ಕರ್ನಾಟಕ

karnataka

ಇಸ್ರೋ ಉಪಗ್ರಹ ಉಡಾವಣೆ ಸೇವೆಗಳಿಗೆ ಶೂನ್ಯ ತೆರಿಗೆ: ಸಣ್ಣ ತೆರಿಗೆದಾರರಿಗೆ ಬಿಗ್ ರಿಲೀಫ್ ಕೊಟ್ಟ GST ಮಂಡಳಿ!

By

Published : Oct 5, 2020, 8:12 PM IST

5 ಕೋಟಿ ರೂ.ಗಿಂತ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವ ತೆರಿಗೆದಾರರು ಮಾಸಿಕ ರಿಟರ್ನ್ಸ್ ಸಲ್ಲಿಸುವ (ಜಿಎಸ್​ಟಿಆರ್ -3 ಬಿ ಮತ್ತು ಜಿಎಸ್​ಟಿಆರ್ -1) ಅಗತ್ಯವಿಲ್ಲ. ತ್ರೈಮಾಸಿಕ ಆಧಾರಿತ ಆದಾಯ ಸಲ್ಲಿಕೆ ಮಾಡಬೇಕಾಗುತ್ತದೆ ಎಂದು ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹೇಳಿದರು.

GST
ಜಿಎಸ್‌ಟಿ

ನವದೆಹಲಿ: 42ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಸಭೆಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ವೇಳೆ ಮಾಸಿಕ ತೆರಿಗೆದಾರರಿಗೆ ಕೆಲ ವಿನಾಯಿತಿಗಳನ್ನು ಘೋಷಿಸಿದೆ.

5 ಕೋಟಿ ರೂ.ಗಿಂತ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವ ತೆರಿಗೆದಾರರು ಮಾಸಿಕ ರಿಟರ್ನ್ಸ್ ಸಲ್ಲಿಸುವ (ಜಿಎಸ್​ಟಿಆರ್ -3 ಬಿ ಮತ್ತು ಜಿಎಸ್​ಟಿಆರ್ -1) ಅಗತ್ಯವಿಲ್ಲ. ತ್ರೈಮಾಸಿಕ ಆಧಾರಿತ ಆದಾಯ ಸಲ್ಲಿಕೆ ಮಾಡಬೇಕಾಗುತ್ತದೆ ಎಂದು ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹೇಳಿದರು.

ಸಣ್ಣ ತೆರಿಗೆದಾರರಿಗೆ ಮಾಸಿಕ ಆಧಾರಕ್ಕಿಂತ ತ್ರೈಮಾಸಿಕ ಆಧಾರದ ಮೇಲೆ ಆದಾಯ ಸಲ್ಲಿಸುವ ಬಗೆಗಿನ ಜಿಎಸ್​ಟಿ ಮಂಡಳಿಯ ನಿರ್ಧಾರವು ಸಣ್ಣ ತೆರಿಗೆದಾರರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಆದಾಯ ಸಲ್ಲಿಕೆಯ ಸಂಖ್ಯೆಯು 24 ಮಾಸಿಕದಿಂದ 8 ರಿಟರ್ನ್‌ಗಳಿಗೆ ಬರುತ್ತದೆ. ಉದ್ದೇಶಿತ ಯೋಜನೆಯು 2021ರ ಜನವರಿ 1 ರಿಂದ ಅನುಷ್ಠಾನಕ್ಕೆ ಬರಲಿದೆ ಎಂದರು.

ಹೂಡುವಳಿ ತೆರಿಗೆ (ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌- ಐಟಿಸಿ) ಅನ್ನು ಲೆಕ್ಕಹಾಕಲು ತೆರಿಗೆದಾರರಿಗೆ ನೆರವಾಗಲು ಜಿಎಸ್​​ಟಿಆರ್-2 ಬಿ ಅನ್ನು ಒದಗಿಸಲಾಗಿದೆ. ಇದು ತೆರಿಗೆದಾರರಿಗೆ ಅರ್ಹವಾದ ಐಟಿಸಿಯ ಸಂಪೂರ್ಣ ಕಲ್ಪನೆಯನ್ನು ನೀಡುತ್ತದೆ. 2021ರ 1 ಏಪ್ರಿಲ್​ರಿಂದ 5 ಕೋಟಿ ರೂ.ಯಷ್ಟು ವಹಿವಾಟು ಹೊಂದಿರುವ ತೆರಿಗೆದಾರರು 6 ಅಂಕಗಳವರೆಗೆ ಎಚ್‌ಎಸ್‌ಎನ್ ಕೋಡ್‌ಗಳನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಬಿ2ಬಿ ವಹಿವಾಟಿನಡಿ 5 ಕೋಟಿ ರೂ.ಗಿಂತ ಕಡಿಮೆ ಇರುವವರು ಎಚ್‌ಎಸ್‌ಎನ್​ ಕೋಡ್ ಅನ್ನು 4 ಅಂಕಗಳವರೆಗೆ ನಮೂದಿಸಬೇಕಾಗುತ್ತದೆ ಎಂದು ವಿವರಿಸಿದರು.

ನಿಕಟವಾದ ಟ್ರ್ಯಾಕಿಂಗ್ ಅಗತ್ಯವೆಂದು ಸರ್ಕಾರವು ಭಾವಿಸುವ ಕೆಲವು ವರ್ಗದ ಸರಕುಗಳಲ್ಲಿ ಎಚ್‌ಎಸ್‌ಎನ್ ಕೋಡ್​ಗಳು 8 ಅಂಕಗಳವರೆಗೆ ಇರಲಿದೆ. ಈ ಬಗ್ಗೆ ಸರ್ಕಾರದಿಂದ ಹೆಚ್ಚಿನ ಮಾಹಿತಿ ನೀಡಲಾಗುವುದು. 2021ರ ಜನವರಿ 1ರಿಂದ ಪಾನ್ ಮತ್ತು ಆಧಾರ್‌ನೊಂದಿಗೆ ಜೋಡಿಸಿದ ಬ್ಯಾಂಕ್ ಖಾತೆಗಳಿಗೆ ಮಾತ್ರ ಮರುಪಾವತಿಸಲಾಗುವುದು. ಕೆಲವು ಕಂಪನಿಗಳ ಮರುಪಾವತಿ ಸ್ವೀಕಾರ ಮತ್ತು ಸ್ವೀಕಾರ ಆಗದ ಪ್ರವೃತ್ತಿಯನ್ನು ಪರಿಶೀಲಿಸಲು ಇದನ್ನು ನಿರ್ಧರಿಸಲಾಗಿದೆ ಎಂದು ಹಣಕಾಸು ಕಾರ್ಯದರ್ಶಿ ತಿಳಿಸಿದರು.

ಇಸ್ರೋ, ಆಂಟ್ರಿಕ್ಸ್, ಐಎಸ್ಐಎಲ್ ಉಪಗ್ರಹ ಉಡಾವಣಾ ಸೇವೆಗಳಿಗೆ ವಿಧಿಸುವ ಶೇ 18ರಷ್ಟು ಜಿಎಸ್​ಟಿಗೆ ಕೇಂದ್ರ ಸರ್ಕಾರವು ವಿನಾಯಿತಿ ನೀಡಿದೆ.

ಉಪಗ್ರಹ ಉಡಾವಣೆಯನ್ನು ಶೇ18ರಷ್ಟು ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗುವುದು. ಇಸ್ರೋದ ಇಸ್ರೋದ ಮಾರ್ಕೆಟಿಂಗ್ ಸಂಸ್ಥೆ ಆಂಟ್ರಿಕ್ಸ್ ಕಾರ್ಪೋರೇಷನ್​ನ ದೇಶೀಯವಾಗಿ ಉಡಾಯಿಸುವ ಉಪಗ್ರಹಗಳನ್ನು ಉತ್ತೇಜಿಸಲು ಜಿಎಸ್‌ಟಿಯಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದೆ ಎಂದು ಭೂಷಣ್ ಹೇಳಿದರು.

ABOUT THE AUTHOR

...view details