ಕರ್ನಾಟಕ

karnataka

ETV Bharat / business

ಸಿಂಪಲ್‌ ಒನ್‌ ಎಲೆಕ್ಟ್ರಾನಿಕ್‌ ಸ್ಕೂಟರ್‌ ಬಿಡುಗಡೆ: 1.9 ಲಕ್ಷ ರೂ. ಆರಂಭಿಕ ಬೆಲೆ - ಇ-ಸ್ಕೂಟರ್‌

ದೇಶೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನ ತಯಾರಕರ ನಡುವೆ ಸ್ಪರ್ಧೆ ಹೆಚ್ಚುತ್ತಿದೆ. ಓಲಾ ಎಲೆಕ್ಟ್ರಿಕ್ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆಗಸ್ಟ್ 15 ರಂದು ಬಿಡುಗಡೆ ಮಾಡಿತು. ಇದರೊಂದಿಗೆ ಸ್ಪರ್ಧಿಸಲು ಸಿಂಪಲ್ ಎನರ್ಜಿ ಹೊಸ ಇ-ಸ್ಕೂಟರ್ ಅನ್ನು ಅನಾವರಣ ಮಾಡಿದೆ. ಸಿಂಪಲ್ ಎನರ್ಜಿ ಸ್ಕೂಟರ್ ಓಲಾಕ್ಕಿಂತ ಶ್ರೇಣಿಯ ದೃಷ್ಟಿಯಿಂದ ಸ್ವಲ್ಪ ಉತ್ತಮವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಈ ಸ್ಕೂಟರಿನ ಸಂಪೂರ್ಣ ವಿವರ ಇಲ್ಲಿದೆ.

simple energy launches e scooter at rs 1 dot 09 lakh
ಸಿಂಪಲ್‌ ಒನ್‌ ಎಲೆಕ್ಟ್ರಾನಿಕ್‌ ಸ್ಕೂಟರ್‌ ಬಿಡುಗಡೆ; 1.9 ಲಕ್ಷ ರೂ. ಆರಂಭಿಕ ಬೆಲೆ

By

Published : Aug 16, 2021, 9:35 PM IST

ನವದೆಹಲಿ: ಮಾರುಕಟ್ಟೆಯೇ ಹಾಗೆ. ಯಾವುದಾದರೂ ಒಂದು ಹೊಸ ವಾಹನ ಮಾರುಕಟ್ಟೆ ಬಂತೆಂದರೆ ಸಾಕು. ಅದಕ್ಕೆ ಸರಿಸಮಾನ ಅಥವಾ ಅದಕ್ಕಿಂತ ಹೆಚ್ಚಿನ ಸೌಲಭ್ಯಗಳಿರುವ ಮತ್ತೊಂದು ವಾಹನ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟು ಪೈಪೋಟಿ ನೀಡುತ್ತದೆ.

ಓಲಾ ಜೊತೆಗಿನ ಸ್ಪರ್ಧೆಯಲ್ಲಿ ಮತ್ತೊಂದು ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಾದ ಸಿಂಪಲ್ ಎನರ್ಜಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಬೆಂಗಳೂರು ಮೂಲದ ಕಂಪನಿಯು ತನ್ನ ಇ-ಸ್ಕೂಟರ್ ಅನ್ನು ಸಿಂಪಲ್ ಒನ್ ಹೆಸರಿನಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ 1,09,999 ರೂ. (ಎಕ್ಸ್ ಶೋರೂಂ).

ಸಿಂಪಲ್‌ ಒನ್‌ ಸ್ಕೂಟರ್‌ ನೋಟ

ಕಂಪನಿಯು ಪ್ರಸ್ತುತ ಸ್ಕೂಟರ್ ಅನ್ನು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ದೆಹಲಿ, ಮಧ್ಯ ಪ್ರದೇಶ, ರಾಜಸ್ಥಾನ, ಗೋವಾ, ಉತ್ತರ ಪ್ರದೇಶ, ಗುಜರಾತ್ ಮತ್ತು ಪಂಜಾಬ್ ನಲ್ಲಿ ವಿತರಿಸುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ದೇಶದಾದ್ಯಂತ ಎಲ್ಲಾ ಪ್ರದೇಶಗಳಿಗೂ ತನ್ನ ಚಟುವಟಿಕೆಗಳನ್ನು ವಿಸ್ತರಿಸುವುದಾಗಿ ಸಿಂಪಲ್ ಎನರ್ಜಿ ಸಂಸ್ಥೆ ಹೇಳಿದೆ.

ಸಿಂಪಲ್‌ ಒನ್‌ ಎಲೆಕ್ಟ್ರಾನಿಕ್‌ ಸ್ಕೂಟರ್‌

ಕಂಪನಿಯು ಈಗಾಗಲೇ 1,947 ರೂ. ನೀಡಿ ಕಾಯ್ದಿರಿಸುವಿಕೆಯನ್ನು ಆರಂಭಿಸಿದೆ. ಫೇಮ್ 2 ಸಬ್ಸಿಡಿ ಯೋಜನೆಯಡಿ 60,000 ರೂ. ವರೆಗೆ ಸಬ್ಸಿಡಿ ಪಡೆಯಬಹುದು. ಎಲೆಕ್ಟ್ರಿಕ್ ವಾಹನಗಳಿಗೆ ವಿವಿಧ ರಾಜ್ಯಗಳು ನೀಡುವ ಸಬ್ಸಿಡಿಗಳೊಂದಿಗೆ ಈ ಸ್ಕೂಟರ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು.

ಇದನ್ನೂ ಓದಿ: ಹೀರೋ ಕಂಪನಿಯಿಂದ ಎರಡು ನೂತನ ಎಲೆಕ್ಟ್ರಿಕ್ ಸ್ಕೂಟರ್ಸ್​ ಬಿಡುಗಡೆ

ಸಿಂಪಲ್ ಒನ್ ಫೀಚರ್ಸ್..

  • ಎಲ್ಲಾ ನಾಲ್ಕು ಬರವಣಿಗೆ ವಿಧಾನಗಳು (ಎಕೋ, ರೈಡ್, ಡ್ಯಾಶ್, ಸೋನಿಕ್)
  • 7 ಇಂಚಿನ ಟಚ್ ಸ್ಕ್ರೀನ್ ಡಿಸ್ ಪ್ಲೇ
  • 30 ಲೀಟರ್ ಬೂಟ್ ಸ್ಪೇಸ್
  • ಬೂಟ್ ಸ್ಪೇಸ್
  • 4 ಜಿ ತಂತ್ರಜ್ಞಾನದ ಏಕೀಕರಣ
  • 4.8 ಕಿಲೋ ವ್ಯಾಟ್ಸ್‌ ಲಿಥಿಯಂ ಅಯಾನ್ ಬ್ಯಾಟರಿ
  • ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ 236 ಕಿ.ಮೀ ಪ್ರಯಾಣಿಸುತ್ತದೆ
  • ಇಕೋ ಮೋಡ್‌ನಲ್ಲಿ 203 ಕಿ.ಮೀ ಪ್ರಯಾಣಿಸುವ ಸಾಮರ್ಥ್ಯ
  • ಗರಿಷ್ಠ ವೇಗ ಗಂಟೆಗೆ 105 ಕಿಲೋ ಮೀಟರ್
  • ಕೇವಲ 3.6 ಸೆಕೆಂಡುಗಳಲ್ಲಿ 0-50 ಕಿಮೀ/ಗಂ ತಲುಪುತ್ತದೆ
  • ಸ್ಕೂಟರ್ ಬ್ಲೂಟೂತ್ ಸಂಪರ್ಕ, ಜಿಯೋ ಫೆನ್ಸಿಂಗ್, ಕರೆ ನಿಯಂತ್ರಣ, ಸ್ಮಾರ್ಟ್ಫೋನ್ ಸಂಪರ್ಕ, ಟೈರ್ ಒತ್ತಡದ ಮೇಲ್ವಿಚಾರಣೆಯಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ

ರಿಮೂವಬಲ್‌ ಬ್ಯಾಟರಿಯೊಂದಿಗೆ ಸ್ಕೂಟರ್ ಬರುತ್ತದೆ ಎಂದು ಕಂಪನಿ ಬಹಿರಂಗಪಡಿಸಿದೆ. ಇದನ್ನು 15A ಸಾಕೆಟ್ ಮೂಲಕ ಎಲ್ಲಿಯಾದರೂ ಚಾರ್ಜ್ ಮಾಡಬಹುದು. ಮುಂದಿನ ಏಳು ತಿಂಗಳಲ್ಲಿ 13 ರಾಜ್ಯಗಳಲ್ಲಿ 300 ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಹೇಳಿದೆ.

ಮನೆಯಲ್ಲೇ ಚಾರ್ಜಿಂಗ್‌ ಮಾಡಿಕೊಳ್ಳಬಹುದು

ತಮಿಳುನಾಡಿನ ಹೊಸೂರಿನಲ್ಲಿ ಎರಡು ಲಕ್ಷ ಚದರ ಅಡಿ ಕಾರ್ಖಾನೆಯನ್ನು ನಿರ್ಮಿಸುವುದಾಗಿ ಕಂಪನಿ ಹೇಳಿದೆ. ಮೊದಲ ಹಂತದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ 10 ಲಕ್ಷ ಯೂನಿಟ್‌ಗಳಿಗೆ ತಲುಪುವುದಾಗಿ ಕಂಪನಿ ಹೇಳಿದೆ.

ಇದನ್ನೂ ಓದಿ: ಓಲಾ ಇ-ಸ್ಕೂಟರ್ ಕಾರ್ಖಾನೆ ಮೊದಲ ಹಂತ ಪೂರ್ಣಗೊಳ್ಳುವ ಹಂತದಲ್ಲಿದೆ: ಸಿಇಒ ಭಾವೀಶ್ ಅಗರ್ವಾಲ್

ABOUT THE AUTHOR

...view details