ್ಠಿತ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕ್ಯಾಸ್ಪರ್ಸ್ಕಿ ವರದಿ ಬಹಿರಂಗಪಡಿಸಿದೆ.

ಡೇಟಾ ಉಲ್ಲಂಘನೆ ಬಗ್ಗೆ ಗ್ರಾಹಕರಿಗೆ ತಿಳಿಸುವವರು ತೀರಾ ಕಡಿಮೆ. ಕಂಪನಿಯ ವ್ಯವಹಾರವನ್ನು ಬಹಿರಂಗ ಪಡಿಸಿದ್ರೆ, ಗ್ರಾಹಕರು ಆ ಬ್ರ್ಯಾಂಡ್ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಉತ್ಪನ್ನ ಮಾರುಕಟ್ಟೆ ವ್ಯವಸ್ಥಾಪಕ ಯಾನಾ ಶೆವ್ಚೆಂಕೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೆಲವು ಕಂಪನಿಗಳು ಅವರ ಹೂಡಿಕೆ ಹಾಗೂ ದಂಡದ ಮಾಹಿತಿ ಬಗ್ಗೆ ಬಹಿರಂಗ ಪಡಿಸದಿದ್ದಕ್ಕಾಗಿ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆ ಕೇಳಿ ಬಂದಿತ್ತು. ಶೇಕಡಾ 46ರಷ್ಟು ಉದ್ಯಮಗಳು ಮಾತ್ರ ಉಲ್ಲಂಘನೆಯನ್ನು ಪೂರ್ವಭಾವಿಯಾಗಿ ಬಹಿರಂಗಪಡಿಸಿವೆ. ಡೇಟಾ ಉಲ್ಲಂಘನೆ ಮಾಡಿರುವ ಶೇ.30ರಷ್ಟು ಸಂಸ್ಥೆಗಳು ವರದಿ ಬಹಿರಂಗ ಪಡಿಸದಿರಲು ನಿರ್ಧರಿಸಿವೆ.

ABOUT THE AUTHOR

...view details