ಕರ್ನಾಟಕ

karnataka

ETV Bharat / business

ಯಶಸ್ಸಿನ ಅಲೆಯಲ್ಲಿ ಸ್ಕೋಡಾದ ಕುಶಾಕ್​ SUV.. 3 ತಿಂಗಳಲ್ಲಿ 4500 ಕಾರುಗಳ ಮಾರಾಟ - ಸ್ಕೋಡಾ ಕುಶಾಕ್​ ಕಾರು ಮಾರಾಟ

ಸ್ಕೋಡಾ ಆಟೋ ಇಂಡಿಯಾ ತನ್ನ ಮಧ್ಯಮ ಗಾತ್ರದ ಎಸ್‌ಯುವಿ ಕುಶಾಕ್‌ನ ಯಶಸ್ಸಿನ ಅಲೆಯ ಮೇಲೆ ತೇಲುತ್ತಿದೆ. ಕಳೆದ 3 ತಿಂಗಳಲ್ಲಿ 4,503 ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಸ್ಕೋಡಾ ಕಂಪನಿ ಹೇಳಿಕೊಂಡಿದೆ.

skoda-auto
ಸ್ಕೋಡಾದ ಕುಶಾಕ್

By

Published : Mar 1, 2022, 5:48 PM IST

ನವದೆಹಲಿ:ಸ್ಕೋಡಾ ಆಟೋ ಇಂಡಿಯಾ ತನ್ನ ಮಧ್ಯಮ ಗಾತ್ರದ ಎಸ್‌ಯುವಿ ಕುಶಾಕ್‌ನ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ಕಳೆದ 3 ತಿಂಗಳ ಅವಧಿಯಲ್ಲಿ ಬರೋಬ್ಬರಿ 4,503 ಕಾರುಗಳನ್ನು ಮಾರಾಟ ಮಾಡಿರುವ ಬಗ್ಗೆ ಸ್ಕೋಡಾ ಕಂಪನಿ ಮಾಹಿತಿ ನೀಡಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು 853 ಕಾರುಗಳನ್ನು ಮಾತ್ರ ಮಾರಾಟ ಮಾಡಿತ್ತು. ಸ್ಕೋಡಾ ಕಂಪನಿಯ ಕುಶಾಕ್ ಎಸ್​ಯ್ಯೂವಿ ಕಾರು ಗ್ರಾಹಕರ ಮನ ಗೆದ್ದಿದ್ದು, ಇದು ಅತ್ಯಧಿಕ ಪ್ರಮಾಣದಲ್ಲಿ ಮಾರಾಟ ಕಾಣುತ್ತಿದೆ. ಫೆಬ್ರವರಿಯಲ್ಲಿ ಇದರ ಮಾರಾಟವು ಉತ್ತಮವಾಗಿತ್ತು ಎಂದು ಸ್ಕೋಡಾ ಆಟೋ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

ಈ ವರ್ಷ ಕಾರು ಮಾರಾಟದಲ್ಲಿ ಧನಾತ್ಮಕ ಅಂಶ ವ್ಯಕ್ತವಾಗಿದೆ. ಇದು ಕೇವಲ ಕಾರುಗಳ ಹೆಚ್ಚಿನ ಮಾರಾಟದಿಂದ ಮಾತ್ರವಲ್ಲದೇ, ಭಾರತದಲ್ಲಿ ಸ್ಕೋಡಾ ಆಟೋದ ಉತ್ಪನ್ನವು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಸಂತಸವನ್ನು ದಪ್ಪಟ್ಟು ಮಾಡಿದೆ ಎಂದು ಸ್ಕೋಡಾ ಆಟೋ ಇಂಡಿಯಾ ಬ್ರ್ಯಾಂಡ್ ಡೈರೆಕ್ಟರ್ ಝಾಕ್ ಹಾಲಿಸ್ ಹೇಳಿದ್ದಾರೆ.

ಸ್ಕೋಡಾ ಕಂಪನಿಯ ಹೊಸ ಅವತರಣಿಕೆಗಳಾದ 1.0 TSI ಮತ್ತು ಸ್ಲಾವಿಯಾ 1.5 TSI ಗಳು ಗ್ರಾಹಕರನ್ನು ಆಕರ್ಷಿಸಿವೆ. ಕಂಪನಿಯು ತನ್ನ ಹೊಸ ಸ್ಕೋಡಾ 1.0 TSI ಅನ್ನು ಫೆಬ್ರವರಿ ತಿಂಗಳಲ್ಲಿ ಪರಿಚಯಿಸಿದ್ದರೆ, ಸ್ಲಾವಿಯಾ 1.0 TSI ಅನ್ನು ನಾಡಿದ್ದು (ಮಾರ್ಚ್​ 3) ಮಾರುಕಟ್ಟೆಗೆ ಪರಿಚಯಿಸಲಿದೆ.

ಓದಿ:ಫೆಬ್ರವರಿಯಲ್ಲಿ 1.33 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ; ಕಳೆದ ವರ್ಷಕ್ಕಿಂತ ಶೇ.18ರಷ್ಟು ಹೆಚ್ಚಳ..

ABOUT THE AUTHOR

...view details