ಕರ್ನಾಟಕ

karnataka

ETV Bharat / business

ಆಟೋ ಸೆಕ್ಟರ್​ ಡೆಡ್ಲಿ​ ಕುಸಿತ... 90 ದಿನದಲ್ಲಿ 15 ಸಾವಿರ ನೌಕರರಿಗೆ ಗೇಟ್​ ಪಾಸ್! - ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ

ಕಳೆದ ಎರಡು-ಮೂರು ತಿಂಗಳ ಅವಧಿಯಲ್ಲಿ ಖಾಯಂ ಮತ್ತು ಗುತ್ತಿಗೆದಾರರು ಸೇರಿ ಸುಮಾರು 15 ಸಾವಿರ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ಇಡೀ ವಾಹನೋದ್ಯಮದ ಪ್ರಗತಿ ಕ್ಷೀಣಿಸಿದ್ದು, ವಾಹನಗಳ ಮಾರಾಟದ ಮೇಲೆ ನೇರ ಪರಿಣಾಮ ಬೀರಿದೆ. ಸತತ 9 ತಿಂಗಳಿಂದ ಪ್ರಯಾಣಿಕ ಮತ್ತು ವಾಣಿಜ್ಯ ವಾಹನ ಮಾರಾಟ ದರ ಹಿಮ್ಮುಖವಾಗಿ ಸಾಗಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ ಹೇಳಿದೆ.

ಸಾಂದರ್ಭಿಕ ಚಿತ್ರ

By

Published : Aug 14, 2019, 3:14 PM IST

ನವದೆಹಲಿ:ದೇಶಿ ವಾಹನೋದ್ಯಮ ಭಾರಿ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಎರಡು ವರ್ಷಗಳಲ್ಲಿ ಅನುಭವಿಸಿದ ಆರ್ಥಿಕ ಹೊಡೆತವನ್ನು ಕಳೆದ ಕೆಲ ತಿಂಗಳಿಂದ ಎದುರಿಸುತ್ತಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್​ಐಎಎಂ) ತಿಳಿಸಿದೆ.

ಕಳೆದ ಎರಡ್ಮೂರು ತಿಂಗಳ ಅವಧಿಯಲ್ಲಿ ಖಾಯಂ ಮತ್ತು ಗುತ್ತಿಗೆದಾರರು ಸೇರಿ ಸುಮಾರು 15 ಸಾವಿರ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ಇಡೀ ವಾಹನೋದ್ಯಮದ ಪ್ರಗತಿ ಕ್ಷೀಣಿಸಿದ್ದು, ವಾಹನಗಳ ಮಾರಾಟದ ಮೇಲೆ ನೇರ ಪರಿಣಾಮ ಬೀರಿದೆ. ಸತತ ಒಂಭತ್ತು ತಿಂಗಳಿಂದ ಪ್ರಯಾಣಿಕ ಮತ್ತು ವಾಣಿಜ್ಯ ವಾಹನ ಮಾರಾಟ ದರ ಹಿಮ್ಮುಖವಾಗಿ ಸಾಗಿದೆ ಎಂದು ಒಕ್ಕೂಟ ಹೇಳಿದೆ.

ಜುಲೈನಲ್ಲಿ 2,00,790 ಪ್ಯಾಸೆಂಜರ್​ ವಾಹನಗಳು ಮಾರಾಟ ಕಂಡಿದ್ದರೇ, ಕಮರ್ಸಿಯಲ್​​ ವಾಹನಗಳ ಮಾರಾಟ 56,866 ಯೂನಿಟ್​ಗಳಾಗಿವೆ. ಮೋಟಾರ್​ಸೈಕಲ್​ ಮತ್ತು ಸ್ಕೂಟರ್​ ದರದಲ್ಲಿ ಶೇ. 16.8ರಷ್ಟು ಹಾಗೂ ಶೇ. 36ರಷ್ಟು ಇಳಿಕೆಯಾಗಿ ಕ್ರಮವಾಗಿ 1.51 ಮಿಲಿಯನ್​ ಮತ್ತು 1,22,956 ಉತ್ಪನ್ನಗಳು ಮಾರಾಟ ಕಂಡಿವೆ.

ABOUT THE AUTHOR

...view details